»   » ಹ್ಯಾಪಿ ನ್ಯೂ ಇಯರ್ 100 ಕೋಟಿ ಕ್ಲಬ್ಬಿಗೆ

ಹ್ಯಾಪಿ ನ್ಯೂ ಇಯರ್ 100 ಕೋಟಿ ಕ್ಲಬ್ಬಿಗೆ

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಕೇವಲ ಎರಡೂವರೆ ದಿನಗಳಲ್ಲೇ ಶಾರುಖ್ ಖಾನ್ ಅವರ ಹ್ಯಾಪಿ ನ್ಯೂ ಇಯರ್ ಚಿತ್ರ 100 ಕೋಟಿ ಗಳಿಕೆ ಕ್ಲಬ್ ಸೇರುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ. ಫರ್ಹಾಖಾನ್ ನಿರ್ದೇಶನದ ಈ ಚಿತ್ರ ಮೊದಲ ದಿನವೇ 44.97 ಕೋಟಿ ರೂ. ದಾಖಲೆ ವ್ಯವಹಾರ ಮಾಡಿ ಭರ್ಜರಿ ಓಪನಿಂಗ್ ಪಡೆದಿತ್ತು.

ಶಾರುಖ್ ದೀಪಿಕಾ ಜೋಡಿ ಬಿಟ್ಟರೆ ಚಿತ್ರದಲ್ಲಿ ಅಂಥದ್ದೇನಿಲ್ಲ ಎಂದು ವಿಮರ್ಶಕರು ಹೇಳಿದರೂ ಹುಚ್ಚೆದ್ದು ಕುಣಿಯುವಂತೆ ಮಾಡುವ ಹಾಡುಗಳು, ಅಭಿಷೇಕ್ ಬಚ್ಚನ್, ಸೋನು ಸೂದ್, ಬೋಮನ್ ಇರಾನಿ, ವಿವಾನ್ ಶಾ ಉತ್ತಮ ತಾರಾಗಣ ಹಾಗೂ ಅದ್ಭುತ ಮಾರ್ಕೆಟಿಂಗ್‌ ತಂತ್ರಗಳಿಂದ ದೀಪಾವಳಿ ಹಬ್ಬದ ನಂತರವೂ ಹ್ಯಾಪಿ ನ್ಯೂ ಇಯರ್ ತಂಡ ಹಬ್ಬದಾಚರಣೆ ಮುಂದುವರೆಸಿದ್ದಾರೆ. [ಶಾರುಖ್ 8 ಪ್ಯಾಕ್ ಆಬ್ಸ್ ವಿಡಿಯೋ]

2007ರ ಸೂಪರ್ ಹಿಟ್ ಚಿತ್ರ 'ಓಂ ಶಾಂತಿ ಓಂ' ಮತ್ತೆ ಶಾರುಖ್-ದೀಪಿಕಾ ಹಾಗೂ ಫರ್ಹಾ ಖಾನ್ ಜೋಡಿ ಒಂದಾಗಿದ್ದು,ಕಿಂಗ್ ​ ಖಾನ್​ ಶಾರುಖ್ 8 ಪ್ಯಾಕ್​ ಆಬ್ಸ್ ಬೆಳೆಸಿಕೊಂಡಿದ್ದು ಎಲ್ಲವೂ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ದೀಪಿಕಾ ನಟನೆಗಂತೂ ಪ್ರೇಕ್ಷಕ ಫಿದಾ ಆಗಿದ್ದಾನೆ.

ಹಿಂದಿಯಲ್ಲಷ್ಟೇ ಅಲ್ಲದೆ, ತೆಲುಗು, ತಮಿಳು ಭಾಷೆಗೆ ಡಬ್ ಆಗಿರುವ ಹ್ಯಾಪಿ ನ್ಯೂ ಇಯರ್ ಬೇರೆ ಭಾಷೆಗಳಲ್ಲೂ ಉತ್ತಮ ಗಳಿಕೆ ಪಡೆದುಕೊಂಡಿದೆ. ಒಟ್ಟಾರೆ ದೇಶಿ ಮಾರುಕಟ್ಟೆಯಲ್ಲಿ ಮೊದಲ ವೀಕೆಂಡ್ ನಲ್ಲಿ ಗಳಿಸಿದ ಮೊತ್ತದ ಸಮಗ್ರ ವಿವರ ನಿಮ್ಮ ಮುಂದಿದೆ.

ದೇಶಿ ಮಾರುಕಟ್ಟೆಯಲ್ಲಿ 100 ಕೋಟಿ ರು
  

ದೇಶಿ ಮಾರುಕಟ್ಟೆಯಲ್ಲಿ 100 ಕೋಟಿ ರು

ಬಿಡುಗಡೆಯಾದ ಮೊದಲ ಎರಡೂವರೆ ದಿನಗಳಲ್ಲಿ ಹ್ಯಾಪಿ ನ್ಯೂ ಇಯರ್ ಚಿತ್ರ 100 ಕೋಟಿ ರು ಗಳಿಕೆ ಮಾಡಿದೆ.
* ಹಿಂದಿಯಲ್ಲಿ 104.10 ಕೋಟಿ ರು
* ತೆಲುಗು : 2.92 ಕೋಟಿ ರು
* ತಮಿಳು : 1.84 ಕೋಟಿ ರು
ಒಟ್ಟಾರೆ : 108.86 ಕೋಟಿ ರು

ಮೊದಲ ವೀಕೇಂಡ್ ಗಳಿಕೆ ವಿವಿಧ ಭಾಷೆಗಳಲ್ಲಿ

ಮೊದಲ ವೀಕೇಂಡ್ ಗಳಿಕೆ ವಿವಿಧ ಭಾಷೆಗಳಲ್ಲಿ ಹೇಗಿತ್ತು ಎಂಬುದನ್ನು ಮಾರುಕಟ್ಟೆ ತಜ್ಞ ತರಣ್ ಆದರ್ಶ್ ನೀಡಿದ್ದು ಹೀಗೆ

ಶಾರುಖ್ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿಲ್ಲ
  

ಶಾರುಖ್ ಚಿತ್ರಕ್ಕೆ ಉತ್ತಮ ವಿಮರ್ಶೆ ಸಿಕ್ಕಿಲ್ಲ

ಶಾರುಖ್ ದೀಪಿಕಾ ಸೇರಿದಂತೆ ಬಹು ತಾರಾಗಣವಿರುವ ಈ ಚಿತ್ರಕ್ಕೆ ವಿಮರ್ಶಕರು ಬಹುಪರಾಕ್ ಹೇಳಿಲ್ಲ. ಅದರೆ, ಪ್ರೇಕ್ಷಕರು ಮಾತ್ರ ಚಿತ್ರವನ್ನು ಕೈಬಿಟ್ಟಿಲ್ಲ. ಮೊದಲ ದಿನದ ಗಳಿಕೆಗೆ ಹೋಲಿಸಿದರೆ ಎರಡನೇ ದಿನ ಸ್ವಲ್ಪ ಡಲ್ ಎನಿಸಿದರೂ ಚಿತ್ರ ಬಹುಬೇಗ 100 ಕೋಟಿ ಕ್ಲಬ್ ಸೇರಿದೆ.

ಮೊದಲ ದಿನದ ಗಳಿಕೆ ಬಗ್ಗೆ ತರಣ್ ಟ್ವೀಟ್

ಮೊದಲ ದಿನದ ಗಳಿಕೆ ಬಗ್ಗೆ ತರಣ್ ಟ್ವೀಟ್ ವಿವರಿಸಿದ್ದು ಹೀಗೆ

ಶಾರುಖ್ ಗೆ ಶಾರುಖ್ ಚಿತ್ರವೇ ಸಾಟಿ
  

ಶಾರುಖ್ ಗೆ ಶಾರುಖ್ ಚಿತ್ರವೇ ಸಾಟಿ

ಅಮೀರ್ ಖಾನ್ ಅವರ ಧೂಮ್ 3, ಶಾರುಖ್ ಅವರ ಚೆನ್ನೈ ಎಕ್ಸ್ ಪ್ರೆಸ್ ನಂತರ ಸ್ಥಾನದಲ್ಲಿ ಹ್ಯಾಪಿ ನ್ಯೂ ಇಯರ್ ಇದ್ದು, ಹೊಸ ದಾಖಲೆ ಬರೆಯುವ ಕುರುಹು ತೋರಿದೆ.

ವಿದೇಶಗಳಲ್ಲಿನ ಗಳಿಕೆ ವಿವರ ಸಿಕ್ಕಿಲ್ಲ
  

ವಿದೇಶಗಳಲ್ಲಿನ ಗಳಿಕೆ ವಿವರ ಸಿಕ್ಕಿಲ್ಲ

ಹ್ಯಾಪಿ ನ್ಯೂ ಇಯರ್ ಚಿತ್ರ ಒಟ್ಟಾರೆ 5000 ಚಿತ್ರಮಂದಿರಗಳಲ್ಲಿ ತೆರೆ ಕಂಡಿದ್ದು ವಿದೇಶಗಳಲ್ಲಿನ ಗಳಿಕೆ ವಿವರ ಸಿಕ್ಕಿಲ್ಲ. ಒಟ್ಟಾರೆ ಗಳಿಕೆ ಮೊತ್ತ ಸಿಕ್ಕ ಮೇಲೆ ಧೂಮ್ 3 ಹಾಗೂ ಚೆನ್ನೈ ಎಕ್ಸ್ ಪ್ರೆಸ್ ಗೆ ಸಾಟಿಯಾಗುವುದೋ ಇಲ್ಲವೋ ಎಂಬ ಲೆಕ್ಕಾಚಾರ ಸಿಗಲಿದೆ.

English summary
The movie Happy New Year starring Shahrukh Khan, Deepika Padukone among others has been rocking the Indian Box Office since its opening day. Thus, Happy New Year has entered the 100 crore club in just two and half days.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada