For Quick Alerts
  ALLOW NOTIFICATIONS  
  For Daily Alerts

  ಸುಶಾಂತ್ ಚಿತ್ರ 'ಪಾನಿ' ಸ್ಥಗಿತಗೊಳ್ಳಲು ನಿರ್ಮಾಪಕ ಆದಿತ್ಯ ಚೋಪ್ರಾ ಕಾರಣರಲ್ಲ!

  |

  ಸುಶಾಂತ್ ಸಿಂಗ್ ರಜಪೂತ್ ನಟಿಸಬೇಕಿದ್ದ ಬಹುನಿರೀಕ್ಷಿತ ಚಿತ್ರ 'ಪಾನಿ' ಸೆಟ್ಟೇರುವ ಅವಕಾಶವನ್ನೇ ಪಡೆದಿರಲಿಲ್ಲ. ಈ ಚಿತ್ರದ ಬಗ್ಗೆ ಸುಶಾಂತ್ ಅಪಾರ ಕನಸು ಕಂಡಿದ್ದರು. ಸುಶಾಂತ್ ಅವರ ಕಾರಣಕ್ಕಾಗಿಯೇ ನಿರ್ಮಾಪಕ ಆದಿತ್ಯ ಚೋಪ್ರಾ ಈ ಚಿತ್ರವನ್ನು ನಿಲ್ಲಿಸಿದ್ದರು ಎಂದು ನಿರ್ದೇಶಕ ಶೇಖರ್ ಕಪೂರ್ ಸಂದರ್ಶನವೊಂದರಲ್ಲಿ ಹೇಳಿದ್ದರು.

  Sushanth Singh Rajput ಕೊನೆಯದಾಗಿ ನಟಿಸಿದ್ದು ಈ ಹಾಡಿನಲ್ಲಿ | Last Song shoot | Filmibeat Kannada

  ಹೀಗೆ ಏಕಾಏಕಿ 'ಪಾನಿ' ಚಿತ್ರವನ್ನು ನಿಲ್ಲಿಸಿದಾಗ ಸುಶಾಂತ್ ತಮ್ಮ ಹೆಗಲ ಮೇಲೆ ತಲೆಯಿಟ್ಟು ಜೋರಾಗಿ ಅತ್ತಿದ್ದರು ಎಂದು ಶೇಖರ್ ಕಪೂರ್ ತಿಳಿಸಿದ್ದರು. 'ಸುಶಾಂತ್ ಜತೆ ನಾವು ಸಿನಿಮಾ ಮಾಡಲು ಸಾಧ್ಯವಿಲ್ಲ. ಪಾನಿ ಸಿನಿಮಾ ಮಾಡುವುದಿಲ್ಲ ಎಂದು ನಿರ್ಮಾಪಕರು ಹೇಳಿದ್ದರು. ಮತ್ತೆ ಸಿನಿಮಾ ಮಾಡಲು ಪ್ರಯತ್ನಿಸಿದರೂ ಅವರು ಮಾಡಲಿಲ್ಲ. ಇದರಿಂದ ಬೇಸರಗೊಂಡು ನಾನು ಭಾರತವನ್ನೇ ಬಿಟ್ಟು ಹೋದೆ' ಎಂದು ಶೇಖರ್ ಕಪೂರ್ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು. ಮುಂದೆ ಓದಿ.

  ಸುಶಾಂತ್ ಸಿಂಗ್ ಜೀವನಾಧಾರಿತ ಸಿನಿಮಾದ ನಾಯಕ ಇವರೇಸುಶಾಂತ್ ಸಿಂಗ್ ಜೀವನಾಧಾರಿತ ಸಿನಿಮಾದ ನಾಯಕ ಇವರೇ

  ಶೇಖರ್ ಕಪೂರ್ ಕಾರಣ

  ಶೇಖರ್ ಕಪೂರ್ ಕಾರಣ

  ಆದರೆ, ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂಬಂಧ ಪೊಲೀಸರ ಎದುರು ಖುದ್ದು ಹಾಜರಾಗಿ ಹೇಳಿಕೆ ದಾಖಲಿಸಿರುವ ಯಶ್ ರಾಜ್ ಫಿಲಂಸ್‌ನ ಆದಿತ್ಯ ಚೋಪ್ರಾ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಪಾನಿ ಚಿತ್ರವನ್ನು ಸುಶಾಂತ್ ಕಾರಣಕ್ಕೆ ನಿಲ್ಲಿಸಿದ್ದಲ್ಲ, ಅದಕ್ಕೆ ಕಾರಣ ಸ್ವತಃ ನಿರ್ದೇಶಕ ಶೇಖರ್ ಕಪೂರ್ ಎಂದು ತಿಳಿಸಿದ್ದಾರೆ.

  ಸುಶಾಂತ್ ಮೇಲೆ ಕೋಪವಿರಲಿಲ್ಲ

  ಸುಶಾಂತ್ ಮೇಲೆ ಕೋಪವಿರಲಿಲ್ಲ

  ಸುಶಾಂತ್ ಸಿಂಗ್ ಅವರ ಕುರಿತಾದ ಅಸಮಾಧಾನದ ಸಲುವಾಗಿ ಪಾನಿ ಚಿತ್ರವನ್ನು ನಿಲ್ಲಿಸಿರಲಿಲ್ಲ. ಶೇಖರ್ ಕಪೂರ್ ಅವರೊಂದಿಗಿನ ಸೃಜನಶೀಲ ಮನಸ್ತಾಪಗಳಿಂದಾಗಿ ಸ್ಥಗಿತಗೊಳಿಸಬೇಕಾಯಿತು. ಈ ಸಿನಿಮಾ ನಿಲ್ಲುವುದಕ್ಕೂ ಸುಶಾಂತ್‌ಗೂ ಯಾವುದೇ ಸಂಬಂಧ ಇರಲಿಲ್ಲ. ಸುಶಾಂತ್ ಜತೆ ಯಶ್ ರಾಜ್ ನಿರ್ಮಾಣ ಸಂಸ್ಥೆಗೆ ಯಾವುದೇ ಜಗಳ ಇರಲಿಲ್ಲ ಎಂದು ಆದಿತ್ಯ ಚೋಪ್ರಾ ಹೇಳಿದ್ದಾರೆ.

  ಕಥೆಯನ್ನೇ ತೋರಿಸಿರಲಿಲ್ಲ

  ಕಥೆಯನ್ನೇ ತೋರಿಸಿರಲಿಲ್ಲ

  ಸುಶಾಂತ್ ವಿರುದ್ಧ ವೈಯಕ್ತಿಕವಾಗಿ ಯಾವ ಕೋಪವೂ ಇರಲಿಲ್ಲ. ವಾಸ್ತವವೇನೆಂದರೆ ಸಿನಿಮಾಕ್ಕೆ ಸಿದ್ಧತೆ ಆರಂಭಿಸಿ ಒಂದು ವರ್ಷ ಕಳೆದರೂ ಶೇಖರ್ ಕಪೂರ್ ಅವರು ಚಿತ್ರದ ಕಥೆಯ ಒಂದೇ ಒಂದು ಪದವನ್ನೂ ಆದಿತ್ಯ ಚೋಪ್ರಾ ಅವರಿಗೆ ತೋರಿಸಿರಲಿಲ್ಲ. ಬರಿಯ ಮಾತು ಮಾತು ಮತ್ತು ಮಾತು ಮಾತ್ರವೇ ಇತ್ತು ಎನ್ನಲಾಗಿದೆ.

  ಈ ಬಜೆಟ್‌ಗೆ ಶಾರುಖ್ ಖಾನ್ ಬೇಕು

  ಈ ಬಜೆಟ್‌ಗೆ ಶಾರುಖ್ ಖಾನ್ ಬೇಕು

  ಪಾನಿ ಚಿತ್ರದ ಆರಂಭದ ಕೆಲಸಗಳಿಗೆ ಯಶ್ ರಾಜ್ ಫಿಲಂಸ್ ಆಗಲೇ ಐದಾರು ಕೋಟಿ ರೂ ವೆಚ್ಚ ಮಾಡಿತ್ತು. ಆರಂಭದಲ್ಲಿ ಚರ್ಚೆ ಮಾಡಿದ್ದ ಬಜೆಟ್‌ಗಿಂತಲೂ ಅಧಿಕ ಮೊತ್ತದ ಹಣ ಬೇಕಾಗುತ್ತದೆ ಎಂದು ಶೇಖರ್ ಕಪೂರ್ ಬಳಿಕ ಹೇಳತೊಡಗಿದ್ದರು. ಇದರಿಂದ ಕೋಪಗೊಂಡಿದ್ದ ಆದಿತ್ಯ ಚೋಪ್ರಾ, 'ನೀವು ತೋರಿಸುತ್ತಿರುವ ಬಜೆಟ್ ಬಳಸಿ ಸುಶಾಂತ್‌ ಜತೆ ಸಿನಿಮಾ ಮಾಡಲು ಆಗುವುದಿಲ್ಲ. ಈ ಬಜೆಟ್‌ಗೆ ಶಾರುಖ್ ಖಾನ್ ಬೇಕಾಗುತ್ತಾರೆ' ಎಂದಿದ್ದರು ಎನ್ನುವುದು ಬಹಿರಂಗವಾಗಿದೆ.

  ಸುಶಾಂತ್ ಸಾವಿನ ಹಿಂದೆ ಗಣ್ಯರ ಕೈವಾಡ: ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಪತ್ರಸುಶಾಂತ್ ಸಾವಿನ ಹಿಂದೆ ಗಣ್ಯರ ಕೈವಾಡ: ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಪತ್ರ

  English summary
  Sources revealed that Sushant Singh Rajput was not the reason for shelving of Paani movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X