»   » ಉಸಿರಾಟದ ತೊಂದರೆ ತಬೂ ಆಸ್ಪತ್ರೆಗೆ ದಾಖಲು

ಉಸಿರಾಟದ ತೊಂದರೆ ತಬೂ ಆಸ್ಪತ್ರೆಗೆ ದಾಖಲು

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗದ ಪ್ರತಿಭಾವಂತ ನಟಿ ತಬೂ ಅವರನ್ನು ಸೋಮವಾರ ಆಸ್ಪತ್ರೆಗೆ ಸೇರಿಸಲಾಗಿದೆ. ವಿಶಾಲ್ ಭಾರದ್ವಾಜ್ ಅವರ ಹೈದರ್ ಚಿತ್ರದ ಶೂಟಿಂಗ್ ಸಂದರ್ಭದಲ್ಲಿ ತಬೂ ಅವರು ಅಸ್ವಸ್ಥರಾಗಿದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾಶ್ಮೀರದಲ್ಲಿ ಹೈದರ್ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ತಬೂ ಅವರಿಗೆ ಉಸಿರಾಡಲು ಕಷ್ಟವಾಗಿದೆ. ತಕ್ಷಣವೇ ಷೇರ್ ಇ ಕಾಶ್ಮೀರ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್(SKIMS) ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಚಿತ್ರ ತಂಡ ಹೇಳಿದೆ. ಶ್ರೀನಗರದ ನಿಷಾದ್ ಪ್ರದೇಶದಲ್ಲಿ ಶೂಟಿಂಗ್ ನಡೆಯುವಾಗ ಈ ಘಟನೆ ನಡೆದಿದೆ. ಚಳಿ ಗಾಳಿಯಿಂದ ತಪ್ಪಿಸಿಕೊಳ್ಳಲು ಬೆಂಕಿ ಶಾಕ ತೆಗೆದುಕೊಳ್ಳುತ್ತಿದ್ದರು. ಇಲ್ಲಿನ ತಂಪು ವಾತಾವರಣಕ್ಕೆ ಅವರು ಒಗ್ಗಿಕೊಂಡಿರಲಿಲ್ಲ ಎಂದು ತಿಳಿದು ಬಂದಿದೆ.

Tabu Hospitalized For Breathlessness

ಶೂಟಿಂಗ್ ಸ್ಥಳದಿಂದ ಸುಮಾರು 13 ಕಿ.ಮೀ ದೂರದಲ್ಲಿದ್ದ ಆಸ್ಪತ್ರೆಗೆ ಆದಷ್ಟು ಬೇಗ ಕರೆದುಕೊಂಡು ಹೋಗಲಾಗಿದೆ. ಚಿತ್ರೀಕರಣದ ಸ್ಥಳದಲ್ಲಿ ಸೂಕ್ತ ಸುರಕ್ಷತೆ ವ್ಯವಸ್ಥೆ ಇರಲಿಲ್ಲ ಎನ್ನಲಾಗಿದೆ. ತಬೂ ಅವರ ಆರೋಗ್ಯ ಪರಿಸ್ಥಿತಿ ಈಗ ಸುಧಾರಿಸಿದೆ. ವಿಶ್ರಾಂತಿ ಅಗತ್ಯವಿದೆ ಎಂದು ವೈದ್ಯರು ಹೇಳಿದ್ದಾರೆ.

ಸಂಜೆ ವೇಳೆಗೆ ತಬೂ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದ್ದು, ವಿಶ್ರಾಂತಿ ಪಡೆದುಕೊಳ್ಳದೆ ಮತ್ತೆ ಶೂಟಿಂಗ್ ಮುಂದುವರೆಸಿದರು ಎಂದು ತಿಳಿದು ಬಂದಿದೆ. ವಿಲಿಯಂ ಷೇಕ್ಸ್ ಪಿಯರ್ ಅವರ 'ಹ್ಯಾಮ್ಲೆಟ್' ದುರಂತ ಕಥೆಯನ್ನು ಆಧರಿಸಿ 'ಹೈದರ್' ಹೆಸರಿನಲ್ಲಿ ನಿರ್ದೇಶಕ ವಿಶಾಲ್ ಭಾರದ್ವಾಜ್ ಅವರು ಹಿಂದಿ ಬೆಳ್ಳಿತೆರೆಗೆ ತರುತ್ತಿದ್ದಾರೆ. ಹೈದರ್ ಚಿತ್ರದಲ್ಲಿ ಶಹೀದ್ ಕಪೂರ್, ಶ್ರದ್ಧಾ ಕಪೂರ್, ತಬು ಹಾಗೂ ಇರ್ಫಾನ್ ಕಪೂರ್ ತಾರಾಗಣದಲ್ಲಿದ್ದಾರೆ. ಚಿತ್ರ ನಿರ್ದೇಶಕ, ಸಾಹಿತಿ, ನಿರ್ಮಾಪಕ, ಸಂಗೀತಗಾರ ವಿಶಾಲ್ ಭಾರದ್ವಾಜ್ ಅವರ ಮಕ್ಬೂಲ್ ಚಿತ್ರ ಷೇಕ್ಸ್ ಪಿಯರ್ ಅವರ ಮ್ಯಾಕ್ ಬೆತ್ ಕಥೆ ಆಧರಿಸಿತ್ತು. ಓಂಕಾರ ಚಿತ್ರ ಒಥೆಲೋ ಆಧರಿಸಿದೆ.

English summary
Actress Tabu, who was shooting for Vishal Bharadwaj's Haider in Kashmir, fell ill due to severe cold and fever. It is reported that the Jai Ho actress was feeling suffocated and is admitted to Sher-i-Kashmir Institute of Medical Sciences (SKIMS), today morning.
Please Wait while comments are loading...