»   » ಗಾಯಕ ಕಿಶೋರ್ ಕುಮಾರ್ ಹುಟ್ಟುಹಬ್ಬದ ಸ್ಪೆಷಲ್: 10 ಹಿಟ್ ಹಾಡುಗಳು

ಗಾಯಕ ಕಿಶೋರ್ ಕುಮಾರ್ ಹುಟ್ಟುಹಬ್ಬದ ಸ್ಪೆಷಲ್: 10 ಹಿಟ್ ಹಾಡುಗಳು

Posted By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಚಿತ್ರರಂಗ ಲೋಕದ ಸಂಗೀತ ದಿಗ್ಗಜ, ಗಾನ ಗಂಧರ್ವ ಕಿಶೋರ್ ಕುಮಾರ್ ಅವರಿಗೆ ಇಂದು (ಆಗಸ್ಟ್ 4) 87ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ. ಅಂದಹಾಗೆ ಸಂಗೀತ ಲೋಕದಲ್ಲಿ ಅಸಾಮಾನ್ಯ ಸಾಧನೆ ಮಾಡಿರುವ ಕಿಶೋರ್ ಕುಮಾರ್ ಅವರು 'ಆಡು ಮುಟ್ಟದ ಸೊಪ್ಪಿಲ್ಲ' ಎನ್ನುವಂತೆ ಎಲ್ಲಾ ಕ್ಷೇತ್ರಗಳಲ್ಲೂ ಸೈ ಎನಿಸಿಕೊಂಡಿದ್ದಾರೆ.

ಬೆಂಗಾಲಿ ಗಂಗೂಲಿ ಫ್ಯಾಮಿಲಿಯಲ್ಲಿ ಜನಿಸಿದ ಕಿಶೋರ್ ಕುಮಾರ್ ಅವರು ನಟರಾಗಿ, ಗೀತರಚನೆಕಾರರಾಗಿ, ಮ್ಯೂಸಿಕ್ ಕಂಪೋಸರ್, ನಿರ್ಮಾಪಕ-ನಿರ್ದೇಶಕ ಹಾಗೂ ಸಂಕಲನಕಾರರಾಗಿ ಕೂಡ ದುಡಿದಿದ್ದಾರೆ. ಇಂತಹ ಅಪರೂಪದ ಅದ್ಭುತ ಪ್ರತಿಭೆ ಬಾಲಿವುಡ್ ನಲ್ಲಿ ಖ್ಯಾತಿ ಗಳಿಸಿದ್ದು ಮಾತ್ರ ಗಾಯಕರಾಗಿ.[ಅಪ್ರತಿಮ ಗಾಯಕ ಕಿಶೋರ್ ಕುಮಾರ್ ನೆನಪು]

ಆಗಸ್ಟ್ 4, 1929ರಂದು ಜನಿಸಿದ ಕಿಶೋರ್ ಕುಮಾರ್ ಅವರು ಅಕ್ಟೋಬರ್ 13, 1987ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಆದರೆ ಅವರು ಇಂದು ನಮ್ಮ ಜೊತೆ ಇಲ್ಲವಾದರೂ, ಅವರ ಸಂಗೀತ, ಅವರ ಧ್ವನಿ ಮಾತ್ರ ಇಂದಿಗೂ ಅಮರವಾಗಿದೆ. ಜೊತೆಗೆ ಎಲ್ಲರ ಬಾಯಲ್ಲೂ ಅವರ ಹಾಡುಗಳೇ ನಲಿದಾಡುತ್ತಿವೆ.

ಬರೀ ಹಿಂದಿ ಭಾಷೆಯಲ್ಲಿ ಮಾತ್ರವಲ್ಲದೇ, ಕನ್ನಡ, ಬೆಂಗಾಲಿ, ಮರಾಠಿ, ಅಸ್ಸಾಮಿ, ಗುಜರಾತ್, ಭೋಜ್ ಪುರಿ, ಮಲಯಾಳಂ ಮತ್ತು ಉರ್ದು ಮುಂತಾದ ಭಾಷೆಗಳಿಗೆ ಲೆಜೆಂಡರಿ ಗಾಯಕ ಕಿಶೋರ್ ಕುಮಾರ್ ಅವರು ಧ್ವನಿ ನೀಡಿದ್ದಾರೆ.

ಅದ್ರಲ್ಲೂ ಕನ್ನಡದ 'ಕುಳ್ಳ ಏಜೆಂಟ್ 000' ಚಿತ್ರದ 'ಆಡು ಆಟ ಆಡು, ನೀ ಆಡು ಆಡು ಆಡಿ ನೋಡು'... ಅನ್ನೋ ಹಾಡು ಮಾತ್ರ ಇಂದಿಗೂ ಎಲ್ಲರ ಬಾಯಲ್ಲಿ ಓಡಾಡುತ್ತದೆ.

8 ಫಿಲ್ಮ್ ಫೇರ್ ಪ್ರಶಸ್ತಿ, 'ಲತಾ ಮಂಗೇಷ್ಕರ್ ಪ್ರಶಸ್ತಿ' ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡಿರುವ ಅಪ್ರತಿಮ ಕಲಾವಿದ ಕಿಶೋರ್ ಕುಮಾರ್ ಅವರ ಹುಟ್ಟುಹಬ್ಬದ ಪರವಾಗಿ ಅವರು ಹಾಡಿರುವ ಅದ್ಭುತ ರೋಮ್ಯಾಂಟಿಕ್ ಮತ್ತು ಪ್ಯಾಥೋ ಹಾಡುಗಳ ಕಲೆಕ್ಷನ್ಸ್ ನಿಮಗಾಗಿ, ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....

ಅಣ್ಣನ ಮೂಲಕ ಸಿನಿಮಾ ಪ್ರಪಂಚಕ್ಕೆ

ಅಸಾಮಾನ್ಯ ಕಲೆಗಾರ ಕಿಶೋರ್ ಕುಮಾರ್ ಅವರು ಸಿನಿಮಾ ಕ್ಷೇತ್ರಕ್ಕೆ ಪರಿಚಯವಾಗಿದ್ದು, ಅವರ ಸಹೋದರ ಅಶೋಕ್ ಕುಮಾರ್ ಅವರಿಂದ. ಅವರು ಮೊದಲ ಬಾರಿಗೆ ಹಾಡಿದ್ದು, 1948ರಲ್ಲಿ ತೆರೆಕಂಡ 'ಜಿದ್ದಿ' ಚಿತ್ರಕ್ಕೆ.[ಅಪ್ರತಿಮ ಕಲೆಗಾರ ಕಿಶೋರ್ ಕೊಂಡಾಡಿದ ಟ್ವೀಟ್ ಲೋಕ]

'ಕನ್ನಡದ ಆಡು ಆಟ ಆಡು'

ಕನ್ನಡ ನಟ ಕಮ್ ನಿರ್ಮಾಪಕ ದ್ವಾರಕೀಶ್ ಅವರ ಅಭಿನಯದ 'ಕುಳ್ಳ ಏಜೆಂಟ್ 000' ಚಿತ್ರದ 'ಆಡು ಆಟ ಆಡು, ನೀ ಆಡು ಆಡು ಆಡಿ ನೋಡು' ಹಾಡು ಈಗಲೂ ಸಖತ್ ಫೇಮಸ್ ಆಗಿದೆ. ಹಾಡು ನೋಡಲು ಈ ಲಿಂಕ್ ಕ್ಲಿಕ್ಕಿಸಿ......

'ಜಿಂದಗಿ ಕೀ ಸಫರ್ ಮೆ'

'ಆಪ್ ಕೀ ಕಸಮ್' ಚಿತ್ರದ 'ಜಿಂದಗಿ ಕೀ ಸಫರ್ ಮೆ' ಎಂಬ ಪ್ಯಾಥೋ ಹಾಡು ಸಾಕಷ್ಟು ಖ್ಯಾತಿ ಗಳಿಸಿದ್ದು ಮಾತ್ರವಲ್ಲದೇ, ಈ ಹಾಡು ಕೇಳಿದವರ ಕಣ್ಣಲ್ಲಿ ನೀರು ಬರೋದು ಗ್ಯಾರೆಂಟಿ. ಪ್ಯಾಥೋ ಹಾಡು ಇಲ್ಲಿದೆ ನೋಡಿ...

'ಓ ಹನ್ಸಿನಿ, ಮೇರೆ ಹನ್ಸಿನಿ'

'ಝಹೆರೀಲಾ ಇನ್ಸಾನ್' ಚಿತ್ರದ 'ಓ ಹನ್ಸಿನಿ, ಮೇರೆ ಹನ್ಸಿನಿ' ಎಂಬ ರೋಮ್ಯಾಂಟಿಕ್ ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದ್ದು, ಮತ್ತೆ-ಮತ್ತೆ ಕೇಳಬೇಕೆನ್ನಿಸುತ್ತದೆ. ಹಾಡು ಇಲ್ಲಿದೆ ನೋಡಿ...

'ರೂಪ್ ತೇರಾ ಮಸ್ತನಾ'

ಹಿಂದಿನ ಕಾಲದಲ್ಲಿ ಹಾಗೂ ಈಗಲೂ ಯಾರ ಬಾಯಲ್ಲಿ ಕೇಳಿದರೂ ಒಂದೇ ಹಾಡು. 'ರೂಪ್ ತೇರಾ ಮಸ್ತನಾ' ಅಂತ. ಭಾರಿ ಖ್ಯಾತಿ ಪಡೆದ ಈ ಹಾಡನ್ನು ಕಿಶೋರ್ ಕುಮಾರ್ ಸಖತ್ ಆಗಿ ಹಾಡಿದ್ದಾರೆ. 'ಆರಾಧನಾ' ಚಿತ್ರದ ರೋಮ್ಯಾಂಟಿಕ್ ಹಾಡಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ..

'ತೆರೆ ಬಿನಾ ಜಿಂದಗಿ ಸೆ ಕೋಯಿ'

1975 ರಲ್ಲಿ ತೆರೆಕಂಡ ''ಆಂಧಿ'' ಚಿತ್ರದ 'ತೆರೆ ಬಿನಾ ಜಿಂದಗಿ ಸೆ ಕೋಯಿ' ಎಂಬ ಪ್ಯಾಥೋ ಹಾಡನ್ನು ಕಿಶೋರ್ ಕುಮಾರ್ ಮತ್ತು ಲತಾ ಮಂಗೇಷ್ಕರ್ ಅವರು ಹಾಡಿದ್ದಾರೆ. ತುಂಬಾ ಕಾಡುವ ಹಾಡಿನ ಲಿಂಕ್ ಇಲ್ಲಿದೆ ನೋಡಿ....

'ಮೇರಿ ಭೀಗಿ ಭೀಗಿ ಸಿ'

'ಅನಾಮಿಕ' ಚಿತ್ರದ ಕಿಶೋರ್ ಕುಮಾರ್ ಅವರು ಹಾಡಿರುವ 'ಮೇರಿ ಭೀಗಿ ಭೀಗಿ ಸಿ' ಎಂಬ ಶೋಕ ಗೀತೆ ಮನ ಮಿಡಿಯುವಂತಿದೆ. ಹಾಡು ಇಲ್ಲಿದೆ ನೋಡಿ...

'ಬಡಿ ಸುನಿ ಸುನಿ ಹೈ'

ಅಮಿತಾಭ್ ಬಚ್ಚನ್ ಅವರ 'ಮಿಲಿ' ಚಿತ್ರದ 'ಬಡಿ ಸುನಿ ಸುನಿ ಹೈ' ಎಂಬ ಪ್ಯಾಥೋ ಹಾಡನ್ನು ಕಿಶೋರ್ ಅವರು ಹಾಡಿದ್ದಾರೆ. ಹಾಡಿಗಾಗಿ ಈ ಲಿಂಕ್ ಕ್ಲಿಕ್ಕಿಸಿ..

'ಕೋರ ಕಾಗಜ್ ಥ, ಏ ಮನ್ ಮೇರಾ'

'ಆರಾಧನಾ' ಚಿತ್ರದ ಈ ರೋಮ್ಯಾಂಟಿಕ್ ಹಾಡನ್ನು ಕಿಶೋರ್ ಕುಮಾರ್ ಅವರು ಹಾಡಿದ್ದು, ಚಿತ್ರದಲ್ಲಿ ಹಿಟ್ ಜೋಡಿಗಳಾದ ರಾಜೇಶ್ ಖನ್ನಾ ಮತ್ತು ಶರ್ಮಿಳಾ ಟಾಗೋರ್ ಕಾಣಿಸಿಕೊಂಡಿದ್ದರು. ಹಾಡು ಇಲ್ಲಿದೆ ನೋಡಿ..

'ಆದ್ಮಿ ಜೋ ಕೆಹತಾ ಹೈ'

ಅಮಿತಾಭ್ ಬಚ್ಚನ್ ಅವರ 'ಮಜ್ಮೂರ್' ಚಿತ್ರದ 'ಆದ್ಮಿ ಜೋ ಕೆಹತಾ ಹೈ' ಹಾಡನ್ನು ಕಿಶೋರ್ ಕುಮಾರ್ ತುಂಬಾ ಚೆನ್ನಾಗಿ ಹಾಡಿದ್ದಾರೆ. ಹಾಡಿಗಾಗಿ ಈ ಲಿಂಕ್ ಕ್ಲಿಕ್ಕಿಸಿ.....

'ಮೇರಿ ಸಪ್ನೊಂಕಿ ರಾಣಿ'

'ಆರಾಧನಾ' ಚಿತ್ರದ 'ಮೇರಿ ಸಪ್ನೊಂಕಿ ರಾಣಿ' ಎಂಬ ರೋಮ್ಯಾಂಟಿಕ್ ಉಗಿಬಂಡಿ ಹಾಡನ್ನು ಸೊಗಸಾಗಿ ಹಾಡಿದ್ದು, ಅದ್ಭುತ ಗಾಯಕ ಕಿಶೋರ್ ಕುಮಾರ್. ಭಾರಿ ಫೇಮಸ್ ಆದ ಹಾಡು ಈಗಲೂ ಎಲ್ಲರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಹಾಡು ಇಲ್ಲಿದೆ ನೋಡಿ...

English summary
Kishore Kumar was born on August 4th, 1929 and today (August 4th) we are celebrating his 87th birthday. He was a popular Indian film playback singer, actor, lyricist, composer, producer, director, screenplay writer and scriptwriter.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada