»   » ಹಾಟ್ ಹಾಗೂ ಫಿಟ್ ಬಿಪಾಶಾ ಸಕತ್ ಕಸರತ್ತು

ಹಾಟ್ ಹಾಗೂ ಫಿಟ್ ಬಿಪಾಶಾ ಸಕತ್ ಕಸರತ್ತು

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಬಾಲಿವುಡ್ ನ ಬೆಡಗಿಯರ ಪೈಕಿ ವಯಸ್ಸು 35 ಪ್ಲಸ್ ದಾಟಿದರೂ ಮಾದಕತೆ ಮೂಲಕ ಎಲ್ಲರನ್ನು ಮೋಡಿ ಮಾಡುವ ಕೃಷ್ಣ ಸುಂದರಿ ಬಿಪಾಶಾ ಈಗೇನು ಮಾಡುತ್ತಿದ್ದಾರೆ? ಎಂಬ ಪ್ರಶ್ನೆಗೆ ಟೈಮ್ ಸಿಕ್ಕಾಗಲೆಲ್ಲಾ ಜಿಮ್ ನಲ್ಲಿರೋ ಬಾರ್ ನಲ್ಲಿ ನೇತಾಡುತ್ತಿದ್ದಾರೆ ಎಂಬ ಉತ್ತರ ಸಿಗುತ್ತದೆ.

ಸಾಮಾಜಿಕ ಜಾಲ ತಾಣಗಳನ್ನು ಬಳಸಿಕೊಂಡು ಹೇಗೆ ಶಾರುಖ್, ಅಮೀರ್, ಸಲ್ಮಾನ್ ಹಾಗೂ ಬಿಗ್ ಬಿ ಅಮಿತಾಬ್ ಅವರು ತಮ್ಮ ಫ್ಯಾನ್ಸ್ ಜೊತೆ ಆಪ್ತತೆ ಹೆಚ್ಚಿಸಿಕೊಂಡಿದ್ದರೋ ಅದೇ ರೀತಿ ಇತ್ತೀಚಿನ ಸೋನಾಕ್ಷಿ ಸಿನ್ಹಾ ಸೇರಿದಂತೆ ನಟಿಮಣಿಯರು ಕೂಡಾ ತಮ್ಮ ಫ್ಯಾನ್ಸ್ ಜೊತೆ ಆಗಾಗ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

Video :Fitness Freak Bipasha Hanging from GYM Bars

ಪೂನಂ ಪಾಂಡೆ ಯೋಗ ನೋಡಿದ ಪಡ್ಡೆಗಳಿಗೆ ಈಗ ಬಿಪಾಶಾ ಬಸು ದೈಹಿಕ ಕಸರತ್ತು ನೋಡುವ 'ಯೋಗ' ಸಿಕ್ಕಿದೆ. ಸಾಮಾನ್ಯವಾಗಿ ಇನ್ಸ್ಟಾ ಗ್ರಾಮ್ ಎಂಬ ಚಿತ್ರ ಹಾಗೂ ತುಣುಕು ವಿಡಿಯೋ ಹಂಚಿಕೆ ಜಾಲ ತಾಣದಲ್ಲಿ ಹೆಚ್ಚಾಗಿ ಕಂಡು ಬರುವ 'ಫಿಟ್ನೆಸ್ ಫ್ರೀಕ್' ವಿಡಿಯೋಗಳಿಗೆ ಬಿಪ್ಸ್ ಕೂಡಾ ಮಾರು ಹೋಗಿದ್ದಾರೆ.

ಕೃಷ್ಣ ಸುಂದರಿ ಬಿಪಾಶಾ ಕೂಡಾ ಒಲಿಂಪಿಕ್ಸ್ ನಲ್ಲಿ ಜಿಮ್ನಾಸ್ಟ್ ಗಳು ಸೈಡ್ ಬಾರ್ ನಲ್ಲಿ ಕಸರತ್ತು ಮಾಡುವಂತೆ ತಾವು ಕಸರಸ್ತ್ತು ಮಾಡಿದ್ದಾರೆ. ಎರಡು ವಿಡಿಯೋ ಹಾಗೂ ಒಂದು ಚಿತ್ರವನ್ನು ಹಂಚಿಕೊಂಡಿದ್ದಾರೆ. ಧೈರ್ಯವಾಗಿ ಯಾವುದಕ್ಕೂ ಹೆದರಬೇಡಿ ಎಂಬ ಒಕ್ಕಣೆಯನ್ನು ಗೀಚಿಕೊಂಡಿದ್ದಾರೆ.

ಕರಣ್ ಸಿಂಗ್ ಗ್ರೋವರ್ ಜೊತೆ ಪಾರ್ಟಿ ಮಾಡಿ ಅಮೆರಿಕನ್ ನಟಿ ಫರಾ ಫಾಸೆಟ್ ರಂತೆ ಕೇಶ ವಿನ್ಯಾಸ ಮಾಡಿಕೊಂಡ ಬಿಪಾಶಾ ಅವರು ಸಿಂಗ್ ಇಸ್ ಬ್ಲಿಂಗ್ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಕ್ಕಂತೆ ಜಿಮ್ ನಲ್ಲಿ ಬೆವರು ಹರಿಸುತ್ತಿದ್ದಾರೆ.

English summary
Bengali Lass Bipasha who's always been a fitness freak, is now indulging in a form of exercise, which involves hanging from gym bars. She has shared her picture and exercise videos via instagram.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada