For Quick Alerts
  ALLOW NOTIFICATIONS  
  For Daily Alerts

  ಮರಾಠಿ ಚಿತ್ರರಂಗದ ಖ್ಯಾತ ನಟ ಶ್ರೀಕಾಂತ್ ಮೊಘೆ ನಿಧನ

  |

  ಮರಾಠಿ ಚಿತ್ರರಂಗ ಹಾಗೂ ರಂಗಭೂಮಿ ಕಂಡ ಖ್ಯಾತ ನಟ ಶ್ರೀಕಾಂತ್ ಮೊಘೆ ಅವರು ಶನಿವಾರ ಪುಣೆಯಲ್ಲಿ ನಿಧನರಾಗಿದ್ದಾರೆ. 91 ವರ್ಷ ಶ್ರೀಕಾಂತ್ ಮೊಘೆ ಪುಣೆಯ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಶ್ರೀಕಾಂತ್ ಮೊಘೆ ಅವರು ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾರೆ.

  ಖ್ಯಾತ ಪಂಜಾಬಿ ಗಾಯಕ ಶಾರ್ದುಲ್ ಸಿಕಂದರ್ ನಿಧನ

  1929ರ ನವೆಂಬರ್ 6 ರಂದು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಿರ್ಲೋಸ್ಕರ್ವಾಡಿಯಲ್ಲಿ ಜನಿಸಿದ ಮೊಘೆ ಸಿಂಥಾಸನ್ (1979) ಸೇರಿದಂತೆ ಹಲವಾರು ಸಿನಿಮಾಗಳು ಹಾಗೂ ನಾಟಕಗಳಲ್ಲಿ ನಟಿಸಿದ್ದಾರೆ.

  ಶ್ರೀಕಾಂತ್ ಮೊಘೆ ಅವರ ಸಹೋದರ ಸುಧೀರ್ ಮೊಘೆ (ಗೀತರಚನೆಕಾರ-ಕವಿಯಾಗಿದ್ದ) ಏಳು ವರ್ಷಗಳ ಹಿಂದೆ ನಿಧನರಾಗಿದ್ದರು. ಶ್ರೀಕಾಂತ್ ಅವರ ಪುತ್ರ ಶಾಂತನು ಮೊಘೆ ಮತ್ತು ಅಳಿಯ ಪ್ರಿಯಾ ಮರಾಠೆ ಇಬ್ಬರೂ ನಟರಾಗಿದ್ದಾರೆ.

  ವಾಸ್ತುಶಿಲ್ಪ ಪದವೀಧರರಾಗಿದ್ದ ಮೊಘೆ ಅವರು ಆಯ್ಕೆ ಮಾಡಿಕೊಂಡಿದ್ದು ಮಾತ್ರ ನಟನೆಯನ್ನು. ಮಧುಚಂದ್ರ, ಸಿನ್ಹಾಸನ್, ಗಮ್ಮತ್ ಜಮ್ಮತ್, ಉಂಬಾರಥ, ವಾಸುದೇವ್ ಬಲ್ವಂತ್ ಫಡ್ಕೆ ಲೆಕುರೆ ಉಡಾಂಡ್ ಜಾಲಿ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

  ರಿಲೀಸ್ ಗೂ ಮೊದಲೇ ಮೈಸೂರಿನಲ್ಲಿ ಅಬ್ಬರಿಸಲಿದ್ದಾನೆ ಯುವರತ್ನ | Yuvaratna | Puneeth Rajkumar|Filmibeat Kannada

  ನಟನೆಯ ಜೊತೆಗೆ, ಮೊಘೆ ಅವರು ಮರಾಠಿ ನಾಟಕಗಳನ್ನು ನಿರ್ದೇಶಿಸಿದ್ದಾರೆ. 50ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

  English summary
  Veteran Marathi actor Shrikant Moghe died late Saturday at the age of 91.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X