For Quick Alerts
  ALLOW NOTIFICATIONS  
  For Daily Alerts

  ಗರ್ಭಿಣಿ ಎಂದವರಿಗೆ ಹೀಗಾ ಉತ್ತರ ಕೊಡೋದು ಸೋನಮ್ ಕಪೂರ್

  |

  ನಟಿ ಸೋನಮ್ ಕಪೂರ್ ಒಳ್ಳೆಯ ನಟಿ ಜೊತೆಗೆ ಬಹಳ ಗಟ್ಟಿಗಿತ್ತಿ. ತನ್ನ ವಿರುದ್ಧದ ಟ್ರೋಲ್‌ಗಳಿಗೆ ಗಟ್ಟಿಯಾಗಿಯೇ ಉತ್ತರ ಕೊಡುತ್ತಾರೆ. ಇದೀಗ ಕೆಲವು ದಿನಗಳಿಂದ ಸೋನಮ್ ಕಪೂರ್ ತಾಯಿಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಆ ಸುದ್ದಿಗಳು ಸುಳ್ಳು ಎಂದು ಸೋನಮ್ ಕಪೂರ್ ಭಿನ್ನವಾಗಿ ಹೇಳಿದ್ದಾರೆ.

  ಕಳೆದ ಒಂದು ವರ್ಷದಿಂದ ವಿದೇಶದಲ್ಲಿದ್ದ ನಟಿ ಸೋನಂ ಕಪೂರ್ ಜುಲೈನಲ್ಲಿ ಭಾರತಕ್ಕೆ ಮರಳಿದ್ದರು. ಏರ್‌ಪೋರ್ಟ್‌ನಲ್ಲಿ ಅಪ್ಪ ಅನಿಲ್ ಕಪೂರ್ ಅನ್ನು ತಬ್ಬಿಕೊಂಡು ಕಣ್ಣೀರು ಹಾಕಿದ್ದರು. ಆ ಚಿತ್ರಗಳು ಸಖತ್ ವೈರಲ್ ಆಗಿದ್ದವು. ಆ ಚಿತ್ರಗಳನ್ನು ನೋಡಿದ ಕೆಲವರು ಸೋನಮ್ ಕಪೂರ್ ಗರ್ಭಿಣಿ ಆಗಿದ್ದಾರೆ ಎಂದು ಸುದ್ದಿ ಹಬ್ಬಿಸಿದ್ದರು.

  ತಾವು ಗರ್ಭಿಣಿ ಆಗಿಲ್ಲ ಎಂದು ಹೊಟ್ಟೆ ತೋರಿಸಿ ಉತ್ತರ ಕೊಟ್ಟಿದ್ದಾರೆ ಸೋನಂ ಕಪೂರ್. ಜಿಮ್‌ನಲ್ಲಿ ವರ್ಕೌಟ್ ಮಾಡಿ, ಹೊಟ್ಟೆಯ ಭಾಗ ಕಾಣುವಂತೆ ಅಂಗಿ ಮೇಲಕ್ಕೆತ್ತಿ ಚಿತ್ರ ತೆಗೆದುಕೊಂಡಿರುವ ಸೋನಂ ಕಪೂರ್ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

  ಕೆಲವು ದಿನಗಳ ಹಿಂದೆಯೂ ಇದೇ ಗಾಳಿಸುದ್ದಿಗಳಿಗೆ ಸುದ್ದಿಗೆ ಬೇರೆ ರೀತಿ ಉತ್ತರಿಸಿದ್ದ ಸೋನಂ ಕಪೂರ್, ಬಿಸಿ ನೀರು, ಶುಂಠಿ ರಸ ಕುಡಿಯುತ್ತಿರುವ ಚಿತ್ರ ಪ್ರಕಟಿಸಿ, ''ನನ್ನ ಋತುಚಕ್ರದ ಮೊದಲ ದಿನ ಒಂದು ಲೋಟ ಬಿಸಿ ನೀರು ಮತ್ತು ಶುಂಠಿ ಟೀ ಸೇವಿಸುವುದರೊಂದಿಗೆ ಆರಂಭ'' ಎಂದಿದ್ದರು. ಆ ಮೂಲಕ ತಾವು ಗರ್ಭಿಣಿ ಆಗಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದರು.

  2018ರ ಮೇ ತಿಂಗಳಲ್ಲಿ ಉದ್ಯಮಿ ಆನಂದ್ ಆಹುಜಾ ಜೊತೆ ಸೋನಂ ಕಪೂರ್ ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಪತಿಯ ಜೊತೆ ಲಂಡನ್‌ನಲ್ಲಿ ನೆಲೆಸಿದ್ದ ಸೋನಂ 2020ರಿಂದಲೂ ಅಲ್ಲೆ ಉಳಿದುಕೊಂಡಿದ್ದರು. ಕೊರೊನಾ ಕಾರಣದಿಂದ ಭಾರತಕ್ಕೆ ಪ್ರಯಾಣ ಬಂದಿರಲಿಲ್ಲ. ಇದೀಗ ಮರಳಿ ಬಂದಿರುವ ಸೋನಂ ಕಪೂರ್ 'ವೀರ್‌ ದಿ ವೆಡ್ಡಿಂಗ್ 2' ಸಿನಿಮಾದಲ್ಲಿ ನಟಿಸಲಿದ್ದಾರೆ. ಜೊತೆಗೆ 'ಬ್ಲೈಂಡ್' ಹೆಸರಿನ ಸಿನಿಮಾದಲ್ಲಿಯೂ ಸೋನಂ ನಟಿಸಲಿದ್ದಾರೆ.

  English summary
  Actress Sonam Kapoor ends her pregnancy rumors in different way.
  Thursday, September 2, 2021, 9:38
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X