»   » ಜಿಯಾ ಸಾವಿಗೆ ಬಾಯ್ ಫ್ರೆಂಡ್ ಕಾರಣ?

ಜಿಯಾ ಸಾವಿಗೆ ಬಾಯ್ ಫ್ರೆಂಡ್ ಕಾರಣ?

By Mahesh
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ಆಕೆಗಿನ್ನೂ 25 ವರ್ಷದ ಹರೆಯ. ಬ್ರಿಟಿಷ್ ಮೂಲದ ಕನ್ಯೆಯಾದರೂ ಮೊದಲ ಚಿತ್ರದಲ್ಲೇ ಇಡೀ ಬಾಲಿವುಡ್ ತನ್ನತ್ತ ನೋಡುವಂತೆ ಮಾಡಿದ್ದಳು. ನಫೀಸಾ ಅಲಿಯಾಸ್ ಜಿಯಾ ಖಾನ್ ಗೆ ಸಾವಿಗೆ ಕಾರಣವೇನು? ಪುತ್ರಿ ಸಾವಿನಿಂದ ಶಾಕ್ ಗೆ ಒಳಗಾಗಿರುವ ತಾಯಿ ಏನು ಹೇಳುತ್ತಾರೆ? ಪೊಲೀಸರು ತನಿಖೆ ಎತ್ತ ಸಾಗಿದೆ ಬನ್ನಿ ನೋಡೋಣ...

  ಜಿಯಾ ಖಾನ್ ಗೆ ಮೊದಲ ಚಿತ್ರದಲ್ಲೇ ಬಾಲಿವುಡ್ ನ ದಿಗ್ಗಜ ಅಮಿತಾಬ್ ಬಚ್ಚನ್ ಜೊತೆ ನಟಿಸುವ ಅವಕಾಶ ಸಿಕ್ಕಿತು. ಅದರಲ್ಲೂ ಅಮಿತಾಬ್ ಪ್ರೀತಿಯುವ ಹದಿಹರೆಯದ ಹುಡುಗಿಯ ಪಾತ್ರ. 2007ರಲ್ಲಿ ರಾಮ್ ಗೋಪಾಲ್ ವರ್ಮಾ ನಿಶ್ಯಬ್ದ್ ಚಿತ್ರದ ಮೂಲಕ ಜಿಯಾಗೆ ಬ್ರೇಕ್ ನೀಡಿದ್ದರು. ಈಗ ಜಿಯಾ ಸಾವಿನ ಸುದ್ದಿ ಕೇಳಿ ಕಂಗಾಲಾಗಿದ್ದಾರೆ.

  ಬ್ರಿಟನ್ ಮೂಲದ 25 ವರ್ಷ ವಯಸ್ಸಿನ ಜಿಯಾ ಖಾನ್ ತಮ್ಮ ಸಾಗರ್ ಸಂಗೀತ್ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ತಡರಾತ್ರಿ ಸಾವಿಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

  ಜಿಯಾ ಖಾನ್ ಅವರ ಮನೆ ಕೆಲಸದವರು, ನೆರೆ ಮನೆಯವರು, ಸೆಕ್ಯುರಿಟಿಗಳನ್ನು ವಿಚಾರಣೆ ನಡೆಸಲಾಗಿದೆ ಅದರೆ, ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಹೇಳಿದ್ದರು. ಆದರೆ, ಈಗ ಎಲ್ಲರ ಶಂಕೆ  ಜಿಯಾ ಖಾನ್ ಪ್ರಿಯಕರ ಸೂರಜ್ ಪಂಚೋಲಿ ಮೇಲೆ ನೆಟ್ಟಿದೆ.

  ರಾಮ ಗೋಪಾಲ್ ವರ್ಮಾ, ನಟ ಕಮಲ್ ಖಾನ್ ಹಾಗೂ ಜಿಯಾ ಖಾನ್ ತಾಯಿ ರಬಿಯಾ ಅಮಿನ್ ಏನು ಹೇಳುತ್ತಾರೆ? ಜಿಯಾ ಖಾನ್ ಪ್ರಿಯಕರ ಸೂರಜ್ ಪಂಚೋಲಿ ಎಲ್ಲಿದ್ದಾನೆ? ಮುಂತಾದ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ...

  ವರ್ಮಾ ಹೇಳಿದ್ದೇನು

  ನಿಶ್ಯಬ್ದ್ ನಲ್ಲಿ ಆಕೆ ನಟನೆಗೆ ಬಿಗ್ ಬಿ ಕೂಡಾ ಮಾರು ಹೋಗಿದ್ದರು. ಗಜನಿ, ಹೌಸ್ ಫುಲ್ ಆಕೆಗೆ ಹೆಸರು ತಂದುಕೊಟ್ಟಿತ್ತು. ಆದರೆ, 3 ವರ್ಷ ಕೆಲಸ ಇಲ್ಲದೆ ಗ್ಲಾಮರ್ ಜಗತ್ತಿನಲ್ಲಿ ಬದುಕುವುದು ಕಷ್ಟ.

  ಭವಿಷ್ಯದ ಬಗ್ಗೆ ಸದಾ ಚಿಂತಿಸುತ್ತಿದ್ದ ಆಕೆಗೆ ತನ್ನ ವೃತ್ತಿ ಏಳಿಗೆ ಕಾಣುತ್ತಿಲ್ಲ ಎಂಬ ಚಿಂತೆ ಕಾಡಿ ಈ ರೀತಿ ಮಾಡಿಕೊಂಡಿರಬಹುದು.

  ನನಗೆ ಈಗಲೂ ವಿಷಯ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಕೆ ಸಮಸ್ಯೆ ಏನೇ ಇದ್ದರೂ ಆತ್ಮಹತ್ಯೆಯಂಥ ದುಡುಗು ನಿರ್ಧಾರ ಕೈಗೊಳ್ಳಬಾರದಿತ್ತು.

  ತಾಯಿ ರಬಿಯಾ ಹೇಳಿದ್ದೇನು?

  ಜಿಯಾ ಖಾನ್ ತಾಯಿ ರಬಿಯಾ ಅಮಿನ್ ಕೂಡಾ ಬಾಲಿವುಡ್ ನಲ್ಲಿ ನಟಿಯಾಗಿ ಕಾಣಿಸಿಕೊಂಡಿದ್ದರು. ಮಗಳ ಸಾವಿನಿಂದ ತೀವ್ರ ನೊಂದಿದ್ದಾರೆ.

  ಭಾನುವಾರ ಹೈದರಾಬಾದಿನಲ್ಲಿ ಆಡಿಷನ್ ಇತ್ತು. ಆಲ್ಲಿಂದ ಬಂದ ಮೇಲೆ ಜಿಯಾ ಮೊದಲ ರೀತಿ ಇರಲಿಲ್ಲ, ನನ್ನ ಕೆರಿಯರ್ ಹಾಳಾಗಿದೆ. ನಾನು ಏನು ಮಾಡಲು ಆಗುತ್ತಿಲ್ಲ ಎಂದು ದುಃಖದಿಂದ ಜಿಯಾ ಗೊಳಾಡಿದ್ದಾಳೆ.

  ನಾನು ಹಾಗೂ ಜಿಯಾ ಸೋದರಿ ಇಬ್ಬರು ಹೊರಗಡೆ ಹೋಗಿದ್ದೆವು. ಮನೆಯಲ್ಲಿ ಜಿಯಾ ಒಬ್ಬಳೆ ಇದ್ದಳು. ಮನೆಗೆ ಬಂದಾಗ ತಡರಾತ್ರಿಯಾಗಿತ್ತು. ಆಕೆಗೆ ಸೂರಜ್ ಪರಿಚಯವಿತ್ತು ಆದರೆ, ಇಬ್ಬರ ನಡುವಿನ ಗೆಳೆತನ ಮಟ್ಟ ನನಗೂ ಅರ್ಥವಾಗಿರಲಿಲ್ಲ.

  ಜಿಯಾ ಖಾನ್ ಗೆ ಸಾವಿಗೆ ಕಾರಣವೇನು?

  ಬ್ರಿಟನ್ ಮೂಲದ 25 ವರ್ಷ ವಯಸ್ಸಿನ ಜಿಯಾ ಖಾನ್ ತಮ್ಮ ಸಾಗರ್ ಸಂಗೀತ್ ಕಟ್ಟಡದಲ್ಲಿ ಆತ್ಮಹತ್ಯೆ ಮಾಡಿಕೊಂಡ ಮೇಲೆ ಮೊದಲು ಆಕೆ ಶವವನ್ನು ನೋಡಿದ್ದು ಅವರ ತಾಯಿ ರಬಿಯಾ. ನಂತರ ಈ ಸುದ್ದಿ ನಟಿ ದಿಯಾ ಮಿರ್ಜಾಗೆ ಹೇಗೋ ಗೊತ್ತಾಗಿದೆ. ಸೋಮವಾರ ತಡರಾತ್ರಿ ನಡೆದ ಈ ಘಟನೆಯಿಂದ ನೆರಮನೆಯವರು ಕಂಗಾಲಾಗಿದ್ದಾರೆ.

  ಕಮಲ್ ಖಾನ್ ಹೇಳಿಕೆ

  ಜಿಯಾ ಖಾನ್ ಸಾವಿಗೆ ಮಾನಸಿಕ ಖಿನ್ನತೆ, ವೃತ್ತಿಯಲ್ಲಿ ಏಳಿಗೆ ಕಾಣದಿರುವುದು ಕಾರಣ ಎಂದು ಎಲ್ಲರೂ ಹೇಳುವಾಗ ಮೊದಲ ಬಾರಿಗೆ ಆಕೆ ಬಾಯ್ ಫ್ರೆಂಡ್ ಬಗ್ಗೆ ಮಾತನಾಡಿದ್ದು ನಟ ಕಮಲ್ ಖಾನ್.

  ಗ್ಲಾಮರ್ ನಟಿ ಜಿಯಾ ಸಾವಿಗೆ ಆಕೆ ಬಾಯ್ ಫ್ರೆಂಡ್ ಸೂರಜ್ ಪಂಚೋಲಿ ಕಾರಣ ಇರುವ ಸಾಧ್ಯತೆಯಿದೆ ಎಂದು ಕಮಲ್ ಖಾನ್ ಹೇಳಿದ್ದರು.

  ಯಾರಿದು ಸೂರಜ್ ಪಂಚೋಲಿ

  ಬಾಲಿವುಡ್ ನಟ ಆದಿತ್ಯ ಪಂಚೋಲಿ, ನಟಿ ವಹಾಬ್ ಅವರ ಪುತ್ರ ಸೂರಜ್ ಪಂಚೋಲಿ. ಜಿಯಾ ಖಾನ್ ಜೊತೆ ಅತ್ಯಂತ ಆಪ್ತ ಗೆಳೆತನ ಹೊಂದಿದ್ದ ಕೆಲವೇ ಗೆಳೆಯರಲ್ಲಿ ಈತನೂ ಒಬ್ಬ.

  ಆದರೆ, ಈತನೇ ಆಕೆ ಸಾವಿಗೆ ಕಾರಣ ಎನ್ನಲು ಸ್ಪಷ್ಟವಾದ ಸಾಕ್ಷಿ ಸಿಕ್ಕಿಲ್ಲ. ಆದರೆ...

  ಎಸ್ ಎಂಎಸ್ ಗಳಲ್ಲಿ ಏನಿತ್ತು?

  ಪೊಲೀಸರ ಪ್ರಕಾರ, ಮೊದಲಿಗೆ ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಂಡ ಸಮಯ ತಿಳಿಯಬೇಕಿದೆ. ಸೋಮವಾರ ರಾತ್ರಿ ಸೂರಜ್ ಹಾಗೂ ಜಿಯಾ ನಡುವೆ ಮೊಬೈಲ್ ಸಂದೇಶ ಹರಿದಾಡಿದೆ.

  ಎಸ್ ಎಂಎಸ್, ಎಂಎಂಎಸ್ ಗಳಲ್ಲಿ ಏನಿತ್ತು? ಎಂಬುದರ ಮಾಹಿತಿ ಸಿಗಬೇಕಿದೆ. ಸಾಯುವ ಮುನ್ನ ಕೊನೆಯದಾಗಿ ಸಂಪರ್ಕಿಸಿದ್ದು ಸೂರಜ್ ರನ್ನು ಎಂಬುದು ಮಾತ್ರ ಸ್ಪಷ್ಟವಾಗಿದೆ.

  ಜೊತೆಗೆ ಸೂರಜ್ ಮತ್ತೊಬ್ಬಳು ಹುಡುಗಿ ಜೊತೆ ಸುತ್ತುವುದರ ಬಗ್ಗೆ ಜಿಯಾ ಕೇಳಿದ್ದಾಳೆ ಎನ್ನಲಾಗಿದೆ. ಇಬ್ಬರಿಗೂ ಜೋರು ಜಗಳವಾಗಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ. ಅದರೆ, ಪೊಲೀಸರು ಈ ಬಗ್ಗೆ ಸದ್ಯಕ್ಕೆ ಮಾಹಿತಿ ಇಲ್ಲ ಎಂದಿದ್ದಾರೆ.

  ಜಿಯಾ ಶ್ರದ್ಧಾಂಜಲಿ

  ಜಿಯಾಖಾನ್ ಸಾವಿನ ಸುದ್ದಿ ಕೇಳಿ ತಕ್ಷಣವೇ ಬಂದ ಗೆಳತಿ ನಟಿ ಊರ್ವಶಿ ಡೋಲಾಕಿಯಾ

  ಜಿಯಾಖಾನ್ ಗೆಳತಿಯರು

  ಜಿಯಾಖಾನ್ ಗೆಳತಿಯರು, ಕುಟುಂಬವರ್ಗ ಇನ್ನಿತರರು ಜುಹುನಲ್ಲಿರುವ ಸಾಗರ್ ನಿವಾಸದತ್ತ ಧಾವಿಸಿದ್ದಾರೆ.

  ಪೊಲೀಸರ ತನಿಖೆ ಚುರುಕು

  ತಾಯಿ ಜರೀನಾ ವಹಾಬ್ ಜೊತೆ ಮುದ್ದು ಮುಖದ ಸೂರಜ್. ಜಿಯಾ ಆತ್ಮಹತ್ಯೆ ಪ್ರಕರಣದಲ್ಲಿ ಸೂರಜ್ ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ.

  ಇಬ್ಬರ ನಡುವೆ ಪ್ರೀತಿ ಪ್ರೇಮ ಅಥವಾ ಗಾಢವಾದ ಗೆಳೆತನ ಇರಲಿಲ್ಲ ಎಂಬುದು ಸಾಬೀತಾದರೂ ಜಿಯಾ ಸಾವಿನ ಕಾರಣ ತಿಳಿಯಲು ಸೂರಜ್ ಪೊಲೀಸರಿಗೆ ಸಹಕಾರಿಯಾಗಲಿದ್ದಾನೆ.

  English summary
  
 Bollywood actress Jiah Khan, who was just 25 year old, committed suicide last night by hanging herself from the ceiling fan of her room. It is said that she was depressed for a very long time due to personal issues. Actor Kaamal R Khan has claimed that Jiah committed suicide because of her boyfriend.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more