For Quick Alerts
  ALLOW NOTIFICATIONS  
  For Daily Alerts

  ವ್ಯಕ್ತಿ ಮೇಲೆ ಚಪ್ಪಲಿ ಎಸೆದ ಸನ್ನಿ ಲಿಯೋನಿ, ರಿವೇಂಜ್ ಎಂದ ನಟಿ

  |

  ಮಾಜಿ ನೀಲಿ ಚಿತ್ರತಾರೆ ಸನ್ನಿ ಲಿಯೋನಿ ಈಗ ಬಾಲಿವುಡ್‌ನ ಪ್ರಮುಖ ಗ್ಲಾಮರಸ್ ನಟಿಯರಲ್ಲೊಬ್ಬರು. ಬಾಲಿವುಡ್ ಮಾತ್ರವೇ ಅಲ್ಲದೆ, ಕನ್ನಡ ಸೇರಿದಂತೆ ಹಲವು ಪ್ರಾದೇಶಿಕ ಭಾಷಾ ಸಿನಿಮಾಗಳಲ್ಲಿ ಐಟಂ ಹಾಡುಗಳಿಗೆ ಕುಣಿದಿದ್ದಾರೆ ಈಕೆ.

  ಪ್ರಮುಖ ಐಟಂ ಸಾಂಗ್ ಡ್ಯಾನ್ಸರ್ ಆಗಿರುವ ಸನ್ನಿ ಲಿಯೋನಿ ಸಾಮಾಜಿಕ ಜಾಲತಾಣದಲ್ಲಿಯೂ ಬಹಳ ಸಕ್ರಿಯರಾಗಿರುತ್ತಾರೆ. ಸೆಟ್‌ನಲ್ಲಿ ಸದಾ ತಮಾಷೆಯಿಂದ ಇರುವ ನಟಿ ಸನ್ನಿ ಲಿಯೋನಿ, ಸೆಟ್‌ನಲ್ಲಿ ನಡೆವ ತಮಾಷೆಯ ಸನ್ನಿವೇಶಗಳನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

  ಸದಾ ಖುಷಿಯ ಮೂಡ್‌ನಲ್ಲಿರುವ ಸನ್ನಿ ಲಿಯೋನಿ, ಈಗ ಯಾಕೊ ಸಿಟ್ಟಾಗಿದ್ದಾರೆ, ಯಾವ ಪರಿ ಸಿಟ್ಟಾಗಿದ್ದಾರೆಂದರೆ ವ್ಯಕ್ತಿಯೊಬ್ಬನ ಮೇಲೆ ತಮ್ಮ ಎರಡೂ ಚಪ್ಪಲಿಗಳನ್ನು ಎಸೆದಿದ್ದಾರೆ. ಅಷ್ಟಕ್ಕೆ ಸಾಲದೆಂಬಂತೆ ದ್ವೇಷ ತೀರಿಸಿಕೊಂಡೇ ತೀರುತ್ತೇನೆ ಎಂದಿದ್ದಾರೆ.

  ಸನ್ನಿಯನ್ನು ಸ್ವಿಮ್ಮಿಂಗ್‌ ಪೂಲ್‌ಗೆ ತಳ್ಳಿದ ವ್ಯಕ್ತಿ

  ಸನ್ನಿಯನ್ನು ಸ್ವಿಮ್ಮಿಂಗ್‌ ಪೂಲ್‌ಗೆ ತಳ್ಳಿದ ವ್ಯಕ್ತಿ

  ಆಗಿದ್ದಿಷ್ಟು, ಯಾವುದೋ ಶೂಟಿಂಗ್‌ ವೇಳೆ ಸನ್ನಿ ಲಿಯೋನಿ ಅಲ್ಲಿನ ಸ್ವಿಮ್ಮಿಂಗ್ ಪೂಲ್‌ ಪಕ್ಕ ನಡೆದಾಡುತ್ತಿದ್ದಾರೆ, ಆ ವೇಳೆಗೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಸನ್ನಿ ಲಿಯೋನಿಯನ್ನು ಸ್ವಿಮ್ಮೀಂಗ್ ಪೂಲ್‌ಗೆ ತಳ್ಳಿದ್ದಾನೆ, ಇದರಿಂದ ಶಾಕ್ ಆದ ಸನ್ನಿ ಲಿಯೋನಿ, ಸ್ವಿಮ್ಮಿಂಗ್ ಪೂಲ್‌ನಿಂದಲೇ ತನ್ನ ಎರಡು ಚಪ್ಪಲಿಗಳನ್ನು ತೆಗೆದು ತನ್ನನ್ನು ಪೂಲ್‌ಗೆ ತಳ್ಳಿದ ವ್ಯಕ್ತಿಯ ಮೇಲೆ ಎಸೆದಿದ್ದಾರೆ.

  ಚಪ್ಪಲಿಯಲ್ಲಿ ಹೊಡೆಸಿಕೊಂಡ ವ್ಯಕ್ತಿ ಯಾರು?

  ಚಪ್ಪಲಿಯಲ್ಲಿ ಹೊಡೆಸಿಕೊಂಡ ವ್ಯಕ್ತಿ ಯಾರು?

  ನಂತರ ಕಷ್ಟಪಟ್ಟು ಹೊರಗೆ ಬಂದ ಸನ್ನಿ ಲಿಯೋನಿ, ನಿನ್ನನ್ನು ಬಿಡುವುದಿಲ್ಲ ಎಂದಿದ್ದಾರೆ. ಅಸಲಿಗೆ ಸನ್ನಿ ಲಿಯೋನಿಯನ್ನು ಸ್ವಿಮ್ಮಿಂಗ್‌ ಪೂಲ್‌ಗೆ ತಳ್ಳಿದ ವ್ಯಕ್ತಿ ಆಕೆಯ ಸೆಲೆಬ್ರಿಟಿ ಮ್ಯಾನೇಜರ್ ರಜನಿ, ಸನ್ನಿಯ ಮ್ಯಾನೇಜರ್ ಆಗಿರುವ ಕಾರಣ ತನ್ನ ಹೆಸರನ್ನು ಸನ್ನಿ ರಜನಿ ಎಂದೇ ಮಾಡಿಕೊಂಡಿದ್ದಾನೆ ಈತ. ಸನ್ನಿ ಲಿಯೋನಿಯ ಆಪ್ತನಾಗಿರುವ ಈತ ಸನ್ನಿಯೊಂದಿಗೆ ಹೀಗೆ ಹಲವು ಫನ್ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದಾನೆ.

  ವಿಡಿಯೋ ಅಪ್‌ಲೋಡ್ ಮಾಡುತ್ತಿರುತ್ತಾರೆ ಸನ್ನಿ

  ವಿಡಿಯೋ ಅಪ್‌ಲೋಡ್ ಮಾಡುತ್ತಿರುತ್ತಾರೆ ಸನ್ನಿ

  ಸೆಟ್‌ನಲ್ಲಿ ಇಂಥಹಾ ಹಲವು ಪ್ರ್ಯಾಂಕ್‌ಗಳನ್ನು ಸನ್ನಿ ಹಾಗೂ ರಜಿನಿ ಒಬ್ಬರ ಮೇಲೋಬ್ಬರು ಮಾಡುತ್ತಲೇ ಇರುತ್ತಾರೆ. ಸನ್ನಿ ಲಿಯೋನ್‌ ಮೇಲೆ ನಕಲಿ ಹಾವು ಹಾಕಿ ಹೆದರಿಸುವುದು, ವಿವಿಧ ಗೇಮ್‌ಗಳಾಡುವುದು, ಸೆಟ್‌ನಲ್ಲಿರುವವರ ಮೇಲೆ ನೀರು ಚೆಲ್ಲುವುದು ಹೀಗೆ ಹಲವು ತಮಾಷೆ ವಿಡಿಯೋಗಳನ್ನು ಸನ್ನಿ ತನ್ನ ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡುತ್ತಿರುತ್ತಾರೆ. ಕೆಲವು ದಿನಗಳ ಹಿಂದೆ ತೆಲುಗಿನ ಮಂಚು ವಿಷ್ಣು ಸಿನಿಮಾದಲ್ಲಿ ನಟಿಸಿದ ಸನ್ನಿ ಲಿಯೋನಿ, ಮಂಚು ವಿಷ್ಣು ಜೊತೆಗೆ ಹಲವು ತಮಾಷೆಯ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು.

  ಹಲವು ಸಿನಿಮಾಗಳಲ್ಲಿ ಸನ್ನಿ ಬ್ಯುಸಿ

  ಹಲವು ಸಿನಿಮಾಗಳಲ್ಲಿ ಸನ್ನಿ ಬ್ಯುಸಿ

  ಸನ್ನಿ ಲಿಯೋನಿ ಹಲವು ಭಾಷೆಯ ಸಿನಿಮಾ, ವೆಬ್ ಸರಣಿಗಳಲ್ಲಿ ತಮ್ಮನ್ನು ತೊಡಿಗಿಸಿಕೊಂಡಿದ್ದಾರೆ. ಕನ್ನಡದಲ್ಲಿಯೂ ಇತ್ತೀಚೆಗೆ ಹಾಡೊಂದಕ್ಕೆ ಸೊಂಟ ಬಳುಕಿಸಿರುವ ಸನ್ನಿ, ತೆಲುಗಿನಲ್ಲಿ ಮಂಚು ವಿಷ್ಣು ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ತಮಿಳಿನಲ್ಲಿ 'ವೀರಮಹಾದೇವಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇದರ ಹೊರತಾಗಿ, 'ಓಹ್ ಮೈ ಗೋಸ್ಟ್', 'ಅನಾಮಿಕ', 'ರಂಗೀಲ' ಇನ್ನೂ ಹಲವು ಸಿನಿಮಾಗಳಲ್ಲಿ ಸನ್ನಿ ನಟಿಸುತ್ತಿದ್ದಾರೆ.

  English summary
  Actress Sunny Leone thrown chappal on her celebrity manager Rajini. He pushed Sunny into swimming pool.
  Thursday, June 9, 2022, 13:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X