»   » ಡೆಂಘೀ ಜ್ವರದಿಂದ ಖ್ಯಾತ ನಿರ್ಮಾಪಕ ಯಶ್ ಛೋಪ್ರಾ ನಿಧನ

ಡೆಂಘೀ ಜ್ವರದಿಂದ ಖ್ಯಾತ ನಿರ್ಮಾಪಕ ಯಶ್ ಛೋಪ್ರಾ ನಿಧನ

Posted By:
Subscribe to Filmibeat Kannada

ಖ್ಯಾತ ಬಾಲಿವುಡ್ ನಿರ್ಮಾಪಕ, ನಿರ್ದೇಶಕ ಯಶ್ ಛೋಪ್ರಾ ಡೆಂಘೀ ಜ್ವರದಿಂದ ಭಾನುವಾರ (ಅ 21) ಸಂಜೆ ನಿಧನ ಹೊಂದಿದ್ದಾರೆ. 80 ವರ್ಷ ವಯಸ್ಸಿನ ಛೋಪ್ರಾ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಅಕ್ಟೋಬರ್ 13 ರಂದು ದಾಖಲಾಗಿದ್ದರು.

ಸೆಪ್ಟಂಬರ್ 27, 1932ರಲ್ಲಿ ಲಾಹೋರ್ ನಲ್ಲಿ ಜನಿಸಿದ ಯಶ್ ಛೋಪ್ರಾ ಪತ್ನಿ ಪಮೇಲಾ ಮತ್ತು ಮಕ್ಕಳಾದ ಆದಿತ್ಯ ಛೋಪ್ರಾ, ಉದಯ್ ಛೋಪ್ರಾ ಮತ್ತು ಅಸಖ್ಯಾಂತ ಅಭಿಮಾನಿಗಳನ್ನು ಅಗಲಿದ್ದಾರೆ.

Veteran film maker Yash Chopra dead

ಯಶ್ ಚೋಪ್ರ 'ಜಬ್ ತಕ್ ಹೇ ಜಾನ್' ಚಿತ್ರ ನಿರ್ಮಿಸುತ್ತಿದ್ದರು. ಅನಾರೋಗ್ಯದ ಕಾರಣ ಸ್ವಿಜರ್ಲ್ಯಾಂಡ್ ನಲ್ಲಿ ನಡೆಯ ಬೇಕಿದ್ದ ಶೂಟಿಂಗ್ ರದ್ದು ಗೊಳಿಸಿದ್ದರು.

ಯಶ್ ಚೋಪ್ರ ದೀವಾರ್, ತ್ರಿಶೂಲ್, ಚಾಂದನಿ, ಸಿಲ್ ಸಿಲಾ, ಕಭಿ ಕಭೀ, ವೀರ ಜರಾ, ದಿಲ್ ವಾಲೆ ದುಲ್ಹಾನಿಯಾ ಲೇಜಾಯೆಂಗೆ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದರು.

ಬಾಲಿವುಡ್ ನ 'ಕಿಂಗ್ ಆಫ್ ರೋಮ್ಯಾನ್ಸ್' ಎಂದೇ ಹೆಸರಾಗಿರುವ ಯಶ್ ಛೋಪ್ರಾ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

English summary
Legendary film director, screenwriter and film producer Yash Chopra is dead. He was 80, had been admitted to Lilavati hospital in Bandra on October 13 after being diagnosed with dengue, according to Media reports.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada