»   » ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.!

ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.!

Posted By:
Subscribe to Filmibeat Kannada
ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಏನ್ ಹೇಳುತ್ತೆ ? | Filmibeat kannada

ನಟಿ ಶ್ರೀದೇವಿಗೆ ವಯಸ್ಸು 54 ಅಂದ್ರೆ ನಂಬಲು ಅಸಾಧ್ಯ. ಅಂಥದ್ರಲ್ಲಿ ನಟಿ ಶ್ರೀದೇವಿ ಇಹಲೋಕ ತ್ಯಜಿಸಿದ್ದಾರೆ ಎಂಬ ಸುದ್ದಿ ಬ್ರೇಕ್ ಆದಾಗ, ಅದನ್ನ ನಂಬಲು ಯಾರೂ ರೆಡಿ ಇರಲಿಲ್ಲ. ಹೃದಯ ಸಂಬಂಧಿ ಕಾಯಿಲೆ ಇಲ್ಲದ ಶ್ರೀದೇವಿ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದಾಗ ಇಡೀ ಭಾರತವೇ ದಿಗ್ಬ್ರಮೆಗೊಂಡಿತ್ತು.

ಅಷ್ಟಕ್ಕೂ, ಶ್ರೀದೇವಿ ಹೃದಯಾಘಾತದಿಂದಲೇ ಮೃತಪಟ್ಟಿದ್ದಾರೆ ಎಂದು ಇಲ್ಲಿಯವರೆಗೂ ಭಾವಿಸಲಾಗಿತ್ತು. ಆದ್ರೆ, ಅದು ಸುಳ್ಳು ಎಂದು ಸ್ಪಷ್ಟ ಆಗಿರುವುದು ಪೋಸ್ಟ್ ಮಾರ್ಟಂ ವರದಿ ಬಂದ ಮೇಲೆ.!

ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ, ಶ್ರೀದೇವಿ 'ಆಕಸ್ಮಿಕ ಮುಳುಗುವಿಕೆ'ಯಿಂದ ಸಾವನ್ನಪ್ಪಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲಿ 'ಹೃದಯಾಘಾತ'ದ ಬಗ್ಗೆ ಎಲ್ಲೂ ಉಲ್ಲೇಖ ಇಲ್ಲ.

ಆದ್ರೆ, ಶ್ರೀದೇವಿ ರಕ್ತದಲ್ಲಿ ಆಲ್ಕೋಹಾಲ್ ಕಂಟೆಂಟ್ ಇರುವುದು ಪತ್ತೆ ಆಗಿದೆ. ಮದ್ಯಪಾನ ಸೇವನೆ ಮಾಡಿದ್ದ ಶ್ರೀದೇವಿ, ಆಯಾತಪ್ಪಿ ಬಾತ್ ಟಬ್ ಒಳಗೆ ಮುಳುಗಿ ಪ್ರಜ್ಞೆ ತಪ್ಪಿದ್ದಾರೆ ಎಂದು 'ಯು.ಎ.ಇ'ಯ ಗಲ್ಫ್ ಮೀಡಿಯಾ ವರದಿ ಮಾಡಿದೆ.

ಈ ಆಘಾತಕಾರಿ ರಿಪೋರ್ಟ್ ಬಯಲಾಗುತ್ತಿದ್ದಂತೆಯೇ, ಟ್ವಿಟ್ಟರ್ ನಲ್ಲಿ ಅನುಮಾನದ ಹುತ್ತ ಬೆಳೆಯಲು ಆರಂಭವಾಗಿದೆ. ಮುಂದೆ ಓದಿರಿ...

ಫೋರೆನ್ಸಿಕ್ ವರದಿಯಲ್ಲಿ ಏನಿದೆ.?

ಫೋರೆನ್ಸಿಕ್ ವರದಿಯ ಪ್ರಕಾರ, ನಟಿ ಶ್ರೀದೇವಿ ಆಕಸ್ಮಿಕವಾಗಿ ಬಾತ್ ಟಬ್ ನಲ್ಲಿ ಬಿದ್ದು ಮುಳುಗಿ ಸತ್ತಿದ್ದಾರೆ. ಇನ್ನೂ ಶ್ರೀದೇವಿ ಅವರ ರಕ್ತ ಪರೀಕ್ಷೆ ವರದಿಯಲ್ಲಿ ಮದ್ಯ ಸೇವನೆ ಮಾಡಿರುವುದು ಕಂಡು ಬಂದಿದೆ.

ಶ್ರೀದೇವಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ.! ಮತ್ತೆ.?

ಅಷ್ಟೊಂದು ಕುಡಿದಿದ್ದರೆ.?

ಬಾತ್ ಟಬ್ ನಲ್ಲಿ ಬೀಳುವಷ್ಟು ಶ್ರೀದೇವಿ ಮದ್ಯದ ನಶೆಯಲ್ಲಿದ್ದರೆ.? ಅಷ್ಟೊಂದು ಕುಡಿದಿದ್ದರೆ, ಅದು ಬೋನಿ ಕಪೂರ್ ಗಮನಕ್ಕೆ ಏಕೆ ಬರಲಿಲ್ಲ.? ಎಂಬ ಪ್ರಶ್ನೆ ಇದೀಗ ಉದ್ಭವ ಆಗಿದೆ.

ಶ್ರೀದೇವಿ ಸತ್ತಿದ್ದು ಹೇಗೆ? ಇಲ್ಲಿದೆ ಆಘಾತಕಾರಿ ಸುದ್ದಿ!

ಎಲ್ಲವೂ ಉಲ್ಟಾ-ಪಲ್ಟಾ

ಅತಿಯಾದ ಸೌಂದರ್ಯ ಪ್ರಜ್ಞೆ ಹೊಂದಿದ್ದ ಶ್ರೀದೇವಿ, ಪದೇ ಪದೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿ, ದೇಹ ತೂಕ ಇಳಿಸಲು ಹೆಚ್ಚು ಮಾತ್ರೆ ಸೇವಿಸಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂಬ ವ್ಯಾಖ್ಯಾನ ಈ ಪೋಸ್ಟ್ ಮಾರ್ಟಂ ರಿಪೋರ್ಟ್ ನಿಂದ ಉಲ್ಟಾ ಪಲ್ಟಾ ಆಗಿದೆ.

ಸಾಮಾನ್ಯ ಜನರಲ್ಲಿ ಮೂಡಿದೆ ಅನುಮಾನ

''ಮದುವೆ ಮುಗಿದರೂ, ದುಬೈನಲ್ಲೇ ಶ್ರೀದೇವಿ ಇದ್ದದ್ದು ಯಾಕೆ.? ಮದುವೆ ಮುಗಿದ್ಮೇಲೆ ಭಾರತಕ್ಕೆ ವಾಪಸ್ ಬಂದಿದ್ದ ಬೋನಿ ಕಪೂರ್, ವಾಪಸ್ ದುಬೈಗೆ ಹಾರಿದ್ದು ಯಾಕೆ.? ಬಾತ್ ಟಬ್ ನಲ್ಲಿ ಮುಳುಗಿರುವುದು ಆಕಸ್ಮಿಕವಲ್ಲ, ಉದ್ದೇಶಪೂರ್ವಕ'' ಎಂದು ಕೆಲವರು ಟ್ವೀಟ್ ಮಾಡುತ್ತಿದ್ದಾರೆ.

'ಆಕಸ್ಮಿಕ' ಅಂತ ಹೇಳಲು ಹೇಗೆ ಸಾಧ್ಯ.?

ನೀರಲ್ಲಿ ಮುಳುಗಿ ಶ್ರೀದೇವಿ ಸಾವನ್ನಪ್ಪಿರಬಹುದು. ಆದ್ರೆ, ಅದು ಆಕಸ್ಮಿಕ ಅಂತ ವರದಿ ಕೊಡಲು ಹೇಗೆ ಸಾಧ್ಯ.? ಎಂಬ ಪ್ರಶ್ನೆ ಉದ್ಭವವಾಗಿದೆ.

ಚಿಕ್ಕ ಮಗುನಾ.?

''ಬಾತ್ ಟಬ್ ನಲ್ಲಿ ಮುಳುಗಿ ಸಾಯಲು ಶ್ರೀದೇವಿ ಏನು ಚಿಕ್ಕ ಮಗುವೇ.?'' ಅಂತಿದ್ದಾರೆ ಟ್ವೀಟಿಗರು

ಸತ್ಯ ಒಂದಲ್ಲ ಒಂದು ದಿನ ಹೊರಗೆ ಬರುತ್ತದೆ

''ಮಾಧ್ಯಮಗಳು ವರದಿ ಮಾಡಿದಂತೆ ಹೃದಯಾಘಾತ ಆಗಿರಲಿಲ್ಲ. ಹೊರಗಡೆ ಎಲ್ಲೂ ಬಾರದಂತೆ ಹೋಟೆಲ್ ರೂಮ್ ನಲ್ಲೇ 48 ಗಂಟೆ ಇದ್ದರು ಶ್ರೀದೇವಿ. ಈಗ ಆಕಸ್ಮಿಕವಾಗಿ ಮುಳುಗಿ ಸತ್ತರು ಎನ್ನಲಾಗುತ್ತಿದೆ. ಇದು ಸತ್ಯವನ್ನು ಮುಚ್ಚಿಡುವ ಪ್ರಯತ್ನ. ಒಂದಲ್ಲ ಒಂದು ದಿನ ಸತ್ಯ ಹೊರಗೆ ಬರುತ್ತದೆ'' ಎನ್ನುತ್ತಿದ್ದಾರೆ ಅಭಿಮಾನಿಗಳು.

ಅದು ಫೇಕ್ ರಿಪೋರ್ಟ್.?

ಫೋರೆನ್ಸಿಕ್ ರಿಪೋರ್ಟ್ ನಲ್ಲಿ 'Accidental Drowning' ಬದಲು 'Accidental Drawning' ಎಂದು ಬರೆಯಲಾಗಿದೆ. ಹೀಗಾಗಿ, ಇದು ಅಧಿಕೃತ ವರದಿಯೋ, ಅಥವಾ ಫೇಕ್ ವರದಿಯೋ ಎಂಬ ಚರ್ಚೆ ಶುರು ಆಗಿದೆ.

ಪೂರ್ವನಿಯೋಜಿತ ಮರ್ಡರ್

ಇದೊಂದು ಪೂರ್ವನಿಯೋಜಿತ ಮರ್ಡರ್ ಎಂದೇ ಹಲವರು ವ್ಯಾಖ್ಯಾನಿಸುತ್ತಿದ್ದಾರೆ.

ಇದು ಹೇಗೆ ಸಾಧ್ಯ.?

ಫೋರೆನ್ಸಿಕ್ ರಿಪೋರ್ಟ್ ನಲ್ಲಿ ಪ್ರಿವೆಂಟಿವ್ ಮೆಡಿಸಿನ್ ವಿಭಾಗದ ನಿರ್ದೇಶಕರು ಸಹಿ ಹಾಕಿದ್ದಾರೆ. ಪ್ರಿವೆಂಟಿವ್ ಮೆಡಿಸಿನ್ ವಿಭಾಗದಿಂದ ಫೋರೆನ್ಸಿಕ್ ರಿಪೋರ್ಟ್ ಹೇಗೆ ತಾನೆ ಬರಲು ಸಾಧ್ಯ ಎಂಬುದು ಹಲವರ ಪ್ರಶ್ನೆ ಆಗಿದೆ.

ಅಭಿಮಾನಿಗಳ ಪ್ರಶ್ನೆ

''ಇದ್ದಕ್ಕಿದ್ದಂತೆ ಬೋನಿ ಕಪೂರ್ ದುಬೈಗೆ ಸರ್ ಪ್ರೈಸ್ ವಿಸಿಟ್ ನೀಡಿದ್ದು ಯಾಕೆ.? ಮದ್ಯ ಸೇವನೆ ಮಾಡಿದ್ರು ಎಂದು ಹೇಳುವಾಗ, ಹದಿನೈದು ನಿಮಿಷಗಳ ಹಿಂದೆ ಮಾತನಾಡಲು ಹೇಗೆ ಸಾಧ್ಯ.? ಹೃದಯಾಘಾತ ಎಂದು ಮೊದಲು ಹೇಳಿದ್ದು ಯಾಕೆ.?'' ಎಂಬುದು ಅಭಿಮಾನಿಗಳ ಪ್ರಶ್ನೆ

ಸಾಗರದಷ್ಟು ಆಳವಾಗಿತ್ತೇ.?

''ಬಾತ್ ಟಬ್ ಸಾಗರದಷ್ಟು ಆಳವಾಗಿತ್ತೇ, ಮುಳುಗಿ ಸಾಯಲು.?'' ಎಂಬುದೇ ಅನೇಕರ ಪ್ರಶ್ನೆಯಾಗಿದೆ.

English summary
Forensic report says Bollywood Actress Sridevi died from Accidental Drowning. Twitterati suspects something fishy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada