»   » ಬಾಲಿವುಡ್ ಗೆ ಚಂದ್ರ ಚಕೋರಿ ಶ್ರೀಯಾ ಸರನ್

ಬಾಲಿವುಡ್ ಗೆ ಚಂದ್ರ ಚಕೋರಿ ಶ್ರೀಯಾ ಸರನ್

Posted By:
Subscribe to Filmibeat Kannada

ರೂಪಾ ಅಯ್ಯರ್ ಅವರ 'ಚಂದ್ರ' ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿರುವ ಮಾದಕ ಬೆಡಗಿ ಶ್ರೀಯಾ ಸರನ್ ಅವರು ಈಗ ಬಾಲಿವುಡ್ ಗೆ ಹಿಂತಿರುಗುತ್ತಿದ್ದಾರೆ. ಸಾಕಷ್ಟು ಗ್ಯಾಪ್ ಬಳಿಕ ಅವರು ಬಾಲಿವುಡ್ ಚಿತ್ರರಂಗಕ್ಕೆ ಅಡಿಯಿಡುತ್ತಿರುವುದು ವಿಶೇಷ.

ಜಿಮ್ಮಿ ಶೇರ್ ಗಿಲ್ ಜೊತೆಗಿನ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಅವರು ಅಭಿನಯಿಸಲಿದ್ದಾರೆ. ಕರಣ್ ಭೂತಾನಿ ನಿರ್ದೆಶಿಸುತ್ತಿರುವ ಚಿತ್ರ ಇದಾಗಿದೆ. ಚಿತ್ರದ ಶೀರ್ಷಿಕೆಯೂ ವಿಭಿನ್ನವಾಗಿದೆ. ಅದೇನೆಂದರೆ 'ವಾಲ್ಮೀಕಿ ಕಿ ಬಂದೂಕ್' ಎಂಬುದು.


ಈ ಹಿಂದೆ ಶ್ರೀಯಾ ಸರನ್ ಅವರು ಮಿಷನ್ ಇಸ್ತಾಂಬುಲ್, ಏಕ್ ದ ಪವರ್ ಆಫ್ ಒನ್ ಹಾಗೂ ಗಲಿ ಗಲಿ ಮೇ ಚೋರ್ ಹೈ ಚಿತ್ರಗಳಲ್ಲಿ ಅಭಿನಯಿಸಿದ್ದರು. ಏತನ್ಮಧ್ಯೆ ತೆಲುಗಿನಲ್ಲಿ ಶ್ರೀಯಾ ಅಭಿನಯಿಸುತ್ತಿರುವ 'ಪವಿತ್ರಾ' ಚಿತ್ರವೂ ಭಾರಿ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಇನ್ನು ಲವ್ಲಿ ಸ್ಟಾರ್ ಪ್ರೇಮ್ ಕುಮಾರ್ ಜೊತೆಗಿನ ಚಂದ್ರ ಚಿತ್ರದ ವಿಷಯಕ್ಕೆ ಬರುವುದಾದರೆ...ಈ ಚಿತ್ರದ ಮೇ ತಿಂಗಳಾಂತ್ಯಕ್ಕೆ ತೆರೆಕಾಣುವ ಸಾಧ್ಯತೆಗಳಿವೆ. ಚುನಾವಣೆ ಬಳಿಕ ಚಿತ್ರವನ್ನು ಬಿಡುಗಡೆ ಮಾಡಲಿರುವುದಾಗಿ ಚಿತ್ರದ ನಿರ್ದೇಶಕಿ ರೂಪಾ ಅಯ್ಯರ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

English summary
After a long gap southern beauty Shriya Saran back to Bollywood. She play a lead role opposite Jimmy Shergil. The film is going to be directed by Karan Bhutani and it has been titled as Valmiki Ki Bandook.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada