»   » ಸ್ಟಾರ್ ನಟನ ಜೊತೆ ಶ್ರೀದೇವಿ ಪುತ್ರಿ ಡೇಟಿಂಗ್!

ಸ್ಟಾರ್ ನಟನ ಜೊತೆ ಶ್ರೀದೇವಿ ಪುತ್ರಿ ಡೇಟಿಂಗ್!

Posted By:
Subscribe to Filmibeat Kannada

ಎವರ್ ಗ್ರೀನ್ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಬಾಲಿವುಡ್‌ಗೆ ಎಂಟ್ರಿ ಕೊಡಲು ಎಲ್ಲ ರೀತಿಯ ತಯಾರಿ ಆಗಿದ್ದು, ಅದಕ್ಕೂ ಮುಂಚೆಯೇ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದ್ದಾರೆ. ಇನ್ನು ಒಂದು ಸಿನಿಮಾ ಕೂಡ ಮಾಡಿಲ್ಲ. ಹೀಗಿರುವಾಗ, ಸಿನಿಮಾಗಿಂತ ಖಾಸಗಿ ವಿಚಾರಗಳಲ್ಲಿ ಹೆಚ್ಚು ಖ್ಯಾತಿಗಳಿಸಿಕೊಳ್ಳುತ್ತಿದ್ದಾರೆ.

ಹೀಗಿರುವಾಗ, ಶ್ರೀದೇವಿ ಪುತ್ರಿ ಜಾಹ್ನವಿ ಬಾಲಿವುಡ್ ಸ್ಟಾರ್ ನಟರೊಬ್ಬರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಆ ನಟ ಬೇರೆ ಯಾರು ಅಲ್ಲ, ನಟ ರಣ್ಬೀರ್ ಕಪೂರ್. ಹೌದು, ಇತ್ತೀಚೆಗೆ ಪಾರ್ಟಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡ ರಣ್ಬೀರ್ ಮತ್ತು ಮತ್ತು ಜಾಹ್ನವಿ ಇಬ್ಬರೂ ತುಂಬಾ ಕ್ಲೋಸ್ ಆಗಿ ನಡೆದುಕೊಂಡಿದ್ದಾರಂತೆ. ಹಾಗಾಗಿ ಇವರಿಬ್ಬರು ಡೇಟಿಂಗ್ ನಲ್ಲಿದ್ದಾರೆ ಎಂಬ ಸುದ್ದಿ ಬಾಲಿವುಡ್‌ನಲ್ಲಿ ಜೋರಾಗಿ ಹಬ್ಬಿದೆ.

Sridevi on rumour about Jhanvi flirting with Ranbir

ಈ ವಿಷ್ಯ ಜಾಹ್ನವಿ ಅವರ ಅಮ್ಮ ಶ್ರೀದೇವಿ ಕಿವಿಗೂ ಬಿದ್ದಿದ್ದು,ಮಗಳ ಬಗ್ಗೆ ಸ್ವಲ್ಪ ಬೇಸರಗೊಂಡಿದ್ದಾರಂತೆ. ಇನ್ನು ಈ ಬಗ್ಗೆ ಜಾಹ್ನವಿಯಲ್ಲಿ ಕೇಳಿದ್ರೆ, ಮಮ್ಮಿ ನಾನು ಪಾರ್ಟಿಯಲ್ಲಿ ಗೌರಿ ಶಿಂಧೆ ಆಂಟಿ ಜೊತೆಗಿದ್ದೆ ಎಂದಿದ್ದಾಳೆ ಎನ್ನಲಾಗಿದೆ.

Sridevi on rumour about Jhanvi flirting with Ranbir

ನಂತರ ಮಗಳಿಗೆ ಬುದ್ಧಿವಾದ ಹೇಳಿರುವ ಶ್ರೀದೇವಿ, ಹೆಚ್ಚು ತಲೆಕೆಡಿಸಿಕೊಳ್ಳಬಾರದು. ನಮಗೆ ಇಷ್ಟ ಇದ್ದರೂ, ಇಲ್ಲದಿದ್ದರೂ ಇದನ್ನೆಲ್ಲಾ ಅನುಭವಿಸಬೇಕಾಗುತ್ತದೆ. ನಾವು ಪಾಸಿಟಿವ್ ಆಗಿರಲು ಪ್ರಯತ್ನಿಸಿದಾಗ, ನೆಗೆಟಿವ್‌ಗಳನ್ನು ಸ್ವೀಕರಿಸುವನ್ನು ಕಲಿಯಬೇಕು ಎಂದಿದ್ದಾರಂತೆ.

English summary
Several reports suggested that Jhanvi was trying to get to close to Ranbir at a private party.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada