Just In
Don't Miss!
- Automobiles
ಗ್ಲಾಸಿ ಆರೇಂಜ್ ವ್ಯಾರ್ಪ್ನೊಂದಿಗೆ ಮಾಡಿಫೈಗೊಂಡ ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್ಯುವಿ
- Sports
ಎಬಿಡಿ ದಾಖಲೆಯನ್ನು ಸರಿದೂಗಿಸಿದ ಸಂಜು ಸ್ಯಾಮ್ಸನ್
- News
ಕೊರೊನಾ ಸೋಂಕು ಹೆಚ್ಚಳ: ಮಹಾರಾಷ್ಟ್ರ ಸಿಎಂ ಪತ್ರಿಕಾಗೋಷ್ಠಿಯ ಪ್ರಮುಖಾಂಶಗಳು
- Finance
2021 ಸ್ಕೋಡಾ ಕೊಡಿಯಾಕ್ ಅಧಿಕೃತವಾಗಿ ಬಿಡುಗಡೆ: ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ
- Lifestyle
ಅಧ್ಯಯನ: ಸ್ಥೂಲಕಾಯದವರ ಸ್ಮರಣಾ ಶಕ್ತಿ ಕಾಪಾಡುತ್ತೆ ಬೆಣ್ಣೆಹಣ್ಣು
- Education
WCL Recruitment 2021: 44 ಮೆಡಿಕಲ್ ಸ್ಪೆಷಲಿಸ್ಟ್ ಮತ್ತು ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಗ್ರಾಮೀಣ ಭಾಗದ ಮಕ್ಕಳ ವಿಧ್ಯಾಭ್ಯಾಸಕ್ಕೆ 16 ಕೋಟಿ ಕಲೆಹಾಕಲಿರುವ ನಟ
ಬಾಲಿವುಡ್ ನಟ, ಕರ್ನಾಟಕದ ಅಳಿಯ ವಿವೇಕ್ ಒಬೆರಾಯ್ ಅವರದ್ದು ಬಾಲಿವುಡ್‌ನಲ್ಲಿ ಬಹುದೊಡ್ಡ ಸ್ಟಾರ್ ಪಟ್ಟವೇನೂ ಅಲ್ಲ, ಆದರೆ ಅವರ ಹೃದಯ ಮಾತ್ರ ಸಣ್ಣದಲ್ಲ.
ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲೆಂದು 16 ಕೋಟಿ ರೂ ಹಣ ಸಂಗ್ರಹಿಸಲು ಅಭಿಯಾನವೊಂದಕ್ಕೆ ಚಾಲನೆ ನೀಡಿದ್ದಾರೆ ವಿವೇಕ್ ಒಬೆರಾಯ್.
ಗ್ರಾಮೀಣ ಭಾಗದ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗುವ ಉದ್ದೇಶದಿಂದ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಈ ಅಭಿಯಾನದಿಂದ ಸಂಗ್ರಹವಾಗುವ ಹಣವನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.
ಇದೇ ಅಭಿಯಾನದ ಮೂಲಕ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜೆಇಇ, ಎನ್‌ಇಇಟಿ ಮುಂತಾದ ಸ್ಪರ್ದಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವ ಆಲೋಚನೆಯೂ ಇದೆ.
'ಯಾವುದೇ ಗ್ರಾಮದ ವಿದ್ಯಾರ್ಥಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿದನೆಂದರೆ ಆತ ತಾನು ತನ್ನ ಕುಟುಂಬವನ್ನು ಮಾತ್ರವೇ ಅಭಿವೃದ್ಧಿಪಡಿಸುವುದಿಲ್ಲ, ಬದಲಿಗೆ ತನ್ನ ಹಳ್ಳಿಯಲ್ಲಿಯೂ ಬದಲಾವಣೆ ತರುತ್ತಾನೆ' ಎಂದಿದ್ದಾರೆ ವಿವೇಕ್ ಒಬೆರಾಯ್.
'ಗ್ರಾಮೀಣ ಭಾಗದಲ್ಲಿ ಸಾಕಷ್ಟು ಪ್ರತಿಭಾವಂತ ವಿದ್ಯಾರ್ಥಿಗಳಿದ್ದಾರೆ ಆದರೆ ಅವರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲ. ಎಷ್ಟೋ ಮಂದಿಗೆ ಉನ್ನತ ಶಿಕ್ಷಣ ಮಾಡಲು ಸೂಕ್ತ ಸೌಲಭ್ಯಗಳು ದೊರಕುತ್ತಿಲ್ಲ' ಎಂದು ವಿವೇಕ್ ಒಬೆರಾಯ್ ಬೇಸರ ವ್ಯಕ್ತಪಡಿಸಿದ್ದಾರೆ.
'ಅವರ ಜನ್ಮಸ್ಥಳದ ಕಾರಣದಿಂದ ಅಂಥಹಾ ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯ ಹಾಳಾಗುವುದು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ನನ್ನ ತಂಡ ಸೇರಿಕೊಂಡು ಈ ಅಭಿಯಾನ ಆರಂಭಿಸಿದ್ದೇವೆ. ನಾವುಗಳು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನಿರ್ಧರಿಸಿದ್ದೇವೆ' ಎಂದಿದ್ದಾರೆ ವಿವೇಕ್ ಒಬೆರಾಯ್.
ರಾಜ್ಯದ ಪ್ರಮುಖ ರಾಜಕಾರಣಿ ದಿವಂಗತ ಜೀವರಾಜ್ ಆಳ್ವಾ ಅವರ ಪುತ್ರಿ ಪ್ರಿಯಾಂಕಾ ಆಳ್ವಾ ಅವರನ್ನು 2010 ರಲ್ಲಿ ವಿವೇಕ್ ಒಬೆರಾಯ್ ವಿವಾಹವಾಗಿದ್ದಾರೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆದಿತ್ಯ ಆಳ್ವಾಗೆ ವಿವೇಕ್ ಒಬೆರಾಯ್ ಭಾವ.