twitter
    For Quick Alerts
    ALLOW NOTIFICATIONS  
    For Daily Alerts

    ಸುಶಾಂತ್ ಸಾವಿನ ಕಾರಣ ಪ್ರಕಟಿಸಿದ ವಿಕಿಪೀಡಿಯ ವಿರುದ್ಧ ಸಹೋದರಿ ಆಕ್ರೋಶ

    |

    2020, ಜೂನ್ 14 ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಸ್ಥಿತಿಯಲ್ಲಿ ಸುಶಾಂತ್ ಶವ ಸಿಕ್ಕಿತ್ತು. ಕೇಸ್ ದಾಖಲಿಸಿಕೊಂಡ ಮುಂಬೈ ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಇದು ಆತ್ಮಹತ್ಯೆ ಎಂಬ ನಿರ್ಧಾರ ಪ್ರಕಟಿಸಿದರು. ಆದರೆ, ಕುಟುಂಬದವರಿಂದ ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆ ಈ ಕೇಸ್ ಬೇರೆ ಬೇರೆ ಆಯಾಮದಲ್ಲಿ ತನಿಖೆ ಮುಂದುವರಿದಿದೆ.

    ಮುಂಬೈ ಪೊಲೀಸ್, ಪಾಟ್ನಾ ಪೊಲೀಸ್ ನಂತರ ಈಗ ಸಿಬಿಐ ತಂಡ ಸುಶಾಂತ್ ಸಾವಿನ ತನಿಖೆ ಮಾಡ್ತಿದೆ. ಸಿಬಿಐ ತನಿಖೆ ಬಹುತೇಕ ಪೂರ್ಣಗೊಂಡಿದೆ ಎಂದು ಹೇಳಲಾಗುತ್ತಿದೆ. ಆದರೆ, ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಈ ನಡುವೆ ಜಗತ್ತಿಗೆ ಮಾಹಿತಿ ಕೇಂದ್ರವಾಗಿರುವ ವಿಕಿಪೀಡಿಯ ವಿರುದ್ಧ ಸುಶಾಂತ್ ಸಿಂಗ್ ಸಹೋದರಿ ಆಕ್ರೋಶ ಹೊರಹಾಕಿದ್ದಾರೆ. ಸಿಬಿಐ ಅಂತಿಮ ವರದಿ ಇನ್ನು ಬಂದಿಲ್ಲ, ತನಿಖೆ ನಡೆಯುತ್ತಿದೆ, ಅಷ್ಟರೊಳಗೆ ಸುಶಾಂತ್ ಸಾವಿನ ಬಗ್ಗೆ ಸ್ಪಷ್ಟ ನಿಲುವು ಹೇಗೆ ತೆಗೆದುಕೊಂಡ್ರಿ ಎಂದು ಖಂಡಿಸಿದ್ದಾರೆ. ಅಷ್ಟಕ್ಕೂ ಏನಾಗಿದೆ? ಮುಂದೆ ಓದಿ...

    ಆತ್ಮಹತ್ಯೆ ಎಂದ ವಿಕಿಪೀಡಿಯ

    ಆತ್ಮಹತ್ಯೆ ಎಂದ ವಿಕಿಪೀಡಿಯ

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂಬಂಧ ಇನ್ನು ತನಿಖೆ ನಡೆಯುತ್ತಿದೆ. ಇದು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಸ್ಪಷ್ಟ ತೀರ್ಮಾನ ಇನ್ನು ಹೊರಬಿದ್ದಿಲ್ಲ. ಆದರೆ, ವಿಕಿಪೀಡಿಯದಲ್ಲಿ ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆ ಎಂದು ನಮೂದಿಸಲಾಗಿದೆ. ಇದನ್ನು ಖಂಡಿಸಿರುವ ಸುಶಾಂತ್ ಸಹೋದರಿ ವಿಕಿಪೀಡಿಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

    ಸುಶಾಂತ್ ಸಿಂಗ್ ಫ್ಲ್ಯಾಟ್ ಸ್ನೇಹಿತ ಸಿದ್ಧಾರ್ಥ್ ಬಂಧಿಸಿದ ಎನ್‌ಸಿಬಿಸುಶಾಂತ್ ಸಿಂಗ್ ಫ್ಲ್ಯಾಟ್ ಸ್ನೇಹಿತ ಸಿದ್ಧಾರ್ಥ್ ಬಂಧಿಸಿದ ಎನ್‌ಸಿಬಿ

    ಸಂಸ್ಥಾಪಕರ ಗಮನಕ್ಕೆ ತಂದ ಸಹೋದರಿ

    ಸಂಸ್ಥಾಪಕರ ಗಮನಕ್ಕೆ ತಂದ ಸಹೋದರಿ

    ಈ ಕುರಿತು ವಿಕಿಪೀಡಿಯ ಸಂಸ್ಥಾಪಕ ಜಿಮ್ಮಿ ವೇಲ್ಸ್ ಮತ್ತು ಸಹ-ಸಂಸ್ಥಾಪಕ ಲ್ಯಾರಿ ಸ್ಯಾಂಗರ್ ಟ್ವಿಟ್ಟರ್‌ನಲ್ಲಿ ಟ್ಯಾಗ್ ಮಾಡಿ ಅಸಮಾಧಾನ ಹೊರಹಾಕಿದ್ದಾರೆ. ಈ ಕೂಡಲೇ 'ಆತ್ಮಹತ್ಯೆ ಮಾಡಿಕೊಂಡರು' ಎನ್ನುವುದನ್ನು ತೆಗೆದು 'ತನಿಖೆ ಹಂತದಲ್ಲಿದೆ' ಎಂದು ಬದಲಾಯಿಸುವಂತೆ ಸುಶಾಂತ್ ಸಿಂಗ್ ಸಹೋದರಿ ಪ್ರಿಯಾಂಕಾ ಸಿಂಗ್ ಆಗ್ರಹಿಸಿದ್ದಾರೆ.

    ಈ ಹಿಂದೆಯೂ ಪ್ರಶ್ನಿಸಲಾಗಿತ್ತು

    ಈ ಹಿಂದೆಯೂ ಪ್ರಶ್ನಿಸಲಾಗಿತ್ತು

    ಸುಶಾಂತ್ ಸಿಂಗ್ ರಜಪೂತ್ ಸಾವಿನ ಸಂಬಂಧ ಸಿಬಿಐ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್), ಎನ್‌ಸಿಬಿ (ನಾರ್ಕೋಟಿಕ್ಸ್ ಕಂಟ್ರೊಲ್ ಬ್ಯೂರೋ) ಹಾಗೂ ಇಡಿ (ಜಾರಿ ನಿರ್ದೇಶನಾಲಯ) ತನಿಖೆ ಮಾಡ್ತಿದೆ. ಆದರೆ, ವಿಕಿಪಿಡೀಯದಲ್ಲಿ ಅದಾಗಲೇ ಆತ್ಮಹತ್ಯೆ ಎಂದು ಪ್ರಕಟಿಸಿರುವುದಕ್ಕೆ ಈ ಹಿಂದೆ ಸ್ಮಿತಾ ಫಾರಿಖ್ ಪ್ರಶ್ನಿಸಿದ್ದರು. ವಿಕಿಪೀಡಿಯದ ವಿಶ್ವಾಸಾರ್ಹತೆಗೆ ಇದು ಧಕ್ಕೆ ಎಂದಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ವಿಕಿಪೀಡಿಯ ಸಹ-ಸಂಸ್ಥಾಪಕ ಲ್ಯಾರಿ ಸ್ಯಾಂಗರ್ 'ಈ ಪ್ರಕರಣದಲ್ಲಿ ವಿಕಿಪಿಡೀಯವನ್ನು ಎಳೆದುತರುವುದು ಎಷ್ಟು ಸರಿ?' ಎಂದು ನೆಟ್ಟಿಗರನ್ನು ಪ್ರಶ್ನಿಸಿದ್ದರು.

    ಸುಶಾಂತ್ ಸಾವಿನ ಕುರಿತು ಮೌನವಹಿಸಿದ್ದು ಏಕೆ ಎಂದು ಬಹಿರಂಗ ಪಡಿಸಿದ ಕೃತಿ ಸನೂನ್ಸುಶಾಂತ್ ಸಾವಿನ ಕುರಿತು ಮೌನವಹಿಸಿದ್ದು ಏಕೆ ಎಂದು ಬಹಿರಂಗ ಪಡಿಸಿದ ಕೃತಿ ಸನೂನ್

    Recommended Video

    ಓದಿದ್ರೆ ಈ ಮಟ್ಟಕ್ಕೆ ಹೆಸರು ಮಾಡೋಕೆ ಆಗ್ತಾ ಇರ್ಲಿಲ್ಲ ಅನ್ಸುತ್ತೆ | Umesh Kinnal Comedy Khiladigalu Journey
    ವರ್ಷ ಮುಗಿತು....

    ವರ್ಷ ಮುಗಿತು....

    ಸುಶಾಂತ್ ಸಿಂಗ್ ಸಾವನ್ನಪ್ಪಿ ಒಂದು ವರ್ಷ ಮುಗಿಯಿತು. ಕುಟುಂಬದವರು, ಸ್ನೇಹಿತರು, ರೂಂಮೇಟ್ ಹೀಗೆ ಅನೇಕರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಡ್ರಗ್ಸ್ ಆಯಾಮದಲ್ಲಿ ತನಿಖೆ ಚುರುಕುಗೊಂಡಿತ್ತು. ಬಾಲಿವುಡ್‌ನ ಸ್ಟಾರ್ ಕಲಾವಿದರು ತನಿಖೆಗೆ ಒಳಪಟ್ಟರು. ಇದುವರೆಗೂ ಸುಶಾಂತ್ ಸಾವಿನ ಅಂತಿಮ ವರದಿ ಬಹಿರಂಗವಾಗಿಲ್ಲ.

    English summary
    Bollywood Late actor Sushant Singh's sister Priyanka is upset against Wikipedia.
    Tuesday, July 20, 2021, 8:28
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X