»   » ಮುಂಬೈನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕಿರುತೆರೆ ನಟ ಕರಣ್

ಮುಂಬೈನಲ್ಲಿ ನಿಗೂಢವಾಗಿ ಸಾವನ್ನಪ್ಪಿದ ಕಿರುತೆರೆ ನಟ ಕರಣ್

Posted By:
Subscribe to Filmibeat Kannada

ಹಿಂದಿ ಕಿರುತೆರೆಯ ಜನಪ್ರಿಯ ನಟ ಕರಣ್ ಪರನ್ಜಪೆ ನಿಗೂಢವಾಗಿ ಸಾವನ್ನಪ್ಪಿದ್ದಾರೆ. ಭಾನುವಾರ (ಮಾರ್ಚ್ 25) ಬೆಳಗ್ಗೆ 11 ಗಂಟೆ ಸುಮಾರಿಗೆ ಮುಂಬೈನಲ್ಲಿರುವ ತಮ್ಮ ನಿವಾಸದಲ್ಲಿ ಕರಣ್ ಮೃತಪಟ್ಟಿದ್ದಾರೆ.

26 ವರ್ಷ ವಯಸ್ಸಿನ ಕರಣ್ ಸಾವಿಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಕೆಲ ವೆಬ್ ತಾಣ ಹಾಗೂ ಪತ್ರಿಕೆಗಳು ವರದಿ ಮಾಡಿರುವ ಪ್ರಕಾರ, ಹೃದಯಾಘಾತದಿಂದ ಕರಣ್ ಕೊನೆಯುಸಿರೆಳೆದಿದ್ದಾರೆ.

'ಸಂಜೀವಿನಿ' ಹಾಗೂ 'ದಿಲ್ ಮಿ ಗಯೇ' ಧಾರಾವಾಹಿಗಳಲ್ಲಿ ಅಭಿನಯಿಸಿ ಕರಣ್ ಜನಪ್ರಿಯತೆ ಪಡೆದುಕೊಂಡಿದ್ದರು. 'ದಿಲ್ ಮಿ ಗಯೇ' ಧಾರಾವಾಹಿಯ ಜಿಗ್ನೇಶ್ ಪಾತ್ರ ಕರಣ್ ಗೆ ಖ್ಯಾತಿ ತಂದುಕೊಂಡಿತ್ತು.

TV Actor Karan Paranjape found dead at his residence

ತಂದೆ ಇಲ್ಲದೆ ತಾಯಿಯ ಆಸರೆಯಲ್ಲಿ ಬೆಳೆದವರು ಕರಣ್ ಪರನ್ಜಪೆ. ಮಗನ ಅಕಾಲಿಕ ಸಾವಿನಿಂದ ಕರಣ್ ತಾಯಿ ಆಘಾತಕ್ಕೊಳಗಾಗಿದ್ದಾರೆ. ಕರಣ್ ಅಗಲಿಕೆಗೆ ಸಹ ಕಲಾವಿದರು ಮಮ್ಮಲ ಮರುಗಿದ್ದಾರೆ.

English summary
26 year old TV Actor Karan Paranjape found dead at his Mumbai residence on Sunday (March 25th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X