»   » ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್ ತಾಯಿಯಾದ್ರು!

ನೀಲಿ ಚಿತ್ರಗಳ ಮಾಜಿ ತಾರೆ ಸನ್ನಿ ಲಿಯೋನ್ ತಾಯಿಯಾದ್ರು!

Posted By:
Subscribe to Filmibeat Kannada

ಮಾದಕ ನಟಿ ಸನ್ನಿ ಲಿಯೋನ್ ಇದೀಗ ತಾಯಿ ಆಗಿದ್ದಾರೆ. ಆದ್ರೆ ಹಾಗಂತ ಇವರು ಮಗುವಿಗೆ ಜನ್ಮ ನೀಡಿಲ್ಲ. ಸನ್ನಿ ಲಿಯೋನ್ ಮತ್ತು ಪತಿ ಡೇನಿಯಲ್ ವೆಬರ್ ಹೆಣ್ಣು ಮಗುವೊಂದನ್ನು ದತ್ತು ಪಡೆದಿದ್ದಾರೆ.

ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ದಂಪತಿಗಳು ತಾವು ದತ್ತು ಪಡೆದಿರುವ ಮಗುವಿಗೆ ನಿಶಾ ಕೌರ್ ವೆಬರ್ ಎಂದು ಹೆಸರಿಟ್ಟಿದ್ದಾರೆ. 21 ತಿಂಗಳ ನಿಶಾ ಕೌರ್ ವೆಬರ್ ಮೂಲತಃ ಮಹಾರಾಷ್ಟ್ರದ ಲಾತುರ್ ಮೂಲದ ಅನಾಥಾಶ್ರಮ ಒಂದರ ಮಗು.

Sunny Leone And Husband Daniel Weber Adopt Baby Girl

ಈ ಮಗುವನ್ನು ನೋಡಿದ ತಕ್ಷಣ ನನಗೆ ಲವ್ ಅಟ್ ಫಸ್ಟ್ ಸೈಟ್ ಆಯಿತು. ಹಲವು ರೀತಿಯ ಭಾವನೆಗಳು ಹುಟ್ಟಿದವು, ಸಂತೋಷವಾಯಿತು. ಈಕೆಯನ್ನು ದತ್ತು ಪಡೆಯಲು ಕೇವಲ 3 ಮೂರು ವಾರಗಳಲ್ಲಿ ಕಾನೂನು ಪ್ರಕ್ರಿಯೆ ಮುಗಿಸಿ ದತ್ತು ಪಡೆದಿರುವ ಬಗ್ಗೆ ಸನ್ನಿ ಲಿಯೋನ್ ಹೇಳಿಕೊಂಡಿದ್ದಾರೆ.

ಮಗುವನ್ನು ದತ್ತು ಪಡೆಯಲು ದಂಪತಿಗಳು ಎರಡು ವರ್ಷಗಳ ಹಿಂದೆ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದರಂತೆ. ಅದಕ್ಕೂ ಮೊದಲು ಸನ್ನಿ ಲಿಯೋನ್ ಮಗುವನ್ನು ದತ್ತು ಪಡೆಯಬೇಕು ಎಂದು ಯೋಚಿಸಿರಲಿಲ್ಲವಂತೆ. ಈಗ ತಾಯಿ ಆಗುವ ಅವಕಾಶ ಬಂದಿದೆ ಎಂದು ಸನ್ನಿ ಲಿಯೋನ್ ಇತ್ತೀಚೆಗೆ ಹೇಳಿಕೊಂಡಿದ್ದರು. ಅದರಂತೆ ಈಗ ಹೇಣ್ಣು ಮಗು ದತ್ತು ಪಡೆದಿದ್ದು ತಾಯಿ ಆಗುವ ಆಸೆಯನ್ನು ಈಡೇರಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ ಸನ್ನಿ ಲಿಯೋನ್ ದತ್ತು ಪಡೆದ ಮಗುವಿನ ನಿಶಾ ಹೆಸರನ್ನು ಬದಲಿಸಿದೆ ಅದೇ ಹೆಸರಿಗೆ ಕೌರ್ ವೆಬರ್ ಎಂದು ಸೇರಿಸಿ ನಿಶಾ ಕೌರ್ ವೆಬರ್ ಎಂದು ಹೆಸರಿಟ್ಟಿದ್ದಾರೆ.

Sunny Leone And Husband Daniel Weber Adopt Baby Girl

ಸನ್ನಿ ಲಿಯೋನ್ ಮತ್ತು ಡೇನಿಯಲ್ ವೆಬರ್ ಮಗು ದತ್ತು ಪಡೆದಿರುವುದಕ್ಕೆ ನಟಿ ಶೆರ್ಲಿನ್ ಚೋಪ್ರಾ ಇನ್‌ಸ್ಟಗ್ರಾಂ ಮೂಲಕ ಸಂತೋಷ ವ್ಯಕ್ತಪಡಿಸಿದ್ದಾರೆ.

English summary
Sunny Leone and husband Daniel Weber have adopted a baby girl and named the child Nisha Kaur Weber

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada