For Quick Alerts
  ALLOW NOTIFICATIONS  
  For Daily Alerts

  ಪತಿಯ ಬ್ಲೂ ಫಿಲ್ಮ್ ದಂಧೆ ಪ್ರಕರಣದ ನಡುವೆಯೂ ಶಿಲ್ಪಾ ಶೆಟ್ಟಿ ಸಂಭ್ರಮ; ಮನೆಗೆ ಗಣಪನನ್ನು ಕರೆತಂದ ನಟಿ

  |

  ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಇತ್ತೀಚಿಗೆ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು. ಪತಿ, ಉದ್ಯಮಿ ರಾಜ್ ಕುಂದ್ರ ಬ್ಲೂ ಫಿಲ್ಮ್ ದಂಧೆ ಪ್ರಕರಣ ಸಂಬಂಧ ನಟಿ ಶಿಲ್ಪಾ ಶೆಟ್ಟಿ ಹೆಸರು ಸಿಕ್ಕಾಪಟ್ಟೆ ಚರ್ಚೆಯಾಗುತ್ತಿತ್ತು. ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ರಾಜ್ ಕುಂದ್ರ ಜೈಲು ಸೇರಿದ ಬಳಿಕ ಶಿಲ್ಪಾ ಶೆಟ್ಟಿ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು. ಪತಿಯ ದಂಧೆಯಿಂದ ಶಿಲ್ಪಾ ಶೆಟ್ಟಿ ಮುಜುಗರ ಅನುಭವಿಸುವಂತಾಗಿತ್ತು. ಸುಮಾರು ಒಂದು ತಿಂಗಳ ಕಾಲ ಶಿಲ್ಪಾ ಶೆಟ್ಟಿ ಮನೆಯಿಂದ ಹೊರಬಂದಿರಲಿಲ್ಲ.

  ಸಾಮಾಜಿಕ ಜಾಲತಾಣಗಳಲ್ಲೂ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಬಳಿಕ ಶಿಲ್ಪಾ ಖಾಸಗಿತನಕ್ಕೆ ಗೌರವ ಕೊಡುವಂತೆ ಹೇಳಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿದ್ದರು. ಬಳಿಕ ಕೆಲವು ದಿನಗಳ ನಂತರ ಶಿಲ್ಪಾ ಶೆಟ್ಟಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು. ಕಿರುತರೆ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದ ಶಿಲ್ಪಾ ಶೆಟ್ಟಿ ಪತಿಯ ಬಂಧನದ ಬಳಿಕ ಕಿರುತೆರೆಯಿಂದ ದೂರ ಸರಿದಿದ್ದರು. ಬಳಿಕ ಕೆಲವು ದಿನಗಳ ನಂತರ ಮತ್ತೆ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಳ್ಳುವ ಮೂಲಕ ಪ್ರೇಕ್ಷಕರ ಮುಂದೆ ಬಂದರು.

  ಅಶ್ಲೀಲ ವಿಡಿಯೋ ಪ್ರಕರಣ: ನಟಿ ಗೆಹನಾ ವಸಿಷ್ಠ್ ಜಾಮೀನು ಅರ್ಜಿ ವಜಾಅಶ್ಲೀಲ ವಿಡಿಯೋ ಪ್ರಕರಣ: ನಟಿ ಗೆಹನಾ ವಸಿಷ್ಠ್ ಜಾಮೀನು ಅರ್ಜಿ ವಜಾ

  ಇದೀಗ ಶಿಲ್ಪಾ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ಪತಿಯ ಪ್ರಕರಣ ನಡುವೆಯೂ ಶಿಲ್ಪಾ ಶೆಟ್ಟಿ ಗಣಪತಿ ಹಬ್ಬದ ಸಂಭ್ರಮದಲ್ಲಿದ್ದಾರೆ. ಅಂದಹಾಗೆ ನಟಿ ಶಿಲ್ಪಾ ಶೆಟ್ಟಿ ಗಣಪತಿ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಈಗಾಗಲೇ ದೇಶದಲ್ಲಿ ಗಣಪತಿ ಹಬ್ಬದ ಸಂಭ್ರಮಕ್ಕೆ ಸಜ್ಜಾಗುತ್ತಿದ್ದಾರೆ. ಕೊರೊನಾ ನಡುವೆಯೂ ಗಣಪತಿ ಹಬ್ಬ ಆಚರಣೆ ಮಾಡಲು ದೇಶದ ಜನತೆ ಕಾಯುತ್ತಿದ್ದಾರೆ. ಹಬ್ಬಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ನಟಿ ಶಿಲ್ಪಾ ಶೆಟ್ಟಿ ಮನೆಗೆ ಗಣಪನನ್ನು ಕರೆತಂದಿದ್ದಾರೆ.

  ತನ್ನ ಕಾರಿನಲ್ಲಿ ಗಣಪತಿಯನ್ನು ಮನೆಗೆ ತರುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಶಿಲ್ಪಾ ಶೆಟ್ಟಿ ಗಣೇಶನನ್ನು ಹರ್ಷದಿಂದ ಮನೆಗೆ ಕರೆದುಕೊಂಡು ಹೋಗಿದ್ದಾರೆ. ತನ್ನ ತಂಡದ ಜೊತೆ ಶಿಲ್ಪಾ ಶೆಟ್ಟಿ ಗಣೇಶನನ್ನು ಮನೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಈ ವೇಳೆ ಕ್ಯಾಮರಾ ಕಡೆ ನೋಡಿ ನಗು ಬೀರಿದ್ದಾರೆ.

  ರಾಜ್ ಕುಂದ್ರ ಅಶ್ಲೀಲ ವಿಡಿಯೋ ದಂಧೆ: ತಪ್ಪೊಪ್ಪಿಕೊಳ್ಳುವಂತೆ ಶಿಲ್ಪಾ ಶೆಟ್ಟಿಗೆ ಶೆರ್ಲಿನ್ ಒತ್ತಾಯರಾಜ್ ಕುಂದ್ರ ಅಶ್ಲೀಲ ವಿಡಿಯೋ ದಂಧೆ: ತಪ್ಪೊಪ್ಪಿಕೊಳ್ಳುವಂತೆ ಶಿಲ್ಪಾ ಶೆಟ್ಟಿಗೆ ಶೆರ್ಲಿನ್ ಒತ್ತಾಯ

  ಅಂದಹಾಗೆ ನಟಿ ಶಿಲ್ಪಾ ಶೆಟ್ಟಿ ಪ್ರತಿವರ್ಷ ಗಣೇಶ ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ. ಮನೆಗೆ ಗಣೇಶನನ್ನು ಕರೆತಂದು ಸಂಭ್ರಮದಿಂದ ಹಬ್ಬ ಆಚರಣೆ ಮಾಡುತ್ತಾರೆ. ಈ ವರ್ಷ ಕೂಡ ಶಿಲ್ಪಾ ಸಂಭ್ರಮಕ್ಕೆ ಬ್ರೇಕ್ ಬಿದ್ದಿಲ್ಲ. ಈಗಾಗಲೇ ಮನೆಗೆ ಗಣೇಶನನ್ನು ಕರೆತಂದಿದ್ದಾರೆ. ಶಿಲ್ಪಾ ಶೆಟ್ಟಿ ಮನೆಯ ಗಣೇಶ ಸಂಭ್ರಮಕ್ಕೆ ಬಾಲಿವುಡ್‌ನ ಅನೇಕ ಗಣ್ಯರು ಭಾಗಿಯಾಗುತ್ತಾರೆ. ಗಣೇಶನ ದರ್ಶನ ಮಾಡಿ, ಸಂಭ್ರಮಿಸುತ್ತಾರೆ.

  ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ವಿರುದ್ಧ 40 ಲಕ್ಷ ಹಣ ವಂಚನೆ ಆರೋಪರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ವಿರುದ್ಧ 40 ಲಕ್ಷ ಹಣ ವಂಚನೆ ಆರೋಪ

  ಇನ್ನು ನಟಿ ಶಿಲ್ಪಾ ಸದ್ಯ ಪತಿ ರಾಜ್ ಕುಂದ್ರ ಪ್ರಕರಣದಿಂದ ನಿಧಾನವಾಗಿ ಸಹಜ ಜೀವನಕ್ಕೆ ಮರಳುತ್ತಿದ್ದಾರೆ. ಶಿಲ್ಪಾ ಶೆಟ್ಟಿ ಸದ್ಯ ಪತಿಯಿಂದ ದೂರ ಇರುವ ನಿರ್ಧಾರ ಮಾಡಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಇಬ್ಬರು ಮಕ್ಕಳನ್ನು ಸಹ ಪತಿ ರಾಜ್ ಕುಂದ್ರ ಅವರಿಂದ ದೂರ ಇರಿಸಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು. ಆದರೆ ಈ ಬಗ್ಗೆ ಶಿಲ್ಪಾ ಶೆಟ್ಟಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಈ ಬಾರಿ ನಡೆಯುವ ಗಣೇಶ ಉತ್ಸವದಲ್ಲಿ ಪತಿ ರಾಜ್ ಕುಂದ್ರ ಸಹ ಶಿಲ್ಪಾ ಶೆಟ್ಟಿ ಜೊತೆಯಲ್ಲಿ ಇರುತ್ತಾರಾ ಎನ್ನುವುದು ಕುತೂಹಲ ಮೂಡಿಸಿದೆ.

  English summary
  Bollywood Actress Shilpa Shetty brings Ganpati to home ahead of Ganesh Chaturthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X