»   » ಸನ್ನಿ ಲಿಯೋನ್ ನವರಸಭರಿತ 'ಕುಚ್ ಕುಚ್' ವಿಡಿಯೋ

ಸನ್ನಿ ಲಿಯೋನ್ ನವರಸಭರಿತ 'ಕುಚ್ ಕುಚ್' ವಿಡಿಯೋ

By: ಉದಯರವಿ
Subscribe to Filmibeat Kannada

ಬಾಲಿವುಡ್ ನಲ್ಲಿ ತನ್ನದೇ ಆದಂತಹ ಛಾಪು ಮೂಡಿಸುತ್ತಿರುವ ಬೆಡಗಿ ಸನ್ನಿ ಲಿಯೋನ್. ತನ್ನ ಹಳೆಯ 'ನೀಲಿ' ಇಮೇಜಿಗೆ ತಕ್ಕಂತಹ ಪಾತ್ರಗಳನ್ನು ಮಾಡುತ್ತಾ ಪ್ರೇಕ್ಷಕರ ಹೃದಯದಲ್ಲಿ ಭರತನಾಟ್ಯವಾಡುತ್ತ್ತಿರುವ ಬೆಡಗಿ. ಇದೀಗ ಲೇಟೆಸ್ಟ್ ಚಿತ್ರ 'ಕುಚ್ ಕುಚ್ ಲೋಚಾ ಹೈ' ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಆ ಚಿತ್ರದ ಲೇಟೆಸ್ಟ್ ಟ್ರೇಲರ್ ಇಲ್ಲಿದೆ ನೋಡಿ.

"ನನ್ನಲ್ಲಿನ ಶೃಂಗಾರ ಕೋನವಷ್ಟೇ ಅಲ್ಲ, ಹಾಸ್ಯದ ಕೋನವನ್ನೂ ಈ ಚಿತ್ರದಲ್ಲಿ ತೋರಿಸುತ್ತೇನೆ" ಎನ್ನುತ್ತಿದ್ದಾರೆ ಸನ್ನಿ ಲಿಯೋನ್. ಇದುವರೆಗೂ ಭಿನ್ನ ಪಾತ್ರಗಳನ್ನು ಪೋಷಿಸಿದ ಸನ್ನಿ ಇದೇ ಮೊದಲ ಬಾರಿಗೆ ಹಾಸ್ಯರಸ ಉಕ್ಕಿಸಲು ಬರುತ್ತಿದ್ದಾರೆ. ತನ್ನದೇ ಆದ ಶೈಲಿಯಲ್ಲಿ ಪ್ರೇಕ್ಷಕರನ್ನು ನಕ್ಕುನಲಿಸುತ್ತೇನೆ ಎನ್ನುತ್ತಿದ್ದಾರೆ ಸನ್ನಿ. [ಸನ್ನಿ ಲಿಯೋನ್ 'ಸತ್ಯಂ ಶಿವಂ ಸುಂದರಂ' ಭಂಗಿಗಳು]

Sunny Leone Kuch Kuch Locha Hai Trailer

ದೇವಂಗ್ ದೋಲಾಕಿಯಾ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದಲ್ಲಿ ರಾಮ್ ಕಪೂರ್ ಹೀರೋ. ಈ ಚಿತ್ರದ ಬಗ್ಗೆ ಮಾತನಾಡಿರುವ ಸನ್ನಿ, "ಫಸ್ಟ್ ಟೈಮ್ ಕಾಮಿಡಿ ಜೋನ್ ಟಚ್ ಮಾಡಿದ್ದೇನೆ. ಈ ಚಿತ್ರವನ್ನು ತುಂಬಾ ಆಸಕ್ತಿಯಿಂದ ನಾನು ಎದುರುನೋಡುತ್ತಿದ್ದೇನೆ..."

"ತಾನು ರಾಮ್ ಕಪೂರ್ ಹೊಸ ಅವತಾರದಲ್ಲಿ ಕಾಣಿಸಲಿದ್ದೇವೆ. ಪ್ರೇಕ್ಷಕರಿಗೆ ಸಾಕಷ್ಟು ವಿನೋದವನ್ನು ಈ ಚಿತ್ರದ ಮೂಲಕ ಹಂಚಲಿದ್ದೇವೆ. ದೇವಂಗ್ ಅವರ ನಿರ್ದೇಶನ ನನಗೆ ಬಹಳ ಹಿಡಿಸಿತು. ಸಖತ್ ಎಂಜಾಯ್ ಮಾಡುತ್ತಾ ವರ್ಕ್ ಮಾಡುತ್ತಿದ್ದೇವೆ. ಶೂಟಿಂಗ್ ಮುಗಿಯುತ್ತಿರುವ ಬಗ್ಗೆ ಬೇಸರವಾಗುತ್ತಿದೆ" ಎನ್ನುತ್ತಾರೆ ಸನ್ನಿ ಲಿಯೋನ್. [ಫಿಲ್ಮಿಬೀಟ್ ಕನ್ನಡ ಉಚಿತ ಸುದ್ದಿಸಾರಂಗಿ]

ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿರುವವರು ಮುಖೇಶ್ ಪುರೋಹಿತ್. ಮೊದಲು 'ಪಟೇಲ್ ರಾಪ್' ಎಂದು ಚಿತ್ರಕ್ಕೆ ಹೆಸರಿಡಲಾಗಿತ್ತು. ಆ ಬಳಿಕ 'ಕುಚ್ ಕುಚ್ ಲೋಚಾ ಹೈ' ಎಂದು ಮರುನಾಮಕರಣ ಮಾಡಿದ್ದಾರೆ. ಈ ಚಿತ್ರದಲ್ಲಿ ಸನ್ನಿ ಸಿನಿಮಾ ತಾರೆಯ ಪಾತ್ರ ಪೋಷಿಸಿದ್ದಾರೆ. ಹಾಲಿವುಡ್ ತಾರೆ ಮರ್ಲಿನ್ ಮನ್ರೋ ಅವರ ಪಾತ್ರವನ್ನು ಹೋಲುತ್ತದಂತೆ.

ಬಹುಶಃ ಸನ್ನಿ ಲಿಯೋನ್ ಅಭಿನಯದ ಇದುವರೆಗಿನ ಚಿತ್ರಗಳಲ್ಲಿ 'ಯು' ಸರ್ಟಿಫಿಕೇಟ್ ಪಡೆದುಕೊಳ್ಳುತ್ತಿರುವ ಮೊಟ್ಟ ಮೊದಲ ಚಿತ್ರ ಇದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದೆ ಚಿತ್ರತಂಡ. ಕುಟುಂಬ ಸಮೇತ ನೋಡುವಂತಹ ರೊಮ್ಯಾಂಟಿಕ್ ಚಿತ್ರ ಇದಾಗಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರು. (ಏಜೆನ್ಸೀಸ್)

English summary
“Kuch Kuch Locha Hai” is an upcoming adult comedy, yet again featuring former adult actress Sunny Leone in the lead. As the film’s trailer hits tinsel towns, youths are going gag over it.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada