»   » ಪ್ರೇಮಿಗಳ ದಿನಕ್ಕೆ ಬಾಲಿವುಡ್ ತಾರೆಯರ ಪ್ರೇಮ ಸಂದೇಶ

ಪ್ರೇಮಿಗಳ ದಿನಕ್ಕೆ ಬಾಲಿವುಡ್ ತಾರೆಯರ ಪ್ರೇಮ ಸಂದೇಶ

Posted By:
Subscribe to Filmibeat Kannada

ಮುಂಬೈ, ಫೆ. 14: ಪ್ರೇಮಿಗಳ ದಿನ ಆಚರಿಸಿದಿರಾ... ಯಾರು ಆಚರಿಸದಿದ್ರೂ ದೇಶಾದ್ಯಂತ ಪ್ರೇಮದ ಸುಗಂಧ ಹಬ್ಬಿಸುತ್ತಿರುವ ಬಾಲಿವುಡ್ ಮಾತ್ರ ಸಂಭ್ರಮಿಸದೇ ಬಿಡಲ್ಲ.

ಬಾಲಿವುಡ್ ತಾರೆಯರು ಶನಿವಾರ ಒಬ್ಬರಿಗೊಬ್ಬರು ಪ್ರೇಮಿಗಳ ದಿನದ ಸಂದೇಶ ಹಂಚಿಕೊಂಡಿದ್ದಾರೆ. ಕೆಲವರು ಟ್ವಿಟ್ಟರ್‌ನಲ್ಲಿ, ಕೆಲವರು ಬ್ಲಾಗ್‌ನಲ್ಲಿ, ಕೆಲವರು ವೆಬ್ ಸೈಟ್‌ನಲ್ಲಿ ಪ್ರೇಮದ ಸಂದೇಶ ಹಂಚಿಕೊಂಡಿದ್ದಾರೆ, ರವಾನಿಸಿದ್ದಾರೆ. ಹೆಚ್ಚಿನವರು ಪ್ರೇಮ ಹಾಗೂ ಶಾಂತಿಯ ಸಂದೇಶವನ್ನೇ ನೀಡಿದ್ದಾರೆ. ಆದರೆ, ಶಿರಿಶ್ ಕುಂದರ್‌ ಹಿಂದೂ ಮಹಾಸಭಾವನ್ನು ವ್ಯಂಗ್ಯವಾಡಿದ್ದಾರೆ.

ಯಾರ್ಯಾರು ಎಂತಹ ಸಂದೇಶ ನೀಡಿದ್ದಾರೆ ಎಂಬುದನ್ನು ನೋಡೋಣ ಬನ್ನಿ.

ಪ್ರಿಯಾಂಕಾ ಚೋಪ್ರಾ
  

ಪ್ರಿಯಾಂಕಾ ಚೋಪ್ರಾ

ಎಲ್ಲ ಯುವಕರಿಗೆ ಹೇಳುತ್ತಿದ್ದೇನೆ!!! ಪ್ರೀತಿಸಲು ನಿಮಗೆ ಒಂದು ದಿನ ಬೇಕಾಗಿಲ್ಲ. ನೀವು ನಿಮ್ಮವರನ್ನು ಪ್ರತಿದಿನವೂ ನಿನ್ನೆಗಿಂತಲೂ ಹೆಚ್ಚು ಪ್ರೀತಿಸಬೇಕು. ಪ್ರೇಮಿಗಳ ದಿನದ ಶುಭಾಷಯಗಳು.

ವಿಶಾಲ್ ದಡ್ಲಾನಿ
  

ವಿಶಾಲ್ ದಡ್ಲಾನಿ

ನಾನು ಹಿಂದೂ ಮಹಾಸಭಾಕ್ಕೆ ಪ್ರೇಮಿಗಳ ದಿನದ ಶುಭ ಹಾರೈಸುತ್ತೇನೆ. ಓಹ್, ಜೊತೆಗೆ ಮೋನಿಕಾ ಬೆಲ್ಲುಸಿಯನ್ನೂ ಪ್ರೀತಿಸುತ್ತೇನೆ!

ಕರಣ್ ಜೋಹಾರ್
  

ಕರಣ್ ಜೋಹಾರ್

ಪ್ರೀತಿಯ ಪ್ರೇಮವೇ... ದಯವಿಟ್ಟು ದೊಡ್ಡ ಹೃದಯ ಇಟ್ಟುಕೊ...#ಪ್ರೇಮಿಗಳ ದಿನದ ಶುಭಾಷಯಗಳು.

ಶಿರೀಶ್ ಕುಂದರ್
  

ಶಿರೀಶ್ ಕುಂದರ್

ನನ್ನೊಂದಿಗೆ ನನ್ನ ನಾಯಿಯನ್ನು ಹೊರಗೆ ಕರೆದೊಯ್ದೆ. ಹಿಂದೂ ಮಹಾಸಭಾ ನಮಗೆ ಮದುವೆ ಮಾಡಿಸಿತು. ನಿಮ್ಮ ಆಶೀರ್ವಾದ ಬೇಕಾಗಿದೆ. ಪ್ರೇಮಿಗಳ ದಿನದ ಶುಭಾಷಯಗಳು!

ಅನುಪಮ್ ಖೇರ್
  

ಅನುಪಮ್ ಖೇರ್

ಪ್ರೀತಿ ಹುಟ್ಟಲು ಅತ್ಯಂತ ಕಡಿಮೆ ನಂಬಿಕೆ ಸಾಕು. ಪ್ರೇಮಿಗಳ ದಿನದ ಶುಭಾಷಯಗಳು.

ಮಲ್ಲಿಕಾ ಶೆರಾವತ್
  

ಮಲ್ಲಿಕಾ ಶೆರಾವತ್

ಪ್ರೇಮಿಗಳ ದಿನದ ಶುಭ ಹಾರೈಸುವುದು ಸಾಕೇ ಅಥವಾ ನಾನು ಬಂಧನಕ್ಕೊಳಗಾಗಬೇಕೆ?

ಅರ್ಜುನ್ ರಾಮ್‌ಪಾಲ್
  

ಅರ್ಜುನ್ ರಾಮ್‌ಪಾಲ್

ಪ್ರೇಮಿಗಳ ದಿನದ ಶುಭಾಷಯಗಳು. ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ. ಪ್ರೀತಿಯನ್ನು ಹಬ್ಬಿಸಿ. #ರಾಕ್‌ಆ್ಯಂಡ್‌ಜಾಯ್

ಪ್ರೀತಿ ಜಿಂಟಾ
  

ಪ್ರೀತಿ ಜಿಂಟಾ

ನನ್ನ ಸ್ನೇಹಿತರಿಗೆಲ್ಲ ಪ್ರೇಮಿಗಳ ದಿನದ ಶುಭಾಷಯಗಳು. ನಿಮ್ಮ ಹೃದಯದಲ್ಲಿರುವ ಪ್ರೀತಿಯನ್ನು ಅಲ್ಲೇ ಇಟ್ಟುಕೊಳ್ಳಬೇಡಿ ಎಂದಷ್ಟೇ ಹೇಳಲು ಇಚ್ಛಿಸುತ್ತೇನೆ.

English summary
Spread love and peace... this is what message sent by bollywood celebrities for valentines day.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada