For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ಬಾಗಿಲು ತಟ್ಟಿದ 'ಶಿವಲಿಂಗ' ಚೆಲುವೆ ವೇದಿಕಾ

  By Naveen
  |

  ಸೌತ್ ಚಿತ್ರರಂಗದ ಅನೇಕ ನಾಯಕಿಯರಿಗೆ ಇರುವ ಆಸೆಗಳಲ್ಲಿ ಒಂದು ಬಾಲಿವುಡ್ ಸಿನಿಮಾ ಮಾಡಬೇಕು ಎಂಬುದು. ಅದೇ ರೀತಿ ಈಗಾಗಲೇ ದಕ್ಷಿಣದ ಸಾಕಷ್ಟು ಸ್ಟಾರ್ ನಟಿಯರು ಬಾಲಿವುಡ್ ನಲ್ಲಿ ಸಿನಿಮಾ ಮಾಡಿದ್ದಾರೆ. ಇವರಲ್ಲಿ ಕೆಲವರು ಬಾಲಿವುಡ್ ನಲ್ಲಿಯೂ ಸ್ಟಾರ್ ಆಗಿ ಮೆರೆದರೆ ಇನ್ನು ಕೆಲವರು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತೆ ಆಗಿದ್ದಾರೆ.

  ಇದೀಗ ಸೌತ್ ನಿಂದ ಮತ್ತೊಬ್ಬ ಸ್ಟಾರ್ ನಟಿ ಬಾಲಿವುಡ್ ಕಡೆ ಪ್ರಯಾಣ ಮಾಡಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲೆಯಾಳಂ ಸಿನಿಮಾಗಳನ್ನು ಮಾಡಿದ್ದ ವೇದಿಕಾ ಈಗ ಹಿಂದಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಕನ್ನಡದಲ್ಲಿ ಶಿವಣ್ಣ ಜೊತೆಗೆ 'ಶಿವಲಿಂಗ' ಸಿನಿಮಾದಲ್ಲಿ ವೇದಿಕಾ ನಟಿಸಿದ್ದರು. ವಿಶೇಷ ಅಂದರೆ, ಮೊದಲ ಚಿತ್ರದಲ್ಲಿಯೇ ಬಿಗ್ ಸ್ಟಾರ್ ಜೋಡಿಯಾಗಿ ವೇದಿಕಾ ನಟಿಸುತ್ತಿದ್ದಾರೆ.

  ಉಪ್ಪಿ ಜೊತೆ ಹೆಜ್ಜೆ ಹಾಕಲಿದ್ದಾರೆ ಬಹುಭಾಷಾ ನಟಿ ವೇದಿಕಾ ಉಪ್ಪಿ ಜೊತೆ ಹೆಜ್ಜೆ ಹಾಕಲಿದ್ದಾರೆ ಬಹುಭಾಷಾ ನಟಿ ವೇದಿಕಾ

  ನಟ ಇಮ್ರಾನ್ ಹಶ್ಮಿ ಜೋಡಿಯಾಗಿ ವೇದಿಕಾ ಕಾಣಿಸಿಕೊಳ್ಳುತ್ತಿದ್ದಾರೆ. 'ದೃಶ್ಯಂ' ಖ್ಯಾತಿಯ ಜೀತು ಜೋಸೆಫ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಇದು ಅವರ ಮೊದಲ ಬಾಲಿವುಡ್ ಸಿನಿಮಾವಾಗಿದೆ. ಜೀತು ಜೋಸೆಫ್ 'ದಿ ಬಾಡಿ' ಎಂಬ ಸ್ಪ್ಯಾನಿಶ್ ಚಿತ್ರದ ರಿಮೇಕ್ ಅನ್ನು ಹಿಂದಿಯಲ್ಲಿ ಮಾಡುತ್ತಿದ್ದಾರೆ. ಕಾಲೇಜ್ ಹುಡುಗಿಯ ಪಾತ್ರದಲ್ಲಿ ವೇದಿಕಾ ನಟಿಸುತ್ತಿದ್ದಾರೆ. ರಿಷಿ ಕಪೂರ್ ಕೂಡ ಚಿತ್ರದ ಒಂದು ಪಾತ್ರವನ್ನು ನಿರ್ವಹಿಸಲಿದ್ದಾರೆ.

  ಅಂದಹಾಗೆ, ದೀಪಿಕಾ ಪಡುಕೋಣೆ, ತಾಪ್ಸಿ ಪನ್ನು, ತಮನ್ನಾ, ಕಾಜಲ್ ಅಗರ್ವಾಲ್, ಇಲಿಯಾನ, ಜೆನಿಲಿಯಾ ರೀತಿ ಈಗ ವೇದಿಕಾ ಕೂಡ ಸೌತ್ ಚಿತ್ರರಂಗದ ಬಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  English summary
  South Actress Vedhika to make bollywood debut opposite Actor Emraan Hashmi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X