For Quick Alerts
  ALLOW NOTIFICATIONS  
  For Daily Alerts

  ಉರ್ಫಿ ಜಾವೇದ್ ಟಾಪ್ ಲೆಸ್ ಅವತಾರ ಕಂಡು ದಂಗಾದ ಫ್ಯಾನ್ಸ್!

  |

  ಸೆಲೆಬ್ರೆಟಿಗಳು ಎಂದ ತಕ್ಷಣ ನೂರೆಂಟು ಸುದ್ದಿಗಳಿಗೆ ವೈರಲ್ ಆಗುತ್ತಲೇ ಇರುತ್ತಾರೆ. ಅವರು ಏನೇ ಒಂದು ಸಣ್ಣ ತಪ್ಪು ಮಾಡಿದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗುತ್ತಾರೆ. ಅವರ ಜೀವನದ ಪ್ರತಿ ಕ್ಷಣದ ಮೇಲೆ ನೆಟ್ಟಿಗರ ಕಣ್ಣು ಇದ್ದೇ ಇರುತ್ತೆ ಎಂಬುದಕ್ಕೆ ಹಲವಾರು ಉದಾಹರಣೆಗಳನ್ನು ನೀಡಬಹುದು. ಆದರೆ ಮಾಡೆಲ್ ಹಾಗೂ ನಟಿಯೂ ಆಗಿರುವ ಉರ್ಫಿ ಜಾವೇದ್ ಫ್ಯಾಶನ್ ಹೆಸರಿನಲ್ಲಿ ಬೇರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ಫ್ಯಾಶನ್ ಹೆಸರಿನಲ್ಲಿ ಇವರು ಹಾಕಿಕೊಳ್ಳುವ ಬಟ್ಟೆಗಳು ಇದಕ್ಕೆ ಸಾಕ್ಷಿ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿಮಾಡ್ ಆಗಿ ಫೋಟೊಶೂಟ್ ಮಾಡಿಸಿಕೊಂಡು ಅವುಗಳನ್ನು ಹಂಚಿಕೊಳ್ಳುವುದರ ಮೂಲಕ ಸುದ್ದಿಯಾಗಿದ್ದರು. ಬಿಗ್ ಬಾಸ್ ಓಟಿಟಿ ಮೂಲಕ ಜನಪ್ರಿಯತೆ ಪಡೆದ ನಟಿ ಹಾಗೂ ಮಾಡೆಲ್ ಉರ್ಫಿ ಜಾವೇದ್ ಕೆಲದಿನಗಳಿಂದ ತಮ್ಮ ಬಟ್ಟೆಗಳಿಂದಾಗಿ ಸುದ್ದಿಯಲ್ಲಿದ್ದಾರೆ. 24 ವರ್ಷದ ಇವರು ಬಟ್ಟೆಗಳ ಆಯ್ಕೆಗಳಿಂದ ಟೀಕೆಗೆ ಒಳಗಾಗ್ತಾರೆ.

  ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೋಲ್‌ಗೆ ಒಳಗಾಗುವ ಉರ್ಫಿ ಜಾವೇದ್ ಇವತ್ತು ಕೂಡ ಮತ್ತೊಂದು ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಈ ಭಾರಿ ಟಾಪ್ ಲೆಸ್ ನಲ್ಲಿ ಕಾಣಿಸಿಕೊಂಡಿರುವ ಉರ್ಫಿ ಜಾವೇದ್, ಎಲ್ಲರ ಹುಬ್ಬೇರಿಸಿದ್ದಾರೆ. ಹೌದು, ಇಷ್ಟು ದಿನ ಮೈ ತುಂಬ ಬಟ್ಟೆ ಅಲ್ಲದಿದ್ದರೂ, ಚೂರು ಪಾರು ಬಟ್ಟೆಯಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ರು . ಆದರೆ ಇವತ್ತು ಧಿಡೀರ್ ಅಂತ ಟಾಪ್‌ಲೆಸ್‌ನಲ್ಲಿ ಬಂದು ಅಚ್ಚರಿ ಮೂಡಿಸಿದ್ದಾರೆ.

  ಮೈ ತುಂಬ ಬಣ್ಣ ಬಣ್ಣದ ಸೇವಂತಿಗೆ ಹೂವುಗಳನ್ನು ಅಂಡಿಸಿಕೊಂಡು ಬಂದಿರುವ ಉರ್ಫಿ ಯಾವುದೇ ಬಟ್ಟೆಯನ್ನು ಧರಿಸಿಲ್ಲ. ಹೂವಿನಿಂದಲೇ ಅರ್ಧಂಬರ್ಧ ಮೈ ಮುಚ್ಚಿಕೊಂಡಿರುವ ಉರ್ಫಿ, ಪಡ್ಡೆ ಹುಡುಗರ ಹಾರ್ಟ್‌ ಬೀಟ್ ಹೆಚ್ಚಿಸಿದ್ದಾರೆ. ಹಿಂದಿ ಕಿರುತೆರೆಯ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲದೆ ಉರ್ಫಿ ವೃತ್ತಿಯಿಂದ ಒಬ್ಬರು ಮೊಡೆಲ್ ಕೂಡ ಹೌದು. ಉರ್ಫಿ ಇದೆಲ್ಲವನ್ನೂ ಬಿಟ್ಟು ಹೆಚ್ಚಾಗಿ ಸುದ್ದಿಯಾಗ್ತಿರೋದು ಇವರ ವಿಚಿತ್ರ ಬಟ್ಟೆಗಳಿಂದ. ಉರ್ಫಿ ತೊಡುವ ಬಟ್ಟೆಗಳು ಹೆಚ್ಚು ಜನಪ್ರಿಯತೆ ನೀಡಿದೆ. ಇನ್ನು ಇತ್ತೀಚಿಗಷ್ಟೇ ಪ್ರಿಯಾಂಕಾ ಚೋಪ್ರಾ ಅವರಂತೆ ಕಾಣಲು ಅವರು ಪ್ರಿಯಾಂಕ ಹಾಕಿಕೊಂಡ ಕಾಸ್ಟ್ಯೂಮನಂತಹದ್ದೇ ಧರಿಸಿ ಸುದ್ದಿಯಾಗಿದ್ದರು. ಕಳೆದ ವಾರವೂ ಇಮತಹದ್ದೇ ಕಾರಣಕ್ಕೆ ಟ್ರೋಲ್‌ಗೆ ಗುರಿಯಾಗಿದ್ದರು.

  Urfi Javed goes topless in new picture on Instagram

  ಬಿಗ್ ಬಾಸ್ ಒಟಿಟಿ ಖ್ಯಾತಿಯ ಉರ್ಫಿ ಜಾವೇದ್ ತನ್ನ ಅಸಾಂಪ್ರದಾಯಿಕ ಫ್ಯಾಷನ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ತನ್ನ ಫಾಲೋವರ್ಸ್‌ಗಳ ಮುಂದೆ ತನ್ನ ವಿಚಿತ್ರ ಶೈಲಿಯ ಬಟ್ಟೆಗಳಲ್ಲಿ ಪ್ರತ್ಯಕ್ಷರಾಗುತ್ತಾರೆ. ಅಷ್ಟೇ ಅಲ್ಲದೇ ಪ್ರತಿ ಭಾರಿಯೂ ಟ್ರೋಲ್ ಆಗುವ ಉರ್ಫಿ ಜಾವೇದ್, ಮತ್ತದೇ ಅವತರಾದಲ್ಲಿ ಪಬ್ಲಿಕ್ ಪ್ಲೇಸ್‌ನಲ್ಲಿ ಕಾಣಿಸಿಕೊಳ್ತಾರೆ ಹಾಗೂ ಫೋಟೊಗೆ ಪೋಸ್ ಕೂಡ ನೀಡುತ್ತಾರೆ.

  English summary
  Urfi Javed goes topless in new picture on Instagram, Video goes viral
  Monday, April 25, 2022, 10:05
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X