For Quick Alerts
  ALLOW NOTIFICATIONS  
  For Daily Alerts

  ಎರಡು ವರ್ಷದ ಬಳಿಕ ಹೊಸ ಸಿನಿಮಾ ಘೋಷಿಸಿದ ಶಾರುಖ್ ಖಾನ್

  |

  ಬಾಲಿವುಡ್‌ನ ಬಾದ್‌ಶಾ ಶಾರುಖ್ ಖಾನ್ ಇತ್ತೀಚೆಗೆ ಏಕೋ ತಮ್ಮ ಹೊಳಪು ಕಳೆದುಕೊಂಡಿದ್ದಾರೆ. ಸಾಲು-ಸಾಲು ಸೋಲು ಕಂಡ ಬಳಿಕ ಸ್ವತಃ ಶಾರುಖ್ ಖಾನ್ ಸತತ ಎರಡು ವರ್ಷ ಸಿನಿಮಾದಿಂದ ಬಿಡುವು ಪಡೆದಿದ್ದರು. ಆದರೆ ಈಗ ಮತ್ತೆ ಮರಳಿ ಬರುತ್ತಿದ್ದಾರೆ.

  ಶಾರುಖ್ ಖಾನ್ ನಾಯಕರಾಗಿ ನಟಿಸಿದ್ದ ಕೊನೆಯ ಸಿನಿಮಾ 'ಜೀರೋ' ಬಿಡುಗಡೆ ಆಗಿದ್ದು 2018 ರಲ್ಲಿ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಹೀನಾಯ ಸೋಲು ಕಂಡಿತು. ಆ ನಂತರ ಶಾರುಖ್ ಅವರ ಯಾವುದೇ ಸಿನಿಮಾ ಸೆಟ್ಟೇರಿರಲಿಲ್ಲ.

  ಕಂಗನಾ ಮೊದಲಲ್ಲ, ಬಿಎಂಸಿ ಇಂದ ಮನೆ-ಕಚೇರಿ ಕಳೆದುಕೊಂಡ ಸೆಲೆಬ್ರಿಟಿಗಳು ಇವರುಕಂಗನಾ ಮೊದಲಲ್ಲ, ಬಿಎಂಸಿ ಇಂದ ಮನೆ-ಕಚೇರಿ ಕಳೆದುಕೊಂಡ ಸೆಲೆಬ್ರಿಟಿಗಳು ಇವರು

  ಹೊಸ ಸಿನಿಮಾವೊಂದರಲ್ಲಿ ಶಾರುಖ್ ಖಾನ್ ನಟಿಸುತ್ತಿದ್ದು ಈ ಸಿನಿಮಾವನ್ನು ಯಶ್ ರಾಜ್ ಫಿಲಮ್ಸ್‌ ನಿರ್ಮಿಸುತ್ತಿದೆ. ಸಿನಿಮಾಕ್ಕೆ 'ಪಠಾಣ್' ಎಂದು ಹೆಸರಿಡಲಾಗಿದೆ.

  ಯಶ್‌ರಾಜ್ ಬ್ಯಾನರ್ಸ್‌ ಮೂಲಕ ಸಿನಿಮಾ

  ಯಶ್‌ರಾಜ್ ಬ್ಯಾನರ್ಸ್‌ ಮೂಲಕ ಸಿನಿಮಾ

  ಶಾರುಖ್ ರ ಹೊಸ ಸಿನಿಮಾ 'ಪಠಾಣ್' ಅನ್ನು ಸಿದ್ಧಾರ್ಥ್ ಆನಂದ್ ನಿರ್ದೇಶಿಸಲಿದ್ದಾರೆ. ಸಿನಿಮಾದಲ್ಲಿ ನಟ ಜಾನ್ ಅಬ್ರಹಾಂ ಸಹ ಇರಲಿದ್ದು, ಇದೊಂದು ಪಕ್ಕಾ ಆಕ್ಷನ್ ಸಿನಿಮಾ ಆಗಿರಲಿದೆ. ಸಿದ್ಧಾರ್ಥ್ ಆನಂದ್ ಆಕ್ಷನ್ ಸಿನಿಮಾಗಳಿಗೇ ಖ್ಯಾತರು.

  ಜಾನ್ ಅಬ್ರಹಾಂ ಖಳನಾಯಕ ಪಾತ್ರ

  ಜಾನ್ ಅಬ್ರಹಾಂ ಖಳನಾಯಕ ಪಾತ್ರ

  ಸಿನಿಮಾದಲ್ಲಿ ಜಾನ್ ಅಬ್ರಹಾಂ ಖಳನಾಯಕ ಪಾತ್ರವನ್ನು ನಿರ್ವಹಿಸಲಿದ್ದಾರೆ. ಸಿನಿಮಾದ ಚಿತ್ರೀಕರಣ 2021 ರ ಜನವರಿಗೆ ಪ್ರಾರಂಭವಾಗುವ ಸಾಧ್ಯತೆ ಇದೆ. 2021 ರ ಅಂತ್ಯಕ್ಕೆ ಬಿಡುಗಡೆ ಆಗುವ ನಿರೀಕ್ಷೆ ಇದೆ. ಅಲ್ಲಿಗೆ ಮೂರು ವರ್ಷದ ಬಳಿಕ ಶಾರುಖ್ ಸಿನಿಮಾ ತೆರೆಗೆ ಬರಲಿದೆ.

  ಕೊನೆಯ ಸಿನಿಮಾದಲ್ಲಿ ಐವರಿಗೆ ಗೌರವ ಸಲ್ಲಿಸಿ ಹೋದ ಸುಶಾಂತ್, ಯಾರವರು?ಕೊನೆಯ ಸಿನಿಮಾದಲ್ಲಿ ಐವರಿಗೆ ಗೌರವ ಸಲ್ಲಿಸಿ ಹೋದ ಸುಶಾಂತ್, ಯಾರವರು?

  ಸತತ ಸೋಲು ಕಂಡ ಶಾರುಖ್ ಖಾನ್

  ಸತತ ಸೋಲು ಕಂಡ ಶಾರುಖ್ ಖಾನ್

  ಬಾಲಿವುಡ್‌ನ ಉಳಿದಿಬ್ಬರು ಖಾನ್‌ಗಳಾದ ಸಲ್ಮಾನ್ ಹಾಗೂ ಆಮಿರ್ ಹಿಟ್ ಮೇಲೆ ಹಿಟ್ ನೀಡುತ್ತಿದ್ದಾರೆ. ಆದರೆ ಶಾರುಖ್ ಖಾನ್ ಮಾತ್ರ ಸತತ ಸೋಲಿನ ಸುಳಿಯಲ್ಲಿಯೇ ಇದ್ದಾರೆ. 'ಜೀರೋ', 'ಹ್ಯಾರಿ ಮೆಟ್ ಸೇಜಲ್' ಸೋಲುಕಂಡಿದ್ದವು. ಮಧ್ಯದಲ್ಲಿ ಡಿಯರ್ ಜಿಂದಗಿ ಸಾಧಾರಣ ಹಿಟ್ ಆಯಿತಾದರೂ ಅದಕ್ಕೆ ಹಿಂದೆ ನಿರ್ಮಿಸಿದ್ದ ಫ್ಯಾನ್, ದೀವಾನಾ ಸಿನಿಮಾಗಳು ನೆಲಕಚ್ಚಿದ್ದವು.

  ಪತ್ನಿ Revathi ಕಾಲೆಳೆದ Nikhil Kumaraswamy | Oneindia Kannada
  ತಮಿಳು ನಿರ್ದೇಶಕನ ಜೊತೆಗೆ ಶಾರುಖ್ ಸಿನಿಮಾ

  ತಮಿಳು ನಿರ್ದೇಶಕನ ಜೊತೆಗೆ ಶಾರುಖ್ ಸಿನಿಮಾ

  ತಮಿಳು ಸಿನಿ ಉದ್ಯಮದ ಖ್ಯಾತ ನಿರ್ದೇಶಕ ಅಟ್ಟಿಲ್ ಜೊತೆಗೆ ಶಾರುಖ್ ಖಾನ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಅಟ್ಟಿಲಿ, ಶಾರುಖ್‌ ಗೆ ಕತೆ ಹೇಳಿದ್ದು, ಶಾರುಖ್ ಕತೆ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಸಿನಿಮಾಕ್ಕೆ ದೀಪಿಕಾ ಪಡುಕೋಣೆ ನಾಯಕಿ ಆಗಿರಲಿದ್ದಾರಂತೆ.

  ಸುಶಾಂತ್ ಸಿಂಗ್‌ಗೆ ಅವಮಾನ ಮಾಡಿದ್ದ ಶಾರುಖ್ ಖಾನ್: ವಿಡಿಯೋ ವೈರಲ್ಸುಶಾಂತ್ ಸಿಂಗ್‌ಗೆ ಅವಮಾನ ಮಾಡಿದ್ದ ಶಾರುಖ್ ಖಾನ್: ವಿಡಿಯೋ ವೈರಲ್

  English summary
  Sharukh Khan acting in new movie after two years of gap. Movie name is Pathan. John Abraham is the villain of the movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X