»   » ಮೂರನೇ ಮಗು ನಿರೀಕ್ಷೆಯಲ್ಲಿ ಶಾರುಖ್ ದಂಪತಿ

ಮೂರನೇ ಮಗು ನಿರೀಕ್ಷೆಯಲ್ಲಿ ಶಾರುಖ್ ದಂಪತಿ

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ನಟ ಶಾರುಖ್ ಖಾನ್ ಸೈಲೆಂಟಾಗಿಯೇ ಕೆಲಸ ಮಾಡಿದ್ದಾರೆ. ಇಷ್ಟು ದಿನ ಗುಟ್ಟಾಗಿ ಕಾಪಾಡಿಕೊಂಡು ಬಂದಿದ್ದ ಸುದ್ದಿಯೊಂದು ಇದೀಗ ಬಹಿರಂಗವಾಗಿದೆ. ಅವರು ಇನ್ನೊಮ್ಮೆ ಅಪ್ಪನಾಗುತ್ತಿದ್ದಾರೆ. ಈ ಮೂಲಕ ಬಾಲಿವುಡ್ ಚಿತ್ರರಂಗದ ಟಾಪ್ ಸೀಕ್ರೆಟ್ ಒಂದು ಕಡೆಗೂ ಬಹಿರಂಗವಾಗಿದೆ.

ಈಗಾಗಲೆ ಶಾರುಖ್ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ. ಆರ್ಯನ್ ಗೆ 15 ವರ್ಷ ವಯಸ್ಸು, ಸುಹಾನಾಗೆ 13ರ ಪ್ರಾಯ. ಈಗ ಮೂರನೇ ಮಗುವಿನ ನಿರೀಕ್ಷೆಯಲ್ಲಿ ಶಾರುಖ್ ದಂಪತಿಗಳಿದ್ದಾರೆ. ಅಂದಹಾಗೆ ಮೂರನೇ ಮಗುವನ್ನು ಬಾಡಿಗೆ ತಾಯಿ ಮೂಲಕ ಶಾರುಖ್ ದಂಪತಿಗಳು ಪಡೆಯುತ್ತಿದ್ದಾರೆ.


ಈ ಸುದ್ದಿಯನ್ನು ಶಾರುಖ್ ಕೇವಲ ಆತ್ಮೀಯರೊಂದಿಗೆ ಮಾತ್ರ ಹಂಚಿಕೊಂಡಿದ್ದರಂತೆ. ಆದರೆ ಬಾಲಿವುಡ್ ನಲ್ಲಿ ಸುದ್ದಿ ಅದು ಹೇಗೋ ಏನೋ ಲೀಕ್ ಆಗಿದೆ. ಇನ್ನೊಂದು ವಿಶೇಷ ಎಂದರೆ ಈಗಾಗಲೆ ಮಗುವಿನ ಲಿಂಗವೂ ನಿರ್ಧಾರವಾಗಿರುವುದು. ಮೂಲಗಳ ಪ್ರಕಾರ ಗಂಡು ಮಗು ಎನ್ನಲಾಗಿದೆ.

ಶಾರುಖ್ ಅವರಿಗೇನು ಇನ್ನೊಂದು ಮಗು ಬೇಕು ಎನ್ನಿಸಿರಲಿಲ್ಲವಂತೆ. ಆದರೆ ಅವರ ಪತ್ನಿ ಗೌರಿಗೆ ಇನ್ನೊಂದು ಬೇಕು ಅನ್ನಿಸಿದ ಕಾರಣ ಈಗ ಮೂರನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಮೀರ್ ಖಾನ್ ಹಾಗೂ ಕಿರಣ್ ರಾವ್ ಭೇಟಿ ಮಾಡಿದ ವೈದ್ಯರನ್ನು ಶಾರುಖ್ ದಂಪತಿಗಳು ಭೇಟಿ ಮಾಡಿದ್ದಾರೆ. ಈ ಮೂಲಕ ಅವರಿಗೂ ಬಾಡಿಗೆ ತಾಯಿ ಮೂಲಕ ಮಗುವೊಂದು ಮಡಿಲು ಸೇರುತ್ತಿದೆ.

English summary
Bollywood sources says, actor Shahrukh Khan and Gowri apparently having a third child through surrogacy. The couple have two children Aryan (15) and Suhana (13).
Please Wait while comments are loading...