For Quick Alerts
  ALLOW NOTIFICATIONS  
  For Daily Alerts

  ಟ್ರೋಲ್ ಸಹಿಸಲಾಗದೆ ಟ್ವಿಟ್ಟರ್ ಖಾತೆ ಡಿಲೀಟ್ ಮಾಡಿದ ಸೋನಾಕ್ಷಿ ಸಿನ್ಹಾ

  By Avani Malnad
  |

  ಒಂದೆಡೆ ಸುಶಾಂತ್ ಸಿಂಗ್ ರಜಪೂತ್ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿದ್ದರೆ, ಇನ್ನೊಂದೆಡೆ ಅನೇಕ ನಟ-ನಟಿಯರ ವಿರುದ್ಧ ಸಿನಿಮಾ ಅಭಿಮಾನಿಗಳು ವಾಗ್ದಾಳಿ ನಡೆಸುತ್ತಿದ್ದಾರೆ. ಅಷ್ಟೇ ಅಲ್ಲ, ಬಾಲಿವುಡ್‌ನ ಸ್ವಜನಪಕ್ಷಪಾತದ ವಿರುದ್ಧ ಕಿಡಿಕಾರುತ್ತಿರುವ ಅವರು, ಸ್ಟಾರ್‌ಗಳ ಮಕ್ಕಳ ಸಾಮಾಜಿಕ ಜಾಲತಾಣದ ಖಾತೆಗಳನ್ನು ಅನ್ ಫಾಲೋ ಮಾಡಲು ಆರಂಭಿಸಿದ್ದಾರೆ.

  ಸುಶಾಂತ್ ಸಾವು ಅವರನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದ ಕಂಗನ | Kangana Ranaut | Oneindia Kannada

  ಈ ನಡುವೆ ನಟಿ ಸೋನಾಕ್ಷಿ ಸಿನ್ಹಾ ತಮ್ಮ ಟ್ವಿಟ್ಟರ್ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ತಮ್ಮ ಮಾನಸಿಕ ಶಾಂತಿಗಾಗಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಅವರು ಹೇಳಿಕೊಂಡಿದ್ದಾರೆ. ಇನ್‌ಸ್ಟಾಗ್ರಾಂಲ್ಲಿ ಅದನ್ನು ಖುಷಿಯಿಂದ ಹೇಳಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಅವರ ಖಾತೆಯ ಮೇಲೆ ಅನೇಕರು ಮುಗಿಬಿದ್ದಿದ್ದರು. ಇದರಿಂದ ರೋಸೆತ್ತು ಅವರು ಅಲ್ಲಿಂದ ಪಲಾಯನ ಮಾಡಿದ್ದಾರೆ. ಇನ್‌ಸ್ಟಾಗ್ರಾಂ ಖಾತೆಯಲ್ಲಿ ಕಾಮೆಂಟ್‌ಗಳನ್ನು ಪೋಸ್ಟ್ ಮಾಡದಂತೆ ನಿರ್ಬಂಧಿಸಿದ್ದಾರೆ. ಮುಂದೆ ಓದಿ...

  ಬೆಂಕಿ ಉರಿಯಲಿ ನನಗೇನು?

  ಬೆಂಕಿ ಉರಿಯಲಿ ನನಗೇನು?

  ಟ್ವಿಟ್ಟರ್‌ನಲ್ಲಿ ಕೊನೆಯ ಪೋಸ್ಟ್ ಹಾಕಿದ್ದ ಸೋನಾಕ್ಷಿ, ಕೆಲವೇ ನಿಮಿಷಗಳಲ್ಲಿ ಖಾತೆಯನ್ನು ಡಿಲೀಟ್ ಮಾಡಿದ್ದಾರೆ. ತಾವು ಬರೆದ ಪೋಸ್ಟ್‌ನ ಸ್ಕ್ರೀನ್ ಶಾಟ್ ಅನ್ನು ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡಿದ್ದಾರೆ. 'ಬೆಂಕಿ ಉರಿದರೆ ಉರಿದುಕೊಳ್ಳಲಿ, ತಾನು ಆರಾಮಾಗಿ ಇರುತ್ತೇನೆ' ಎಂದು ಅದಕ್ಕೆ ಕ್ಯಾಪ್ಷನ್ ಹಾಕಿದ್ದಾರೆ.

  'ಅವರ ಕೈಗಳಲ್ಲಿ ರಕ್ತ ಅಂಟಿಕೊಂಡಿದೆ, ನಾನು ಯಾವ ಮಟ್ಟದ ಹೋರಾಟಕ್ಕೂ ಸಿದ್ಧ': ಕಂಗನಾ'ಅವರ ಕೈಗಳಲ್ಲಿ ರಕ್ತ ಅಂಟಿಕೊಂಡಿದೆ, ನಾನು ಯಾವ ಮಟ್ಟದ ಹೋರಾಟಕ್ಕೂ ಸಿದ್ಧ': ಕಂಗನಾ

  ನಕಾರಾತ್ಮಕತೆ ತುಂಬಿದೆ

  ನಕಾರಾತ್ಮಕತೆ ತುಂಬಿದೆ

  'ನಕಾರಾತ್ಮಕತೆಯಿಂದ ನಿಮ್ಮ ಮಾನಸಿಕ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಮೊದಲ ಹೆಜ್ಜೆ ಇದು. ಈ ದಿನಗಳಲ್ಲಿ ಟ್ವಿಟ್ಟರ್‌ಗಿಂತ ಹೆಚ್ಚು ಬೇರೆ ಎಲ್ಲೂ ಇರಲು ಸಾಧ್ಯವಿಲ್ಲ. ನಾನು ನನ್ನ ಖಾತೆಯನ್ನು ಡಿಯಾಕ್ಟಿವೇಟ್ ಮಾಡುತ್ತಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

  ಅವಾರ್ಡ್ ಫಂಕ್ಷನ್‌ಗಳಲ್ಲಿ ಕಡೆಗಣನೆ: ಬಾಲಿವುಡ್ ಲಾಬಿ ವಿರುದ್ಧ ಕಿಡಿಕಾರಿದ ಅಭಯ್ ಡಿಯೋಲ್ಅವಾರ್ಡ್ ಫಂಕ್ಷನ್‌ಗಳಲ್ಲಿ ಕಡೆಗಣನೆ: ಬಾಲಿವುಡ್ ಲಾಬಿ ವಿರುದ್ಧ ಕಿಡಿಕಾರಿದ ಅಭಯ್ ಡಿಯೋಲ್

  ಟ್ರೋಲ್ ಆಗಿದ್ದ ಸೋನಾಕ್ಷಿ

  ಟ್ರೋಲ್ ಆಗಿದ್ದ ಸೋನಾಕ್ಷಿ

  ಕಳೆದ ವರ್ಷ ಕೌನ್ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ 'ರಾಮಾಯಣ' ಕುರಿತಾದ ಪ್ರಶ್ನೆಗೆ ಉತ್ತರ ನೀಡಲು ಸೋನಾಕ್ಷಿ ವಿಫಲರಾಗಿದ್ದರು. ಆದರೆ ತಿಂಗಳುಗಳು ಕಳೆದರೂ ಜನರು ಅವರನ್ನು ಟ್ರೋಲ್ ಮಾಡುವುದು ಬಿಟ್ಟಿರಲಿಲ್ಲ. 'ಒಂದು ಪ್ರಾಮಾಣಿಕ ಪ್ರಮಾದಕ್ಕೆ ಐದಾರು ತಿಂಗಳು ಆದರೂ ಜನರು ನನ್ನನ್ನು ಟ್ರೋಲ್ ಮಾಡುವುದನ್ನು ಕಂಡಾಗ ನೋವಾಗುತ್ತದೆ' ಎಂದು ಸೋನಾಕ್ಷಿ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.

  ಬಾಲಿವುಡ್ ಕೂಡ ತೊರೆಯಲಿ

  ಬಾಲಿವುಡ್ ಕೂಡ ತೊರೆಯಲಿ

  ಜನರ ಹಣದಿಂದ ಬೆಳೆದವರು, ಜನರ ಪ್ರಶ್ನೆಗಳಿಗೆ ಉತ್ತರ ನೀಡುವುದು ಹೊಣೆಗಾರಿಕೆ. ಇವರನ್ನು ಮೆಚ್ಚಿಕೊಂಡಿದ್ದು ಇದೇ ಸಾಮಾಜಿಕ ಜಾಲತಾಣದ ಜನರು. ಈಗ ಅವರನ್ನೇ ದೂಷಿಸುವುದು ಸರಿಯಲ್ಲ. ಈಗಿನ ಸಂದರ್ಭದಲ್ಲಿ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿರುವುದರಿಂದ ಸಿಂಪಥಿ ಸೃಷ್ಟಿಸಿಕೊಳ್ಳಲು ಈ ನಾಟಕ ಮಾಡುತ್ತಿದ್ದಾರೆ. ಒಂದು ದಿನ ಬಾಲಿವುಡ್‌ನ ನೆಪೋಟಿಸಂ ಸಹಿಸಲು ಆಗುತ್ತಿಲ್ಲ ಎಂದು ಬಾಲಿವುಡ್ ಕೂಡ ತೊರೆಯಲಿ ಎಂದು ಆಶಿಸುತ್ತೇನೆ ಎಂಬುದಾಗಿ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

  English summary
  Bollywood actress Sonakshi Sinha has deactivated her twitter account and said the first step to protecting your sanity.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X