For Quick Alerts
  ALLOW NOTIFICATIONS  
  For Daily Alerts

  ಮಾಧ್ಯಮದವರು ನನಗೆ ಬಹಳ ಕಾಟ ಕೊಟ್ಟರು: ಮಲ್ಲಿಕಾ ಶೆರಾವತ್

  |

  ಬಾಲಿವುಡ್‌ನಲ್ಲಿ ಬೋಲ್ಡ್ ದೃಶ್ಯಗಳನ್ನು ಸಾಮಾನ್ಯಗೊಳಿಸಿದ ಶ್ರೇಯ ಮಲ್ಲಿಕಾ ಶೆರಾವತ್‌ಗೆ ಸಲ್ಲಬೇಕು. ಮಲ್ಲಿಕಾ ಶೆರಾವತ್‌ಗೆ ಮುನ್ನ ನಟಿಯರು ಆಗೊಮ್ಮೆ-ಈಗೊಮ್ಮೆ ಅಷ್ಟೆ ಬೋಲ್ಡ್, ಹಾಟ್ ಆಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಮಲ್ಲಿಕಾ ನಟಿಸಿದ ಪ್ರತಿ ಸಿನಿಮಾದಲ್ಲಿಯೂ ಹಾಟ್, ಬೋಲ್ಡ್ ಆಗಿ ಕಾಣಿಸಿಕೊಂಡು ನಾಯಕಿಯರು ಗ್ಲಾಮರಸ್‌ ಆಗಿ ತೆರೆ ಮೇಲೆ ಕಾಣಿಸಿಕೊಳ್ಳುವ ಹೊಸ ಪದ್ಧತಿ ಆರಂಭ ಮಾಡಿದರು.

  ಮಲ್ಲಿಕಾ ಶೆರಾವತ್‌ ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿದಾಗ ಆಕೆಗೆ ಕೆಲವರು ಬಹಳ ಕಾಟ ಕೊಟ್ಟರಂತೆ. ಆ ಬಗ್ಗೆ ಇತ್ತೀಚಿನ ಸಂದರ್ಶನವೊಂದರಲ್ಲಿ ಮಲ್ಲಿಕಾ ಶೆರಾವತ್ ಹೇಳಿಕೊಂಡಿದ್ದಾರೆ.

  ನಾನು ನಟಿಸುತ್ತಿದ್ದ ಸಮಯದಲ್ಲಿ ಕೆಲವು ಮಾಧ್ಯಮದವರು ನನಗೆ ಬಹಳ ಕಾಟ ಕೊಟ್ಟರು. ಅದರಲ್ಲೂ ಮಹಿಳಾ ಪತ್ರಕರ್ತರು ನನ್ನ ವಿರುದ್ಧ ಬಹಳ ಟೀಕೆ ಮಾಡಿದರು. ''ಈಕೆ ತೆರೆ ಮೇಲೆ ಲಿಪ್‌ಲಾಕ್ ಮಾಡುತ್ತಾಳೆ'', ''ಈಕೆ ಮರ್ಯಾದೆಗೆಟ್ಟ ಹೆಂಗಸು'', ''ಈಕೆಗೆ ಸಂಪ್ರದಾಯ, ಸಂಸ್ಕಾರಗಳು ಗೊತ್ತಿಲ್ಲ'', ''ಈಕೆಯ ಸಿನಿಮಾ ನೋಡಿದರೆ ಯುವಕರು ಹಾಳಾಗುತ್ತಾರೆ'' ಹೀಗೆ ಏನೇನೊ ಬರೆದರು. ಇದೇ ಕಾರಣಕ್ಕೆ ಮನನೊಂದು ನಾನು ವಿದೇಶಕ್ಕೆ ಹೋಗಿದ್ದೆ'' ಎಂದಿದ್ದಾರೆ ಮಲ್ಲಿಕಾ ಶೆರಾವತ್.

  ಆದರೆ ಪುರುಷ ಮಾಧ್ಯಮದವರು ನನ್ನ ಬಗ್ಗೆ ಕೆಟ್ಟದಾಗೇನೂ ಬರೆಯಲಿಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಬರೆದಿದ್ದು ಮಹಿಳಾ ಜರ್ನಲಿಸ್ಟ್‌ಗಳೇ. ನಾನು ನಟಿಸಲು ಆರಂಭಿಸಿದ ಸಂದರ್ಭದಲ್ಲಿ ಗ್ಲಾಮರಸ್‌ ಆಗಿ ಕಾಣಿಸಿಕೊಳ್ಳುವುದನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಈಗ ಅದು ಸಾಮಾನ್ಯ ಎಂಬಂತಾಗಿದೆ. ಮುಕ್ತ ಮನಸ್ಸಿನಿಂದ ಸ್ವೀಕರಿಸುತ್ತಿದ್ದಾರೆ'' ಎಂದಿದ್ದಾರೆ ಮಲ್ಲಿಕಾ ಶೆರಾವತ್.

  ''ಒಬ್ಬ ಮಾಧ್ಯಮದವರಂತೂ ನನ್ನನ್ನು ಪಾರ್ನ್ ಸ್ಟಾರ್ ಎಂದೇ ಬರೆದಿದ್ದರು. ಅವರ ಹೆಸರು ಹೇಳಲು ನನಗೆ ಇಷ್ಟವಿಲ್ಲ. ನನಗೆ ಪಾರ್ನ್ ಉದ್ಯಮದಲ್ಲಿರುವವರ ಬಗ್ಗೆ ಬೇಸರವಿಲ್ಲ. ಆದರೆ ನಾನು ಆ ಉದ್ಯಮಕ್ಕೆ ಸೇರಿದವಳಾಗಿರಲಿಲ್ಲ. ಆದರೂ ನನ್ನನ್ನು ಅಪಮಾನ ಮಾಡಬೇಕೆಂಬ ಉದ್ದೇಶದಿಂದ ಹಾಗೆ ಬರೆಯಲಾಗಿತ್ತು.

  ಬಾಲಿವುಡ್‌ನಲ್ಲಿ ಬೇಡಿಕೆಯಲ್ಲಿದ್ದಾಗಲೇ ವಿದೇಶಕ್ಕೆ ತೆರಳಿದ ಮಲ್ಲಿಕಾ ಶೆರಾವತ್ ಅಲ್ಲಿಯೂ ಕೆಲವು ಸಿನಿಮಾಗಳಲ್ಲಿ ನಟಿಸಿದರು. ಆ ನಂತರ ಇದೀಗ ಮತ್ತೆ ಮರಳಿರುವ ಮಲ್ಲಿಕಾ ಶೆರಾವತ್, 'ನಕಾಬ್' ಹೆಸರಿನ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ಸಿನಿಮಾವನ್ನು ಸೋಮಿಕ್ ಸೇನ್ ನಿರ್ದೇಶನ ಮಾಡುತ್ತಿದ್ದಾರೆ.

  ''ಒಬ್ಬ ಜನಪ್ರಿಯ ನಟನ ಸಾವಾಗುತ್ತದೆ. ಅದು ಆತ್ಮಹತ್ಯೆಯೊ, ಕೊಲೆಯೊ ಎಂಬ ಅನುಮಾನ ಎಲ್ಲರನ್ನೂ ಕಾಡಲು ಆರಂಭಿಸುತ್ತದೆ. ಸಿನಿಮಾ ರಂಗದಲ್ಲಿ ಅನೈಸರ್ಗಿಕ ಸಾವುಗಳು ಆಗುತ್ತಲೇ ಇವೆ. ಅದೇ ವಿಷಯಗಳನ್ನು ತೆಗೆದುಕೊಂಡು ವೆಬ್ ಸರಣಿ ಮಾಡಲಾಗಿದೆ. ನಟರ ಜೀವನ, ಸಾಮಾಜಿಕ ಜಾಲತಾಣದ ಪ್ರಭಾವವನ್ನು ತೋರಿಸಲಾಗಿದೆ'' ಎಂದಿದ್ದಾರೆ ಮಲ್ಲಿಕಾ ಶೆರಾವತ್.

  English summary
  Some media people harassed me, some media people called me as porn star said actress Mallika Sherawat.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X