For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಟಿ, ಮಾಜಿ ವಿಶ್ವ ಸುಂದರಿ ಪುತ್ರಿ ಸಿನಿಮಾಕ್ಕೆ ಎಂಟ್ರಿ

  |

  ಬಾಲಿವುಡ್ ಖ್ಯಾತ ನಟಿ, ಮಾಜಿ ವಿಶ್ವ ಸುಂದರಿ ಸುಶ್ಮಿತಾ ಸೇನ್ ಪುತ್ರಿ ಸಿನಿಮಾ ಲೋಕಕ್ಕೆ ಪಾದಾರ್ಪಣೆ ಮಾಡಿದ್ದಾರೆ.

  ಸುಶ್ಮಿತಾ ಸೇನ್ ಅವರ ವರ್ಷದ ಪುತ್ರಿ ರೇನೆ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದು, 'ಸುಟ್ಟೇಬಾಜ್' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ನಿನ್ನೆ (ಭಾನುವಾರ) ವಷ್ಟೆ ಪ್ರಾರಂಭವಾಗಿದೆ.

  ಸುಶ್ಮಿತಾ ಸೇನ್ ಅವರೇ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದಂತೆ, ರೇನೆ ಗೆ ನಟನೆ ಬಹಳ ಇಷ್ಟವಂತೆ, ಆದರೆ ಸುಶ್ಮಿತಾ ಅವರೇ ಅವರನ್ನು ತಡೆಯುತ್ತಿದ್ದರಂತೆ. ಆದರೆ ಈಗ ತಾಯಿಯ ಒಪ್ಪಿಗೆ ಪಡೆದು ಸಿನಿಮಾದಲ್ಲಿ ನಟನೆ ಆರಂಭಿಸಿದ್ದಾರೆ ರೇನೆ.

  ಕಬೀರ್ ಖುರಾನಾ ರ ಮೊದಲ ಸಿನಿಮಾ

  ಕಬೀರ್ ಖುರಾನಾ ರ ಮೊದಲ ಸಿನಿಮಾ

  ಹೊಸ ನಿರ್ದೇಶಕ ಕಬೀರ್ ಖುರಾನಾ ಎಂಬುವರು ಈ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಇದು ಅವರ ಮೊದಲ ಸಿನಿಮಾ ಆಗಿದೆ. ಸಿನಿಮಾದ ಶೂಟಿಂಗ್‌ನ ಕೆಲವು ಚಿತ್ರಗಳನ್ನು ಅವರು ಇನ್‌ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿದ್ದಾರೆ.

  ಮಗಳ ಹಾಗೂ ತಾಯಿ ಕುರಿತಾದ ಸಿನಿಮಾ

  ಮಗಳ ಹಾಗೂ ತಾಯಿ ಕುರಿತಾದ ಸಿನಿಮಾ

  ಸುಟ್ಟೇಬಾಜ್ ಸಿನಿಮಾವು ಮಗಳು ಹಾಗೂ ತಂದೆ-ತಾಯಿ ನಡುವಿನ ಕುರಿತಾದ ಕತೆ ಹೊಂದಿದ್ದು. ಸುಶ್ಮಿತಾ ಪುತ್ರಿ ಮಾತುಕೇಳದ ಮಗಳ ಪಾತ್ರದಲ್ಲಿ ನಟಿಸಿದ್ದಾರೆ. ತಾಯಿಯಾಗಿ ಪದ್ಮಾವತ್, ಶಕುಂತಲಾ ದೇವಿ ಸಿನಿಮಾಗಳಲ್ಲಿ ನಟಿಸಿದ್ದ ಕೋಮಲ್ ಚಾಬ್ರಿಯಾ ನಟಿಸಿದ್ದಾರೆ. ತಂದೆ ಪಾತ್ರದಲ್ಲಿ ಸ್ವದೇಸ್ ಖ್ಯಾತಿಯ ರಾಹುಲ್ ವೊಹರಾ ನಟಿಸಿದ್ದಾರೆ.

  ನಿಯಮ ವಿಧಿಸಿದ್ದ ಸುಶ್ಮಿತಾ ಸೇನ್

  ನಿಯಮ ವಿಧಿಸಿದ್ದ ಸುಶ್ಮಿತಾ ಸೇನ್

  ಪುತ್ರಿ ರೇನೆ ಪದವಿ ಪೂರೈಸಿದ ಬಳಿಕವಷ್ಟೆ ಸಿನಿಮಾ ರಂಗಕ್ಕೆ ಕಾಲಿಡಬಹುದು ಎಂದು ಸುಶ್ಮಿತಾ ಸೇನ್ ಸಂದರ್ಶನದಲ್ಲಿ ಹೇಳಿದ್ದರು. ಅಂತೆಯೇ ಪದವಿಯ ಕೊನೆಯ ವರ್ಷದಲ್ಲಿ ಸಿನಿಮಾ ಲೋಕಕ್ಕೆ ಬಂದಿದ್ದಾರೆ ರೇನೆ.

  ಅಭಿಮಾನಿಗಳು ಕಳುಹಿಸಿದ ಮೇಘನಾ ರಾಜ್ ಫೋಟೋಗೆ ಜೀವ ಕೊಟ್ಟ ಕರಣ್ | Filmibeat Kannada
  ರೇನೆ, ಸುಶ್ಮಿತಾ ರ ದತ್ತು ಪುತ್ರಿ

  ರೇನೆ, ಸುಶ್ಮಿತಾ ರ ದತ್ತು ಪುತ್ರಿ

  ಸುಶ್ಮಿತಾ ಸೇನ್, ರೇನೆಯನ್ನು 2000 ನೇ ಇಸವಿಯಲ್ಲಿ ದತ್ತು ಪಡೆದರು. ರೇನೆ ಬಿಟ್ಟು ಅಲಿಶಾ ಎಂಬ ಇನ್ನೊಬ್ಬ ಮಗಳನ್ನು ಸಹ ಸುಶ್ಮಿತಾ ಸೇನ್ ದತ್ತು ಪಡೆದಿದ್ದಾರೆ. ಇನ್ನೂ ಮದುವೆ ಆಗಿರದ ಸುಶ್ಮಿತಾ, ರೋಮನ್ ಶಾವಲ್ ಎಂಬುವರೊಡನೆ ಲಿವ್ ಇನ್ ರಿಲೇಶನ್‌ನಲ್ಲಿದ್ದಾರೆ.

  English summary
  Actress Sushmita Sen's daughter Renee started acting career. She acting in Suttabaazi movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X