For Quick Alerts
  ALLOW NOTIFICATIONS  
  For Daily Alerts

  ಬಟ್ಟೆ ಬದಲು ಬಾಡಿ ಪೇಂಟಿಂಗ್: ಟ್ರೋಲ್ ಆದ ಉರ್ಫಿ ಜಾವೇದ್!

  |

  ಉರ್ಫಿ ಜಾವೇದ್ ಈಕೆ ಹೆಸರು ಬಂದರೆ ಸಾಕು, ಈಕೆ ಯಾವ ಅವತಾರದಲ್ಲಿ ಕಾಣಿಸಿಕೊಂಡಿದ್ದಾಳೆ. ಈ ಬಾರಿ ಅದೇನು ಎಡವಟ್ಟು ಮಾಡುತ್ತಾಳೆ ಎನ್ನುವ ಪ್ರಶ್ನೆಗಳು ಮೂಡುತ್ತವೆ. ಅಷ್ಟರ ಮಟ್ಟಿ ಉರ್ಫಿ ಜಾವೇದ್ ಹೆಸರುವಾಸಿ. ಉರ್ಫಿ ಎಲ್ಲಾದಕ್ಕಿಂತಲೂ ತನ್ನ ನಿತ್ಯದ ಉಡುಪುಗಳಿಂದಲೇ ಹೆಚ್ಚು ಸುದ್ದಿ ಆಗುತ್ತಾಳೆ.

  ದಿನ ಬೆಳಗಾದರೆ ಸಾಕು ಉರ್ಫಿಯ ಹಿಂದೆ ಕ್ಯಾಮೆರಾಗಳು ಸಾಲು ಗಟ್ಟಿ ನಿಲ್ಲುತ್ತವೆ. ಯಾಕೆಂದರೆ ನಿತ್ಯವೂ ಉರ್ಫಿ ಜಾವೇದ್ ಒಂದಲ್ಲಾ ಒಂದು ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಹೊಸ, ಹೊಸದಾಗಿ ಕಾಸ್ಟ್ಯೂಂಗಳನ್ನು ಪ್ರಯೋಗ ಮಾಡುತ್ತಾರೆ. ಹಾಗಾಗಿ ಆಕೆಯ ಅವತಾರ ನೋಡಲೆಂದೇ ಹಲವು ಅಭಿಮಾನಿಗಳು ಕಾಯುತ್ತಿರುತ್ತಾರೆ.

  ಕೆಂಪು ಸೀರೆಯುಟ್ಟ ಶಾರುಖ್ ಪುತ್ರಿ ಕಂಡು ದೀಪಿಕಾ ನೆನೆದ ಫ್ಯಾನ್ಸ್ : ವೈರಲ್ ಆದ ಫೋಟೊ ಕಥೆಯೇನು?ಕೆಂಪು ಸೀರೆಯುಟ್ಟ ಶಾರುಖ್ ಪುತ್ರಿ ಕಂಡು ದೀಪಿಕಾ ನೆನೆದ ಫ್ಯಾನ್ಸ್ : ವೈರಲ್ ಆದ ಫೋಟೊ ಕಥೆಯೇನು?

  ಸದ್ಯ ಸಾಮಾಜಿಕ ಮಾಧ್ಯಮದಲ್ಲಿ ಉರ್ಫಿ ಹೊಸ ಸೆನ್ಸೇಷನ್ ಸೃಷ್ಟಿಸಿದ್ದಾರೆ. ತಮ್ಮ ಮಾದಕ ನೋಟದಿಂದಲೇ ಎಲ್ಲರನ್ನೂ ಬೆರಗುಗೊಳಿಸುವ ಉರ್ಫಿ ಈ ಬಾರಿಯೂ ತಮ್ಮ ನಯಾ ಅವತಾರದೊಂದಿಗೆ ಸಿಕ್ಕಾಪಟ್ಟೆ ಸುದ್ದಿ ಆಗಿದ್ದಾರೆ. ಅಷ್ಟೇ ಅಲ್ಲಾ ಟ್ರೋಲ್‌ಗೂ ಕೂಡ ಉರ್ಫಿ ತುತ್ತಾಗಿದ್ದಾರೆ.

  ಬಟ್ಟೆ ಬಿಟ್ಟು ಬಾಡಿ ಪೇಂಟಿಂಗ್ ಮಾಡಿಸಿಕೊಂಡ ಉರ್ಫಿ ಜಾವೇದ್!

  ಪ್ರತಿ ಭಾರಿ ಡಿಫ್ರೆಂಟ್​ ಆಗಿ ಕಾಣಿಸಿಕೊಳ್ಳುವ ಉರ್ಫಿ ಈ ಬಾರಿ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಬಿಳಿ ಬಣ್ಣದ ಬ್ಲೇಸರ್ ಮತ್ತು ಪ್ಯಾಂಟ್ ತೊಟ್ಟಿದ್ದಾರೆ ಉರ್ಫಿ. ಆದರೆ ಬ್ಲೇಸರ್ ಒಳಗೆ ಶರ್ಟ್ ಇಲ್ಲ, ಟೀ ಶರ್ಟ್ ಇಲ್ಲ, ಏನೂ ಇಲ್ಲ. ಬದಲಿಗೆ ಪೇಂಟಿಂಗ್ ಮಾಡಿಸಿಕೊಂಡಿದ್ದಾರೆ. ತಮ್ಮ ದೇಹದ ಚೆರ್ರಿ ಬ್ಲಾಸಮ್ ಚಿತ್ರ ಬಿಡಿಸಿಕೊಂಡಿದ್ದಾರೆ. ಗಿಡದ ಬಳ್ಳಿಯಲ್ಲಿ ಹೂ ಇರುವ ಚಿತ್ರವನ್ನು ಬಿಡಿಸಿಕೊಂಡಿದ್ದಾರೆ. ಅದೇ ರೀತಿ ತಮ್ಮ ಕೈಗಳ ಮೇಲೂ ಚಿತ್ರಗಳನ್ನು ಬಿಡಿಸಿಕೊಂಡು ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ.

  ಎರಡನೇ ಮದುವೆ ಸಂಭ್ರಮದಲ್ಲಿ ಬಾಲಿವುಡ್‌ ನಟ, ನಿರ್ದೇಶಕ ಫರ್ಹಾನ್ ಅಖ್ತರ್!ಎರಡನೇ ಮದುವೆ ಸಂಭ್ರಮದಲ್ಲಿ ಬಾಲಿವುಡ್‌ ನಟ, ನಿರ್ದೇಶಕ ಫರ್ಹಾನ್ ಅಖ್ತರ್!

  ಟ್ರೋಲ್ ಆಯ್ತು ಉರ್ಫಿ ಹೊಸ ಅವತಾರ!

  ಉರ್ಫಿ ಜಾವೇದ್ ಅವರ ಈ ನಯ ಅವತಾರ ಕಂಡು ನೆಟ್ಟಿಗರು ಕೆಂಡಾಮಂಡಲ ಆಗಿದ್ದಾರೆ. ಈಕೆ ಒಬ್ಬ ಡಿಸಾಸ್ಟರ್ ಕ್ವೀನ್ ಎಂದು ಕರೆಯುತ್ತಾರೆ. ಅಷ್ಟೇ ಯಾಕೆ ಉರ್ಫಿ ಅವತಾರ ನೋಡಿ, ನೋಡಿ ಸಾಕಾಗಿದೆ ಎನ್ನುವ ಕಮೆಂಟ್‌ಗಳು ವ್ಯಕ್ತವಾಗಿವೆ. ಈಗಾಗಲೇ ತಮ್ಮ ಔಟ್‌ಫಿಟ್‌ಗಳ ವಿಚಾರದಲ್ಲಿ ಉರ್ಫಿ ಜಾವೇದ್ ಹಲವು ಬಾರಿ ಟ್ರೋಲ್ ಆಗಿದ್ದಾರೆ. ವಿಪರಿರ್ಯಾಸ ಅಂದರೆ ಉರ್ಫಿ ಜಾವೇದ್ ಯಾವುದೇ ಡ್ರೆಸ್ ತೊಟ್ಟರೂ ಟ್ರೋಲ್ ಆಗುತ್ತಿದ್ದಾರೆ. ಟ್ರೋಲ್​ ಆಗುವ ರೀತಿಯಲ್ಲೇ ಪ್ರತಿಬಾರಿ ವಿಚಿತ್ರ ಉಡುಗೆಗಳನ್ನು ಧರಿಸಿ ಉರ್ಫಿ ಕ್ಯಾಮರಾಗೆ ಪೋಸ್​ ಕೊಡುತ್ತಾರೆ. ಈ ಹೊಸ ಅವತಾರ ಕಂಡು ಕೆಲ ನೆಟ್ಟಿಗರು ದಯವಿಟ್ಟು ನಮ್ಮ ಕಣ್ಣುಗಳನ್ನು ದಾನ ಮಾಡಲು ಸಿದ್ದರಾಗಿದ್ದೇವೆ ಎಂದು ಉರ್ಫಿ ಜಾವೇದ್​ ಕಾಲೆಳೆಯುತ್ತಿದ್ದಾರೆ.

  ಒಂದು ಪ್ಯಾಂಟ್ ತೋಳು ಇಲ್ಲದ ಕಾಸ್ಟ್ಯೂಮ್ ಧರಿಸಿದ್ದ ನಟಿ!

  ಇದನ್ನು ಮುನ್ನ ಉರ್ಫಿ ಟ್ರೋಲ್ ಆಗಿದ್ದು ಬಾಡಿಕಾನ್ ಉಡುಪಿನಲ್ಲಿ. ಉರ್ಫಿ ಜಾವೇದ್ ಅವರು ಬಾಡಿಕಾನ್ ಡ್ರೆಸ್ ತೊಟ್ಟಿದ್ದರು. ಈ ಬಟ್ಟೆ ಜೆಮ್ ಶೂಟ್ ಮಾದರಿಯಲ್ಲಿ ಡಿಸೈನ್ ಆಗಿದೆ. ಆದರೆ ಆ ಬಟ್ಟೆ ಒಂದು ಕಾಲಿನ ತೋಳು ಇಲ್ಲ. ಜೊತೆಗೆ ಅದು ಚರ್ಮದ ಬಣ್ಣದ ಬಟ್ಟೆ. ಈ ಬಟ್ಟೆಯಲ್ಲಿ ಆಕೆ ಪ್ಯಾಂಟ್ ಹಾಕಿದ್ದಾಳೋ ಇಲ್ಲವೂ ಎನ್ನುವ ಕನ್‌ಫ್ಯುಷನ್ ಆಗುತ್ತೆ. ಈ ಡ್ರೆಸ್‌ನಲ್ಲಿ ನಟಿ ಉರ್ಫಿ ಸ್ಟೈಲಿಶ್ ವಾಕ್ ಮಾಡಿದ್ದಾಳೆ.

  ಹೈಹೀಲ್ಸ್ ಧರಿಸಿ ನಿಲ್ಲಲ್ಲು ಪರದಾಡಿದ್ದ ಉರ್ಫಿ!

  ಉರ್ಫಿ ಎಲ್ಲಾರಂತೆ ಅಲ್ಲ, ಆಕೆ ಯಾವುದನ್ನು ಮರೆಮಾಚುವುದಿಲ್ಲ. ಹಾಗೆ ಆಕೆ ಕ್ಯಾಮೆರ ಮುಂದೆ ಬಂದಾಗ ಏನೇ ಆದ್ರೂ ಅದನ್ನು ತೇಪೆ ಹಾಕುವುದಿಲ್ಲ. ಹಾಗೆ ಇತ್ತೀಚೆಗೆ ಲೆದರ್ ಮೆಟೀರಿಯಲ್ ಡ್ರೆಸ್‌ನಲ್ಲಿ ಉರ್ಫಿ ಕಾಣಿಸಿಕೊಂಡಿದ್ದರು. ಆದರೆ ಹೈ ಹೀಲ್ಸ್ ಆಕೆಯ ಕೈ ಕೊಟಗ್ಟಿತ್ತು. ಹೀಲ್ಸ್ ನಲ್ಲಿ ನಿಲ್ಲಲು ಆಗದೇ ನಟಿ ಉರ್ಫಿ ಪರದಾಡಿದ್ದರು. ಈ ವಿಡಿಯೋ ಕೂಡ ವೈರಲ್ ಆಗಿತ್ತು. ಉರ್ಫಿನ್ನು ಟ್ರೋಲ್ ಮಾಡಲಾಗಿತ್ತು. ಈಗ ಉರ್ಫಿ ಮತ್ತೆ ಅದ್ಯಾವ ನಯಾ ಅವತಾರ ತಾಳಲಿದ್ದಾಳೆ. ಯಾವಾಗ ಕ್ಯಾಮೆರ ಮುಂದೆ ಬರುತ್ತಾಳೆ ಎನ್ನುವ ಕುತೂಹಲಗಳು ಹೆಚ್ಚಾಗಿವೆ.

  English summary
  Urfi Javed Again Troll For Her New Costume,
  Saturday, February 19, 2022, 8:49
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X