Don't Miss!
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- News
ಬಜೆಟ್ 2023: ಈ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರದಿಂದ ಸಾಮಾನ್ಯ ಜನರು ಏನನ್ನು ನಿರೀಕ್ಷಿಸುತ್ತಾರೆ?
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Finance
ಹೊಸ ಆಫರ್: ಗೃಹ ಸಾಲದ ಬಡ್ಡಿದರ ಇಳಿಸಿದ ಎಸ್ಬಿಐ!
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಾಯ್ ಫ್ರೆಂಡ್ ಜೊತೆ ನಟಿ ಸುಷ್ಮಿತಾ ಸೇನ್ ಬ್ರೇಕಪ್!
ಬಾಲಿವುಡ್‌ನಲ್ಲಿ ಬ್ರೇಕಪ್ ವಿಚಾರಗಳು ಹೆಚ್ಚಾಗಿ ಸದ್ದು ಮಾಡುತ್ತವೆ. ಬ್ರೇಕಪ್ ಅಥವಾ ವಿಚ್ಛೇದನದ ಸುದ್ದಿಗಳು ಬಾಲಿವುಡ್‌ನಲ್ಲಿ ಸರ್ವೇ ಸಾಮಾನ್ಯ. ಒಬ್ಬ ನಟ ಅಥವಾ ನಟಿ 2, 3 ಬಾರಿ ವಿಚ್ಛೇದನ ಅಥವಾ ಬ್ರೇಕಪ್ ಮೂಲಕ ಸುದ್ದಿ ಆಗುತ್ತಾರೆ. ಸದ್ಯ ನಟಿ ಸುಷ್ಮಿತಾ ಸೇನ್ ಬ್ರೇಕಪ್ ವಿಚಾರವಾಗಿ ಸುದ್ದಿ ಆಗಿದ್ದಾರೆ.
ಸುಷ್ಮಿತಾ ಸೇನ್ ಬಾಲಿವುಡ್‌ನಲ್ಲಿ ದೊಡ್ಡ ಹೆಸರು ಮಾಡಿದ ನಟಿ. ಅದಕ್ಕೂ ಮುನ್ನ ಮಿಸ್ ಯುನಿವರ್ಸ್ ಕಿರೀಟ ತೊಟ್ಟಾಕೆ. ಸುಷ್ಮಿತಾ ಅವರ ಸಿನಿ ಬದುಕಿನ ಜೊತೆಗೆ ಅವರ ವೈಯಕ್ತಿಕ ಬದುಕು ಕೂಡ ಅಷ್ಟೇ ಸದಾ ಚರ್ಚೆಯಲ್ಲಿ ಇರುತ್ತಿತ್ತು. ಯಾಕೆಂದರೆ ಸುಷ್ಮಿತಾ ಅವರು ಮದುವೆ ಆಗಿಲ್ಲ. ಹಾಗಾಗಿ ಆಕೆ ಯಾರ ಜೊತೆ ಮದುವೆ ಆಗುತ್ತಾರೆ ಎನ್ನುವ ವಿಚಾರ ಹಲವು ಬಾರಿ ಮುನ್ನೆಲೆಗೆ ಬಂದು ಹೋಗುತ್ತಿತ್ತು.
ಆದರೆ ಆಕೆಯ ಮದುವೆ ಬಗ್ಗೆ ಗಾಸಿಪ್‌ಗಳು ಕಡಿಮೆ ಆಗಿದ್ದು, ಆಕೆಯ ಬಾಳಿನಲ್ಲಿ ಮಾಡಲ್ ರೋಹ್‌ಮನ್ ಶಾಲ್ ಎಂಟ್ರಿ ಕೊಟ್ಟರು. ಇದೀಗ ಸುಷ್ಮಿತಾ ರೋಹ್‌ಮನ್ ಶಾಲ್ ಅವರಿಂದ ದೂರ ಆಗಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿಕೊಂಡಿದ್ದಾರೆ.
ಈ ಸಂಬಂಧ ಮುಗಿದು ಹೆಚ್ಚು ಕಾಲವಾಯ್ತು: ನಟಿ ಸುಷ್ಮಿತಾ ಸೇನ್
ನಟಿ ಸುಷ್ಮಿತಾ ಸೇನ್ ತಮ್ಮ ಬಹುಕಾಲದ ಗೆಳೆಯನೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಾರೆ. ಗೆಳೆಯ ಅಂದರೆ ಇವರು ಕೇವಲ ಸ್ನೇಹಿತ ಆಗಿ ಇರಲಿಲ್ಲ. ಬದಲಿಗೆ ಲಿವ್ ಇನ್ ರಿಲೇಶನ್‌ಶಿಪ್‌ನಲ್ಲಿ ಇದ್ದರು. ಹಾಗಾಗಿ ಈ ಜೋಡಿ ಮದುವೆ ಆಗುತ್ತೆ ಅಂತಲೂ ಹೇಳಲಾಗುತ್ತಿತ್ತು. ಆದರೆ ಅದಕ್ಕೂ ಮುನ್ನ ಬ್ರೇಕಪ್ ಆಗಿದೆ. ಈ ವಿಚಾರವಾಗಿ ಪೋಸ್ಟ್ ಹಂಚಿಕೊಂಡಿರುವ ಸುಷ್ಮಿತಾ ಸೇನ್ " ಈ ಸಂಬಂಧ ಮುಗಿದು ಹೋಗಿದೆ. ಸ್ನೇಹಿತರಾಗಿ ಪಯಣ ಆರಂಭಿಸಿದ್ದೇವೆ. ಇನ್ನೂ ನಾವು ಸ್ನೇಹಿತರು ಮಾತ್ರ, ಪ್ರೀತಿ ಸದಾ ಇರುತ್ತದೆ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ರೋಹ್‌ಮನ್ ಶಾಲ್ ಜೊತೆಗಿನ ಫೋಟೊ ಕೂಡ ಹಂಚಿಕೊಂಡಿದ್ದಾರೆ ಸುಷ್ಮಿತಾ ಸೇನ್.

ಸುಷ್ಮಿತಾ ರೋಹ್‌ಮನ್ ನಡುವೆ 15 ವರ್ಷದ ಅಂತರ!
ನಟಿ ಸುಷ್ಮಿತಾ ಸೇನ್ ಮತ್ತು ರೋಹ್‌ಮನ್ 2018ರಿಂದ ಜೊತೆಗೆ ಇದ್ದಾರೆ. ರೋಹ್‌ಮನ್ ಒಬ್ಬ ಮಾಡಲ್, ಸಾಕಷ್ಟು ಸೆಲೆಬ್ರೆಟಿ ವಿನ್ಯಾಸಕರ ಉಡುಪುಗಳಿಗೆ ರೋಹ್‌ಮನ್ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ. ಸುಷ್ಮಿತಾ ಜೊತೆಗೆ ರೋಹ್‌ಮನ್ ಹೆಸರು 2018ರಿಂದ ಕೇಳಿ ಬರುತ್ತಿದೆ. ಸುಷ್ಮಿತಾ ಸೇನ್ ರೋಹ್‌ಮನ್‌ಗಿಂತಲೂ ವಯಸ್ಸಿನಲ್ಲಿ 15 ವರ್ಷ ದೊಡ್ಡವರು. ಈ ಬಗ್ಗೆ ಸಾಕಷ್ಟು ಟ್ರೋಲ್ ಆಗಿದ್ದವು. ಆದರೆ ಅವರು ಮದುವೆ ಆಗುತ್ತಾರೆ ಎನ್ನಲಾಗಿತ್ತು. ಇದೀಗ ಇವರ ಸಂಬಂಧ ಬ್ರೇಕಪ್‌ನಲ್ಲಿ ಕೊನೆಯಾಗಿದೆ.

ಸುಷ್ಮಿತಾ ಕುಟುಂಬದ ಜೊತೆಗೆ ಖುಷಿಯಾಗಿ ಇದ್ದ ರೋಹ್‌ಮನ್!
ಸುಷ್ಮಿತಾ ಮದುವೆ ಆಗಿಲ್ಲ. ಆದರೆ ಇಬ್ಬರು ಮಕ್ಕಳನ್ನು ದತ್ತು ಪಡೆದು ಸಾಕುತ್ತಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿಗೆ ಸುಷ್ಮಿತಾ ತಾಯಿ ಆಗಿ ಜೀವನ ಸಾಗಿಸುತ್ತಿದ್ದರು. ಇವರ ಕುಟುಂಬಕ್ಕೆ ಎಂಟ್ರಿ ಕೊಟ್ಟ ರೋಹ್‌ಮನ್ ಶಾಲ್ ಕೂಡ ಅವರೊಂದಿಗೆ ಖುಷಿಯಾಗಿ ಇದ್ದರು. ರೋಹ್‌ಮನ್ ಇರುವ ಹಲವು ಫೋಟೊಗಳನ್ನು ಸುಷ್ಮಿತಾ ಮತ್ತು ಅವರ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ರೋಹ್‌ಮನ್ ಕೂಡ ಸುಷ್ಮಿತಾ ಕುಟುಂಬದ ಸದಸ್ಯನೇ ಆಗಿ ಬಿಟ್ಟಿದ್ದ. ಜೊತೆಗೆ ಸುಷ್ಮಿತಾ ಅವರ ಜೊತೆಗೆ ಅವರ ಮನೆಯಲ್ಲೇ ವಾಸವಿದ್ದ. ಬ್ರೇಕಪ್ ಬಳಿಕ ಮನೆಯಿಂದ ಹೊರ ಬಂದಿದ್ದಾನೆ.

ವೆಬ್ ಸರಣಿಯಲ್ಲಿ ಸುಷ್ಮಿತಾ ನಟನೆ!
ಬ್ರೇಕಪ್ ಬಗ್ಗೆ ಒಂದಷ್ಟು ಗಾಸಿಪ್‌ಗಳು ಹಬ್ಬಿದ್ದವು. ಆದರೆ ಬ್ರೇಕಪ್ ವಿಚಾರವನ್ನು ಅಧಿಕೃತಗೊಳಿಸಿ ಈ ಬಗ್ಗೆ ಸುಷ್ಮಿತಾ ಸ್ಪಷ್ಟನೆ ನೀಡಿದ್ದಾರೆ. ಸದ್ಯ ಸುಷ್ಮಿತಾ ಮತ್ತೆ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕೊನೆಯದಾಗಿ ಆಕೆ 'ಆರ್ಯ' ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದಾರೆ.