»   » ಸನ್ನಿ ಲಿಯೋನ್ 'ಸತ್ಯಂ ಶಿವಂ ಸುಂದರಂ' ಭಂಗಿಗಳು

ಸನ್ನಿ ಲಿಯೋನ್ 'ಸತ್ಯಂ ಶಿವಂ ಸುಂದರಂ' ಭಂಗಿಗಳು

By: ರವಿಕಿಶೋರ್
Subscribe to Filmibeat Kannada

ಬಾಲಿವುಡ್ ಚಿತ್ರರಂಗಕ್ಕೆ ಸನ್ನಿ ಲಿಯೋನ್ ಎಂಬ ರಂಭೆ ಅಡಿಯಿಟ್ಟ ಮೇಲೆ ಉಳಿದ ಹೀರೋಯಿನ್ ಗಳ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗಟ್ಟಿಯಾಗುವ ಸೂಚನೆಗಳನ್ನು ಕೊಟ್ಟಿದ್ದಾರೆ. ತೆರೆಯ ಮೇಲೆ ಸನ್ನಿ ಮಾಡುತ್ತಿರುವ ಮೋಡಿಗೆ ಕೊನೆಯಿಲ್ಲದಂತಾಗಿದೆ.

ಸನ್ನಿ ಲಿಯೋನ್ ಚಿತ್ರ ಎಂದರೆ ಕಡ್ಡಾಯವಾಗಿ ವಯಸ್ಕರಿ ಮಾತ್ರ ಎಂಬಂತಾಗಿದೆ. ಮೊದಲೇ ವಯಸ್ಕರ ಚಿತ್ರಗಳ ತಾರೆ, ಇನ್ನು ರೊಮ್ಯಾಂಟಿಕ್, ಚುಂಬನ, ಆಲಿಂಗನ, ಬಾಹುಬಂಧನ ಸನ್ನಿವೇಶಗಳೆಂದರೆ ಕೇಳಬೇಕೆ. ಅಲ್ಲೂ ತಮ್ಮ ವರಸೆ ತೋರಿಸಿ ಪಡ್ಡೆಗಳ ಹೃದಯ ಛಿದ್ರ ಛಿದ್ರ ಮಾಡುತ್ತಿದ್ದಾರೆ.

ಇದೀಗ ಅವರ ಹೊಸ ಚಿತ್ರ 'ಏಕ್ ಪಹೇಲಿ ಲೀಲಾ' ಬಾಲಿವುಡ್ ನಲ್ಲಿ ಭಾರಿ ಚರ್ಚೆಗೆ, ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ಈ ಚಿತ್ರದ ಸ್ಟಿಲ್ಸ್ ಯಾವ ಪರಿ ಇವೆ ಎಂದರೆ ಸೆನ್ಸಾರ್ ಮಂಡಳಿ ಅನುಮತಿ ಕೊಡುತ್ತಾ ಬಿಡುತ್ತಾ ಎಂಬ ಸಂದೇಹವನ್ನೂ ಹುಟ್ಟುಹಾಕಿದೆ. ಆ ಚಿತ್ರದ ರೋಚಕ ಲೇಟೆಸ್ಟ್ ಚಿತ್ರಗಳ ಮೇಲೆಮ್ಮೆ ಇಣುಕು ನೋಟ.

ಮೂವರು ಹೀರೋಗಳ ಜೊತೆ ರೊಮಾನ್ಸ್

ಈ ಚಿತ್ರದಲ್ಲಿ ಸನ್ನಿ ಲಿಯೋನ್ ಮೂರು ಹೀರೋಗಳ ಜೊತೆ ಡ್ಯುಯೆಟ್, ರೊಮಾನ್ಸ್ ಮಾಡಲಿದ್ದಾರೆ. ಮೂವರೊಂದಿಗಿನ ಚುಂಬನ, ಆಲಿಂಗನ ದೃಶ್ಯಗಳು ಚಿತ್ರಕ್ಕೆ ಭಾರಿ ಡಿಮ್ಯಾಂಡ್ ಸೃಷ್ಟಿಸಿವೆ.

ಬಾಬ್ಬಿ ಖಾನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರ

ಈ ಚಿತ್ರದಲ್ಲಿನ ಮೂವರು ನಾಯಕ ನಟರು ಜಾಯ್ ಭಾನುಶಾಲಿ, ರಜನೀಶ್ ದುಗ್ಗಲ್ ಹಾಗೂ ರಾಹುಲ್ ದೇವ್. ಇವರ ಜೊತೆಗೆ ಮೋಹಿತ್ ಅಹ್ಲಾವತ್ ಸಹ ಇದ್ದಾರೆ. ಬಾಬ್ಬಿ ಖಾನ್ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು.

ಇದೊಂದು ಮ್ಯೂಸಿಕಲ್ ಥ್ರಿಲ್ಲರ್

ಇದೊಂದು ಮ್ಯೂಸಿಕಲ್ ಥ್ರಿಲ್ಲರ್ ಆಗಿದ್ದು ಸನ್ನಿ ಲಿಯೋನ್ ಅವರ ಹಾವಭಾವ ಭಂಗಿಗಳನ್ನು ನೋಡಲು ಅಭಿಮಾನಿಗಳು ತುದಿಗಾಲಲ್ಲಿ ನಿಲ್ಲುವಂತಾಗಿದೆ. ಟಿ ಸೀರೀಸ್ ಸಂಸ್ಥೆ ನಿರ್ಮಿಸುತ್ತಿರುವ ಚಿತ್ರವಿದು.

ಜೀನತ್ ಅಮನ್ ನೆನಪಿಸುವ ಸನ್ನಿ ಲಿಯೋನ್

ಜೀನತ್ ಅಮನ್ ಅವರ ಸತ್ಯಂ ಶಿವಂ ಸುಂದರಂ ಭಂಗಿಯಲ್ಲಿಯೂ ಸನ್ನಿ ಲಿಯೋನ್ ಕಾಣಿಸಿಕೊಂಡಿದ್ದು ಚಿತ್ರದಲ್ಲಿ ಇನ್ನೇನೆಲ್ಲಾ ಇರುವುದೋ ಎಂದು ಬಾಲಿವುಡ್ ಕಣ್ಣು ಬಾಯಿ ಬಿಟ್ಟುಕೊಂಡು ಎದುರು ನೋಡುತ್ತಿದೆ.

ಏಪ್ರಿಲ್ 10ಕ್ಕೆ ಸನ್ನಿ ಲೀಲೆ ತೆರೆಗೆ

ಏಕ್ ಪಹೇಲಿ ಲೀಲಾ ಚಿತ್ರವನ್ನು ಏಪ್ರಿಲ್ 10ಕ್ಕೆ ತೆರೆಗೆ ತರುವ ಬಗ್ಗೆ ಚಿತ್ರದ ನಿರ್ಮಾಪಕರು ಪ್ಲಾನ್ ಹಾಕಿದ್ದಾರೆ. ಈ ಚಿತ್ರದಲ್ಲಿನ ತಮ್ಮ ಪಾತ್ರ ಸವಾಲಿನಿಂದ ಕೂಡಿದೆ ಎಂದಿದ್ದಾರೆ ಸನ್ನಿ ಲಿಯೋನ್.

ಅತಿ ಕ್ಲಿಷ್ಟವಾದ ಪಾತ್ರ ಇದು ಎಂದ ಸನ್ನಿ

ನನ್ನ ವೃತ್ತಿಬದುಕಿನಲ್ಲೇ ಅತ್ಯಂತ ಕ್ಲಿಷ್ಟಕರವಾದ ಪಾತ್ರವನ್ನು ಪೋಷಿಸಿದ್ದೇನೆ. ತಮ್ಮ ಈ ಪಾತ್ರ ಖಂಡಿತ ಎಲ್ಲರಿಗೂ ಇಷ್ಟವಾಗುತ್ತದೆ ಎಂಬ ವಿಶ್ವಾಸವನ್ನು ಸನ್ನಿ ಲಿಯೋನ್ ವ್ಯಕ್ತಪಡಿಸಿದ್ದಾರೆ.

ಖಂಡಿತ ತಾವಂತೂ ನಿರಾಸೆಪಡಿಸುವುದಿಲ್ಲ

ಈ ಚಿತ್ರದ ಒಟ್ಟಾರೆ ಗೆಲುವು ಮತ್ತು ಸೋಲು ತಮ್ಮ ಮೇಲೆಯೇ ಇರುವುದರಿಂದ ಸಾಕಷ್ಟು ಒತ್ತಡವನ್ನೂ ಅನುಭವಿಸಿದ್ದೇನೆ. ಖಂಡಿತ ತಾವಂತೂ ನಿರಾಸೆಪಡಿಸುವುದಿಲ್ಲ ಎಂದೂ ಹೇಳಿದ್ದಾರೆ ಸೇಸಮ್ಮ.

ಇಷ್ಟೆಲ್ಲಾ ನಾಯಕ ನಟರು ಏಕೆ?

ಚಿತ್ರದಲ್ಲಿ ನಾಲ್ಕು ಐದು ಮಂದಿ ನಾಯಕ ನಟರನ್ನು ಬೇಕಾಬಿಟ್ಟಿ ಆಯ್ಕೆ ಮಾಡಿಲ್ಲ. ಕಥೆಯ ಅಗತ್ಯಕ್ಕೆ ತಕ್ಕಂತೆ ಅವರ ಪಾತ್ರಗಳಿವೆ. ಹಾಗಾಗಿ ಇಷ್ಟೆಲ್ಲಾ ನಾಯಕರು ಬೇಕಾಗಿತ್ತು.

ಸನ್ನಿಗೆ 100 ಲೀಟರ್ ಹಾಲಿನ ಅಭಿಷೇಕ

ಈ ಚಿತ್ರದ ಒಂದು ಸನ್ನಿವೇಶಕ್ಕಾಗಿ 100 ಲೀಟರ್ ಹಾಲನ್ನು ಬಳಸಲಾಗಿದೆ. ಅದನ್ನು ತಮ್ಮ ಮೈಮೇಲೆ ಸುರಿಯುತ್ತಾರೆ. ನನಗೆ ಹಾಲೆಂದರೆ ಆಗಲ್ಲ. ಆದರೂ ಪಾತ್ರಕ್ಕಾಗಿ ಈ ಹಾಲಿನ ಅಭಿಷೇಕದ ಸನ್ನಿವೇಶವನ್ನು ಒಪ್ಪಿಕೊಂಡಿದ್ದೇನೆ ಎನ್ನುತ್ತಾರೆ ಸನ್ನಿ.

English summary
Check out Sunny Leone's over the top erotic scenes with her co-stars in 'Ek Paheli Leela' and see for yourself how the makers of the film have redefined the meaning of erotic scenes in Bollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada