»   » ಫ್ಯಾಶನ್ ಅನ್ನೋ ಹುಡುಗರ ವಿರುದ್ಧ ಕಿಡಿಕಿಡಿಯಾದ ಸಂಜಯ್ ದತ್

ಫ್ಯಾಶನ್ ಅನ್ನೋ ಹುಡುಗರ ವಿರುದ್ಧ ಕಿಡಿಕಿಡಿಯಾದ ಸಂಜಯ್ ದತ್

By: ಸೋನು ಗೌಡ
Subscribe to Filmibeat Kannada

ಇತ್ತೀಚಿನ ಕಾಲದ ಹುಡುಗರು ಅದೇನೇ ಮಾಡಿದ್ರು ಫ್ಯಾಶನ್ ಅಂತಾರೆ, ಉದ್ದ ಕೂದಲು ಬಿಟ್ರೂ ಫ್ಯಾಶನ್, ಕಲರ್-ಕಲರ್ ಶರ್ಟ್ ಮತ್ತು ಪ್ಯಾಂಟ್ ಹಾಕಿದ್ರೂ ಫ್ಯಾಶನ್. ಒಟ್ನಲ್ಲಿ ಎಲ್ಲವೂ ಈಗಿನ ಕಾಲದ ಹುಡುಗರಿಗೆ ಫ್ಯಾಶನ್ ಆಗಿಬಿಟ್ಟಿದೆ.

ಇದೀಗ ಈ ಹೊಸ ಟ್ರೆಂಡ್ ಬಗ್ಗೆ ಬಾಲಿವುಡ್ ನ, ಎಲ್ಲರ ಮೆಚ್ಚಿನ ಬಾಬಾ ಸಂಜಯ್ ದತ್ ಅವರು ಸಿಕ್ಕಾಪಟ್ಟೆ ರೊಚ್ಚಿಗೆದ್ದು ಬಿಟ್ಟಿದ್ದಾರೆ. ಹುಡುಗರ ಈ ಚಿತ್ರ-ವಿಚಿತ್ರ ಅವತಾರಕ್ಕೆ ಸಂಜಯ್ ದತ್ ಅವರು ಕಾಮೆಂಟ್ ಮಾಡಿದ್ದು, ಸಾಕಷ್ಟು ಸುದ್ದಿಗೆ ಗ್ರಾಸವಾಗಿದೆ.[ಮಾಧ್ಯಮದ ಮುಂದೆ ಜೈಲಿನ ಅನುಭವ ಬಿಚ್ಚಿಟ್ಟ ಸಂಜಯ್ ದತ್]

ಸಂಜಯ್ ದತ್ ಅವರು ಹುಡುಗರ ಬಗ್ಗೆ ಹಾಗೂ ಪುರುಷತ್ವದ ಬಗ್ಗೆ ಮಾತನಾಡಿರುವ ಈ ವಿಡಿಯೋ ಇದೀಗ ಇಡೀ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಭಾರತೀಯ ಪುರುಷತ್ವ ಇದೀಗ ಎಷ್ಟು ಅಪಾಯಕಾರಿ ಸ್ಥಿತಿಯಲ್ಲಿದೆ, ಎಂದು ನಟ ಸಂಜಯ್ ದತ್ ಅವರು ಭಾರಿ ಕಳವಳ ವ್ಯಕ್ತಪಡಿಸಿದ್ದಾರೆ.

"ಈಗಿನ ಕೆಲ ದಿನಗಳಲ್ಲಿ ಅನೇಕ ಪುರುಷರು, ಹುಡುಗಿಯರಂತೆ ಉದ್ದನೆಯ ಕೂದಲು/ಜುಟ್ಟು ಬಿಟ್ಟುಕೊಂಡು, ಕಾಲಿನ ಕೂದಲನ್ನು ವ್ಯಾಕ್ಸ್ ಮಾಡಿ ಹಾಗೂ ಚೆಸ್ಟ್ ಶೇವ್ ಮಾಡಿಕೊಂಡು ರಾಜರೋಷವಾಗಿ ಓಡಾಡುತ್ತಿದ್ದಾರೆ". ಎಂದು ನಟ ಸಂಜಯ್ ದತ್ ಅವರು ಈಗಿನ ಪುರುಷರ ಫ್ಯಾಶನ್ ಬಗ್ಗೆ ಕಿಡಿ-ಕಿಡಿಯಾಗಿದ್ದಾರೆ. ಮುಂದೆ ಓದಿ...

ಯುವಕರ ಬಗ್ಗೆ ಸಿಟ್ಟಿಗೆದ್ದ ಸಂಜಯ್ ದತ್

"ಯುವಕರು ಜಿಮ್ ಬದ್ಲಾಗಿ ಬ್ಯೂಟಿ ಪಾರ್ಲರ್ ನಲ್ಲಿ ಮುಖಕ್ಕೆ ಫೇಶಿಯಲ್ ಮಾಡುತ್ತಾ ಹೆಚ್ಚಿನ ಸಮಯವನ್ನು ವ್ಯರ್ಥ ಮಾಡುತ್ತಿದ್ದಾರೆ. ಅಂದಹಾಗೆ ಇವರೆಲ್ಲ ಕೇವಲ ಹೆಸರಿಗಷ್ಟೇ ಮಾತ್ರ ಪುರುಷರಾಗಿರುತ್ತಾರೆ. ಇವರು ಬೇಕಿದ್ರೆ ಅಡುಗೆ ಮನೆ ಸೇರಿ ಅಡುಗೆ ಮಾಡಲು ಕೂಡ ಹಿಂಜರಿಯುವುದಿಲ್ಲ". ಎಂದು ಸಂಜು ಬಾಬಾ ಅವರು ಹುಡುಗರ ಬಗ್ಗೆ ಭಾರಿ ಸಿಟ್ಟಿಗೆದ್ದಿದ್ದಾರೆ.[ಮತ್ತೆ ಒಂದಾದ 90ರ ದಶಕದ 'ಗೋಲ್ಡನ್ ಜೋಡಿ']

ಹುಡುಗಿಯರ ಸ್ಟೈಲ್ ಅನುಸರಿಸಬೇಡಿ

"ಮಕ್ಕಳನ್ನು ನೋಡಿಕೊಳ್ಳುತ್ತಾರೆ, ಹುಡುಗಿಯರ ರೀತಿ ಬಟ್ಟೆ ಧರಿಸುತ್ತಾರೆ, ಲೋಶನ್ ಕ್ರೀಮ್ ಹಚ್ಚಿಕೊಳ್ಳುತ್ತಾರೆ. ಅಯ್ಯೋ ಈಗಿನ ಹುಡುಗರಿಗೆ ಏನಾಗಿದೆ.?. ಯಾಕೆ ಹೀಗೆ ಹುಡುಗಿಯರ ಸ್ಟೈಲ್ ಅನ್ನು ಅನುಸರಿಸುತ್ತಿದ್ದಾರೆ". -ಸಂಜಯ್ ದತ್.[ಗಾಯಕ ರಘು ದೀಕ್ಷಿತ್ ಗೆ ಸಲಾಂ ಹೊಡೆದ ಬಾಲಿವುಡ್ ದಿಗ್ಗಜರು!]

ಎಲ್ಲಾ ಬಿಟ್ಟು ಪುರುಷರಂತಿರಿ

'ಈ ರೀತಿ ಮಾಡುವುದರಿಂದ ಭಾರತೀಯ ಪುರುಷರು ತಮ್ಮ ಪುರುಷತ್ವವನ್ನು ಕಳೆದುಕೊಳ್ಳುತ್ತಿದ್ದಾರೆ. ಓ ಪುರುಷರೇ ದಯವಿಟ್ಟು ಸಿಲ್ಕಿ ಪ್ಯಾಂಟ್ ಧರಿಸೋ ಬದಲು ಜೀನ್ಸ್ ಪ್ಯಾಂಟ್ ಧರಿಸಿ. ಪಿಂಕ್ ಕಲರ್ ಹಾಗೂ ಕಲರ್-ಕಲರ್ ಶರ್ಟ್ ಧರಿಸೋ ಬದಲು, ನೀಲಿ, ಕಂದು, ಕಪ್ಪು ಬಣ್ಣದ ಶರ್ಟ್ ಧರಿಸಿ".-ಸಂಜಯ್ ದತ್.[ಯಾರವಾಡ ಜೈಲಿನಲ್ಲಿ ಸಂಜಯ್ ದತ್ ಲುಂಗಿ ಡಾನ್ಸ್]

ಹೊಸ ಟ್ರೆಂಡ್ ಅನುಸರಿಸಿ

'ಹೆಣ್ಣು ಮಕ್ಕಳ ರೀತಿ ಸ್ಕೂಟಿಯಲ್ಲಿ ತಿರುಗುವುದನ್ನು ನಿಲ್ಲಿಸಿ. ನಿಮ್ಮದೇ ಆದ ಹೊಸ ಟ್ರೆಂಡ್ ಅನುಸರಿಸಿ. ಹೂವಿನ ಡಿಸೈನ್ ಇರೋ ಬಟ್ಟೆ ಧರಿಸುವುದನ್ನು ನಿಲ್ಲಿಸಿ, ಮುಖಕ್ಕೆ ಲೋಶನ್, ಕ್ರೀಮ್ ಹಾಕೋದನ್ನ ನಿಲ್ಲಿಸಿ". -ಸಂಜಯ್ ದತ್.

ಸಂಜಯ್ ಹೊಸ ಕ್ರಾಂತಿ

"ವಿಶೇಷವಾಗಿ ಕಲರ್ ಫುಲ್ ಡ್ರಿಂಕ್ಸ್ ಮಾಡೋದನ್ನ ನಿಲ್ಲಿಸಿ, ಪುರುಷರಿಗಾಗಿ ಇರುವ ಸ್ಟ್ರಾಂಗ್ ಸೋಡಾ ಕುಡಿಯಿರಿ. ಇದು ನಾನು ಪುರುಷರಲ್ಲಿ ತರಬೇಕೆಂದಿರುವ ಹೊಸ ಕ್ರಾಂತಿ 'ಮರ್ದಾನ್ ಗಿರಿ' ಎಂದು ಸಂಜಯ್ ದತ್ ಪುರುಷರಿಗೆ ಬದಲಾಗಲು ಕರೆ ನೀಡಿದ್ದಾರೆ.

ವೀಕ್ಷಕರ ವಿಭಿನ್ನ ಕಾಮೆಂಟ್

ನಟ ಸಂಜಯ್ ದತ್ ಅವರ ಎಲ್ಲಾ ನಿಲ್ಲಿಸಿ-ನಿಲ್ಲಿಸಿ ಎಂಬ ಕರೆಯ ವಿಡಿಯೋ ನೋಡಿದ ಕೆಲವು ವೀಕ್ಷಕರು, ಸಂಜಯ್ ಅವರ ಈ ಹೊಸ ವರಸೆಗೆ ಬೆಂಬಲ ಸೂಚಿಸಿದರೆ, ಇನ್ನೂ ಕೆಲವರು ತಿರುಗಿ. ಸಂಜಯ್ ಅವರಿಗೇ ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಬಾರಿ ಸಂಚಲನ ಮೂಡಿಸಿದ ಈ ವಿಡಿಯೋ ಬಗ್ಗೆ ಎಲ್ಲಾ ಕಡೆ ಭಾರಿ ಚರ್ಚೆ ಆಗುತ್ತಿದೆ. ಸಂಜಯ್ ಅವರ ವಿಡಿಯೋ ಕ್ಲಿಪ್ ನೋಡಲು ಈ ಲಿಂಕ್ ಕ್ಲಿಕ್ಕಿಸಿ.....

English summary
In a video that resurfaced on the web, Bollywood Actor Sanjay Dutt has sent out a rather shocking message to the men. He doesn't want them to keep long hair, play nanny to their kids or wear anything that's pink or flowery.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada