Don't Miss!
- News
ಫೆಬ್ರವರಿ 2023ರ ಮಾಸಭವಿಷ್ಯ: ಸಂಕ್ರಮಣದ ನಂತರದ ಫೆಬ್ರವರಿ ತಿಂಗಳಿನಲ್ಲಿ ಯಾವೆಲ್ಲ ರಾಶಿಗಳಿಗೆ ಶುಭವಾಗಲಿದೆ?
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕಾಶ್ಮೀರ ಪ್ರತ್ಯೇಕತಾವಾದಿಗಳ 'ಸಹವರ್ತಿ' ಜೊತೆಗೆ ಶಾರುಖ್ ಖಾನ್ ನಂಟು!
ಭೂಗತ ಜಗತ್ತಿಗೂ ಬಾಲಿವುಡ್‌ಗೂ ಇರುವ ನಂಟಿನದ್ದು ಹಳೆಯ ಕತೆ. ಆದರೆ ಭಯೋತ್ಪಾದಕರ ಜೊತೆಗೂ ಬಾಲಿವುಡ್‌ಗೂ ನಂಟಿದೆಯೇ ಎಂಬ ಪ್ರಶ್ನೆ ಇದೀಗ ಉದ್ಭವವಾಗಿದೆ.
Recommended Video
ಶಾರುಖ್ ಖಾನ್ ಪಾಕಿಸ್ತಾನಕ್ಕೆ ಹಣ ರವಾನೆ ಮಾಡಿದ್ದಾರೆ ಎಂಬ ಸುಳ್ಳು ಪೋಸ್ಟ್‌ಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತವೆ. ಶಾರುಖ್ ಖಾನ್, ಭಯೋತ್ಪಾದಕರಿಗೆ ಸಹಾಯ ಮಾಡುವ ವ್ಯಕ್ತಿಯೊಂದಿಗೆ ವ್ಯವಹಾರ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಹೋರಾಟಗಾರ್ತಿ ಆರ್ತಿ ಟಿಕೂ ಸಿಂಗ್ ಮತ್ತು ಬಿಜೆಪಿ ಈ ಆರೋಪ ಮಾಡಿದೆ.
ಸುಶಾಂತ್
ಸಿಂಗ್‌ಗೆ
ಅವಮಾನ
ಮಾಡಿದ್ದ
ಶಾರುಖ್
ಖಾನ್:
ವಿಡಿಯೋ
ವೈರಲ್
ಕಾಶ್ಮೀರ ಪ್ರತ್ಯೇಕತವಾದಿಗಳಿಗೆ, ಭಯೋತ್ಪಾದಕರಿಗೆ ಹಣ ಸಹಾಯ ಮಾಡುವ, ಕಾಶ್ಮೀರ ಪ್ರತ್ಯೇಕತವಾದಿಗಳ ಬಗ್ಗೆ ಮೃದು ಧೋರಣೆ ಹೊಂದಿರುವ ವ್ಯಕ್ತಿಗಳೊಂದಿಗೆ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಹಣಕಾಸು ವ್ಯವಹಾರ ಹೊಂದಿರುವುದಾಗಿ ಆರೋಪಿಸಲಾಗಿದೆ.

ಕಾಶ್ಮೀರ ಪ್ರತ್ಯೇಕತವಾದಿಗಳಿಗೆ ಅಶೈ ಹಣಕಾಸು ನೆರವು
ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಆರ್ಥಿಕ ನೆರವು ನೀಡುತ್ತಿರು ಆರೋಪ ಹೊಂದಿರುವ ಹಾಗೂ ಆಗಾಗ್ಗೆ ಕಾಶ್ಮೀರದ ಬಗ್ಗೆ ಉದ್ರೇಕಕಾರಿ ಹೇಳಿಕೆ ನೀಡುವ ಟೋನಿ ಅಶೈ ಜೊತೆಗೆ ಶಾರುಖ್ ಖಾನ್ ಹಾಗೂ ಗೌರಿ ಖಾನ್ ಹಣಕಾಸು ವ್ಯವಹಾರ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ.

ಅಶೈ ಜೊತೆ ಹಣಕಾಸು ವ್ಯವಹಾರ
ಅಮೆರಿಕದಲ್ಲಿ ನೆಲೆಸಿರುವ ಟೋನಿ ಅಶೈ ಆರ್ಟಿಟೆಕ್ಟ್ ಆಗಿದ್ದು ಆತನೊಂದಿಗೆ ಪಾಲುದಾರಿಕೆ ವ್ಯವಹಾರವನ್ನು ಶಾರುಖ್ ಖಾನ್ ಹಾಗೂ ಗೌರಿ ಖಾನ್ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಗೌರಿ ಖಾನ್ ಸಹ ಆರ್ಕಿಟೆಕ್ಟ್ ಆಗಿದ್ದು, ಶಾರುಖ್ ಅವರ ಬಹುತೇಕ ಕಟ್ಟಡಗಳ ವಿನ್ಯಾಸ ಮಾಡಿರುವುದು ಟೋನಿ ಅಶೈ ಎನ್ನಲಾಗಿದೆ.
ಶಾರುಖ್-ಸಲ್ಮಾನ್
ಜಗಳ:
ಕತ್ರಿನಾ
ಕೈಫ್
ಬಾಯ್ಬಿಟ್ಟ
ಸತ್ಯ

ಅಶಿ ಜೊತೆಗಿರುವ ಚಿತ್ರಗಳು ಹರಿದಾಡುತ್ತಿವೆ
ಅಶೈ ಹಾಗು ಶಾರುಖ್ ಖಾನ್ ಹಾಗೂ ಗೌರಿ ಖಾನ್ ಜೊತೆಯಲ್ಲಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕಾಶ್ಮೀರದಲ್ಲಿಯೇ ಹುಟ್ಟಿರುವ ಅಶೈ, ಸಾಮಾಜಿಕ ಜಾಲತಾಣ ಮೂಲಕ ಕಾಶ್ಮೀರ ಪ್ರತ್ಯೇಕವಾದಿಗಳ ಪರ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಪ್ರತ್ಯೇಕವಾದಿಗಳಿಗೆ ಹಣ ಸಹಾಯ ಮಾಡಿರುವ ಆರೋಪವೂ ಅವರ ಮೇಲಿದೆ.
ಸತ್ತ
ತಾಯಿಯನ್ನು
ಎಬ್ಬಿಸುತ್ತಿದ್ದ
ಪುಟ್ಟ
ಕಂದಮ್ಮನ
ಕೈ
ಹಿಡಿದ
ಶಾರುಖ್
ಖಾನ್

ರೆಹಾನಾ ಸಿದ್ಧಿಕಿಗಿದೆ ಬಾಲಿವುಡ್ ನಂಟು
ಹೂಸ್ಟನ್‌ನಲ್ಲಿ ನೆಲೆಸಿರುವ ಪಾಕಿಸ್ತಾನದ ರೆಹಾನಾ ಸಿದ್ಧಿಕಿ ಅಲ್ಲಿಯೇ ಒಂದು ರೆಡಿಯೋ ಸ್ಟೇಷನ್ ಹೊಂದಿದ್ದು, ಅದರ ಮೂಲಕ ಭಾರತ ವಿರೋಧಿ ಪ್ರಚಾರ ಮಾಡುತ್ತಿದ್ದಾರೆ. ಈತ ಬಾಲಿವುಡ್‌ನ ಹಲವು ಸೆಲೆಬ್ರಿಟಿಗಳನ್ನು ಹೂಸ್ಟನ್ ಹಾಗೂ ಇನ್ನಿತರೆ ಕಡೆಗಳಿಗೆ ಕರೆಸಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದಾರಂತೆ. ಭಾರತ ಗೃಹ ಇಲಾಖೆಯು ರೆಹಾನಾ ಸಿದ್ಧಿಕಿಯನ್ನು ಬ್ಲಾಕ್‌ಲಿಸ್ಟ್‌ಗೆ ಹಾಕಿದೆ.
ಕೊರೊನಾ
ಎದುರಿಸಲು
ನಾಲ್ಕಂತಸ್ತಿನ
ಕಟ್ಟಡವನ್ನೇ
ಬಿಟ್ಟುಕೊಟ್ಟ
ಶಾರುಖ್
ಖಾನ್