For Quick Alerts
  ALLOW NOTIFICATIONS  
  For Daily Alerts

  ಮದುವೆ ತಯಾರಿಯಲ್ಲಿದ್ದ ಸಿದ್ಧಾರ್ಥ್ ಮತ್ತು ಶೆಹನಾಜ್: ಡಿಸೆಂಬರ್ ನಲ್ಲಿ ಫಿಕ್ಸ್ ಆಗಿತ್ತು ವಿವಾಹ?

  |

  ಹಿಂದಿ ಕಿರುತೆರೆ ಲೋಕದ ಖ್ಯಾತ ನಟ, ಬಿಗ್ ಬಾಸ್ ವಿನ್ನರ್ ಸಿದ್ಧಾರ್ಥ್ ಶುಕ್ಲಾ ಹಠಾತ್ ನಿಧನ ಅವರ ಸ್ನೇಹಿತರಿಗೆ, ಅಭಿಮಾನಿಗಳಿಗೆ ಶಾಕ್ ನೀಡಿದೆ. ಸೆಪ್ಟಂಬರ್ 2 ಹೃದಯಾಘಾತದಿಂದ ಸಾವನ್ನಪ್ಪಿದ ನಟ ಸಿದ್ಧಾರ್ಥ್ ಶುಕ್ಲಾ ಇನ್ನು ನೆನಪು ಮಾತ್ರ. ಸಿದ್ಧಾರ್ಥ್ ಸಾವಿನಿಂದ ಪ್ರೇಯಸಿ ಶೆಹನಾಜ್ ಗಿಲ್ ಕಂಗೆಟ್ಟಿದ್ದಾರೆ. ತನ್ನ ಮಡಿಲಲ್ಲೇ ಸಿದ್ಧಾರ್ಥ್ ಪ್ರಾಣ ಬಿಟ್ಟಿರುವುದನ್ನು ಶೆಹನಾಜ್ ಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಪ್ರಾಣಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ ಗೆಳೆಯ ಸಿದ್ಧಾರ್ಥ್ ನನ್ನು ಕಳೆದುಕೊಂಡು ಶೆಹನಾಜ್ ಸಂಪೂರ್ಣವಾಗಿ ಕುಸಿದುಹೋಗಿದ್ದಾರೆ.

  ಇದೀಗ ಕೇಳಿಬರುತ್ತಿರುವ ಮಾಹಿತಿ ಸಿದ್ಧಾರ್ಥ್ ಮತ್ತು ಶೆಹನಾಜ್ ಇಬ್ಬರು ಮದುವೆ ಪ್ಲಾನ್ ಮಾಡಿದ್ದರಂತೆ. ಈಗಾಗಲೇ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದು, ಮದುವೆ ತಯಾರಿಯಲ್ಲಿದ್ದರು ಎನ್ನಲಾಗುತ್ತಿದೆ. ಮದುವೆ ಸಂಭ್ರಮದ ಖುಷಿಯಲ್ಲಿದ್ದರು ಎನ್ನಲಾಗುತ್ತಿದೆ. ಕೆಲವು ಮೂಲಗಳ ಪ್ರಕಾರ ಆಗಲೇ ಇಬ್ಬರೂ ಮದುವೆಗಾಗಿ ಹೋಟೆಲ್ ಅನ್ನು ಸಹ ಕಾಯ್ದಿರಿಸಿದ್ದರು ಎನ್ನುವ ಮಾಹಿತಿ ಕೇಳಿಬರುತ್ತಿದೆ.

  ಇದನ್ನು ಶೆಹನಾಜ್ ಮತ್ತು ಸಿದ್ಧಾರ್ಥ್ ಇಬ್ಬರ ಸ್ನೇಹಿತರು, ಕುಟುಂಬದರು ಗೌಪ್ಯವಾಗಿ ಇಟ್ಟಿದ್ದರು ಎನ್ನಲಾಗುತ್ತಿದೆ. ಅಂದಹಾಗೆ ಈ ಜೋಡಿ ಡಿಸೆಂಬರ್ ತಿಂಗಳಲ್ಲಿ ಮದುವೆಯಾಗಲು ತಯಾರಿ ನಡೆಸಿದ್ದರಂತೆ. ಆದರೆ ಅಷ್ಟರಲ್ಲೇ ವಿಧಿ ಇವರ ಜೀವನದಲ್ಲಿ ಆಟವಾಡಿದೆ. ತನ್ನ ಕನಸು ನನಸಾಗುವ ಮೊದಲೇ, ಪ್ರೀತಿಸಿದ ಯುವತಿ ಜೊತೆ ಜೀವನ ನಡೆಸುವ ಮೊದಲೇ ಸಿದ್ಧಾರ್ಥ್ ಬಾರದ ಲೋಕಕ್ಕೆ ಹೊರಟು ಹೋದರು.

  ಪ್ರೀತಿಯ ಸಿದ್ಧಾರ್ಥ್ ನನ್ನು ಕಳೆದುಕೊಂಡ ಶೆಹನಾಜ್ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಶೆಹನಾಜ್ ಪರಿಸ್ಥಿತಿ ನೋಡಿ ನೆಟ್ಟಿಗರು ಮರುಕ ವ್ಯಕ್ತಪಡಿಸುತ್ತಿದ್ದಾರೆ. ಸಿದ್ಧಾರ್ಥ್ ಅಂತಿಮ ವಿಧಿವಿಧಾನದ ವೇಳೆ ಶೆಹನಾಜ್ ಬಿಕ್ಕಳಿಸಿ ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಿದ್ಧಾರ್ಥ್ ನಿವಾಸದಿಂದ ಪಾರ್ಥಿವ ಶರೀರ ಹೊರಡುವಾಗ ಮನೆಯಿಂದ ಹೊರ ಬಂದ ಶೆಹನಾಜ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಜೋರಾಗಿ ಅಳುತ್ತಿರುವ ಶೆಹನಾಜ್ ನನ್ನು ಸಹೋದರ ಜೊತೆಯಲ್ಲಿ ಇದ್ದು ಸಮಾಧಾನ ಪಡಿಸುತ್ತಿದ್ದರು.

  ಸದ್ಧಾರ್ಥ್ ಕೊನೆಯ ಕ್ಷಣದಲ್ಲಿ ಶೆಹನಾಜ್ ಸಂಸ್ಕಾರ ನಡೆದ ಜಾಗದಲ್ಲಿ ಮಲಗಿದ್ದ ಫೋಟೋ ವೈರಲ್ ಆಗಿತ್ತು. ಬಿಕ್ಕಿ ಬಿಕ್ಕಿ ಅಳುತ್ತಿರುವ ಶೆಹನಾಜ್ ಸ್ಥಿತಿ ನೋಡಿ ನೆಟ್ಟಿಗರು ಭಾವುಕರಾಗಿದ್ದರು. ಸಿದ್ಧಾರ್ಥ್ ಸಾವಿನ ದುಃಖ ಭರಿಸುವ ಶಕ್ತಿ ಆ ದೇವರು ನೀಡಲಿ ಎಂದು ಕೇಳಿಕೊಳ್ಳುತ್ತಿದ್ದಾರೆ. ಕಿರುತೆರೆಯಲ್ಲಿ ಮೆರೆದು, ಬಿಗ್ ಬಾಸ್ 13 ಗೆದ್ದು ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದ ಸಿದ್ಧಾರ್ಥ್ ಇನ್ನು ನೆನಪು ಮಾತ್ರ. ಸಿದ್ಧಾರ್ಥ್ ನನ್ನು ಕಳೆದುಕೊಂಡು ಶೆಹನಾಜ್ ಒಂಟಿಯಾಗಿದ್ದಾರೆ.

  ಸಿದ್ಧಾರ್ಥ್ ಮತ್ತು ಶೆಹನಾಜ್ ಸ್ನೇಹ ಪ್ರಾರಂಭವಾಗಿದ್ದು ಬಿಗ್ ಬಾಸ್ 13 ಶೋನಿಂದ. ಬಿಗ್ ಬಾಸ್ ಇಬ್ಬರ ಕೆಮಿಸ್ಟ್ರಿ ಪ್ರೇಕ್ಷಕರಿಗೆ ತುಂಬಾ ಇಷ್ಟವಾಗಿತ್ತು. ಪ್ರಾರಂಭದಲ್ಲಿ ಇಬ್ಬರು ಸ್ನೇಹಿತರರಾಗಿದ್ದರು, ಬಳಿಕ ಒಬ್ಬರಿಗೊಬ್ಬರು ಪ್ರೀತಿಸಲು ಪ್ರಾರಂಭಿಸಿದ್ದರು. ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ಅಭಿಮಾನಿಗಳು ಈ ಜೋಡಿಯನ್ನು ಸಿದ್ನಾಜ್ ಎಂದೇ ಕರೆಯುತ್ತಿದ್ದರು. ಆದರೀಗ ಸಿದ್ಧ್ ಇಲ್ಲಿದೆ ಶೆಹನಾಜ್ ಏಕಾಂಗಿಯಾಗಿದ್ದಾರೆ.

  English summary
  Actor Sidharth shukla and Shehnaaz gill planning to get married in December.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X