»   » ಐಶ್ವರ್ಯ ರೈ ಬಚ್ಚನ್ ಗುನ್ನ ನೀಡುತ್ತಿರುವುದು ಯಾರಿಗೆ?

ಐಶ್ವರ್ಯ ರೈ ಬಚ್ಚನ್ ಗುನ್ನ ನೀಡುತ್ತಿರುವುದು ಯಾರಿಗೆ?

Posted By:
Subscribe to Filmibeat Kannada

ಬಚ್ಚನ್ ಬಹುರಾಣಿ, ಮಾಜಿ ವಿಶ್ವ ಸುಂದರಿ ಐಶ್ವರ್ಯ ರೈ ಬಚ್ಚನ್ ಸಿಕ್ಕಾಪಟ್ಟೆ ಟೆನ್ಷನ್ ನಲ್ಲಿದ್ದಾರೆ. ಏನು ಮಾಡುವುದು ಅಂತ ತೋಚದೆ ಅಟ್ಯಾಕ್ ಮಾಡಿದವರಿಗೆ ಗುನ್ನ ನೀಡಿದ್ದಾರೆ. ಪ್ರಾಣ ರಕ್ಷಣೆ ಮಾಡುವುದಕ್ಕೆ ಕೈಗೆ ಸಿಕ್ಕ ಚೇರ್ ಹಿಡಿದೆಳೆದು ಎದುರಿಗಿದ್ದವರ ಮೇಲೆ ಹಾಕಿದ್ದಾರೆ.

ಅರೇ...ಐಶ್ವರ್ಯ ರೈಗೆ ಅಂಥದ್ದೇನಾಯ್ತು ಅಂತ ಕೇಳುವ ಮುನ್ನ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿರುವ ಈ ವಿಡಿಯೋನ ಒಮ್ಮೆ ನೋಡಿ...

Watch Aishwarya Rai fight scene from 'Jazbaa'

ಇದು ರೀಲ್ ಸುದ್ದಿ ಅಂತ ಈಗ ನಿಮಗೆ ಖಾತ್ರಿ ಆಯ್ತು ಅಲ್ವಾ. ಹೌದು, ಐಶ್ವರ್ಯ ರೈ ಬಚ್ಚನ್ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿರುವ 'ಜಝ್ಬಾ' ಚಿತ್ರದ ಮೇಕಿಂಗ್ ವಿಡಿಯೋ ಇದು.

'ಜಝ್ಬಾ' ಚಿತ್ರದಲ್ಲಿ ಕ್ರಿಮಿನಲ್ ಲಾಯರ್ ಪಾತ್ರ ನಿರ್ವಹಿಸುತ್ತಿರುವ ಐಶ್ವರ್ಯ ರೈಗೆ ಚಿತ್ರದಲ್ಲಿ ಆಗಾಗ ಅಟ್ಯಾಕ್ ಆಗುತ್ತಲೇ ಇರುತ್ತದೆ. ಅಂತಹ ಒಂದು ಅಟ್ಯಾಕ್ ಆದಾಗ, ತಮ್ಮ ಜೀವ ಉಳಿಸಿಕೊಳ್ಳುವುದಕ್ಕೆ ಆಕೆ ಪಡುವ ಸಾಹಸ ಚಿತ್ರೀಕರಣದ ತುಣುಕು ಇದು. ['ಜಝ್ಬಾ' ಆಕ್ಸಿಡೆಂಟ್ ಸ್ಪಾಟ್ ನಲ್ಲಿ ಐಶ್ವರ್ಯಾ ರೈ]

ವಿಡಿಯೋದಲ್ಲಿ ಐಶ್ವರ್ಯ ರೈ ಬಚ್ಚನ್ ಕ್ಲಿಯರ್ ಆಗಿ ಕಾಣ್ತಾರೆ. ಆದ್ರೆ, ಅವರನ್ನ ಅಟ್ಯಾಕ್ ಮಾಡಿದವರು ಯಾರು ಅಂತ ಚಿತ್ರತಂಡ ಇನ್ನೂ ಸಸ್ಪೆನ್ಸ್ ನಲ್ಲಿಟ್ಟಿದೆ. ವಿಡಿಯೋದಲ್ಲೂ ಕ್ಲಾರಿಟಿ ಇಲ್ಲ.

ಸಂಜಯ್ ಗುಪ್ತ ನಿರ್ದೇಶನದ 'ಜಝ್ಬಾ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಇರ್ಫಾನ್ ಖಾನ್ ಕೂಡ ಇದ್ದಾರೆ. ಇಡೀ ಸಿನಿಮಾ ಪ್ರೇಕ್ಷಕರಿಗೆ ಥ್ರಿಲ್ ನೀಡುತ್ತದೆ ಅನ್ನೋದಕ್ಕೆ ಈ ವಿಡಿಯೋನೇ ಸಾಕ್ಷಿ. ಆಕ್ಟೋಬರ್ ನಲ್ಲಿ ತೆರೆಗೆ ಬರಲಿರುವ 'ಜಝ್ಬಾ' ಚಿತ್ರ ಸದ್ಯ ಶೂಟಿಂಗ್ ಹಂತದಲ್ಲಿದೆ.

English summary
Bollywood Actress Aishwarya Rai starrer 'Jazbaa' fight scene making video is out. In the video, Aishwarya Rai can be seen repeatedly kicking and punching a goon. Watch the video here.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada