For Quick Alerts
  ALLOW NOTIFICATIONS  
  For Daily Alerts

  ಹೀರೋಗಳ ಹಿಂದೆ ಡ್ಯಾನ್ಸ್ ಮಾಡುತ್ತಿದ್ದ ಈ 5 ಜನ ಇಂದು 'ಸೂಪರ್ ಸ್ಟಾರ್'ಗಳು

  By Bharath Kumar
  |
  ಹೀರೋ ಹಿಂದೆ ಡಾನ್ಸ್ ಮಾಡ್ತಿದ್ದೊರೆ ಈಗ ದೊಡ್ಡ ಸ್ಟಾರ್ಸ್ | Filmibeat Kannada

  ಕೆಲವರಿಗೆ ಅದೃಷ್ಟ ಕೈ ಹಿಡಿದರೇ ನೇರವಾಗಿ ಹೀರೋ-ಹೀರೋಯಿನ್ ಆಗ್ಬಿಡ್ತಾರೆ. ಮತ್ತೆ ಕೆಲವರು ಏನೇ ಮಾಡಿದ್ರು ಯಶಸ್ಸು ಸಿಗಲ್ಲ. ಆಗ ವರ್ಷಗಳ ಕಾಲ ಶ್ರಮ ಪಡಬೇಕು. ಸಮಯ ಕೂಡಿ ಬರೋವರೆಗೂ ಕಾಯಬೇಕು.

  ಹೀಗೆ, ಪ್ರತಿಭೆ ಇದ್ದರೂ ವರ್ಷಗಳ ಕಾದು, ಕಷ್ಟಪಟ್ಟು, ಅವಕಾಶಕ್ಕಾಗಿ ಕಾಯುತ್ತಿದ್ದ ಕಲಾವಿದರು ಇಂದು ಸೂಪರ್ ಸ್ಟಾರ್ ಗಳಾಗಿದ್ದಾರೆ. ನಿಮಗೆ ಗೊತ್ತಿದೆಯೋ ಅಥವಾ ಗೊತ್ತಿಲ್ಲವೋ ಈಗ ಸೂಪರ್ ಸ್ಟಾರ್ ಗಳು ಎನಿಸಿಕೊಂಡಿರುವವರು, ಒಂದು ಕಾಲದಲ್ಲಿ ಹೀರೋಗಳ ಹಿಂದೆ ಜೂನಿಯರ್ ಡ್ಯಾನ್ಸರ್ ಗಳಾಗಿ ಕೆಲಸ ಮಾಡುತ್ತಿದ್ದರು.

  ಹೀಗೆ, ಸ್ಟಾರ್ ನಟರ ಚಿತ್ರಗಳಲ್ಲಿ ಹಾಡುಗಳಲ್ಲಿ ಕುಣಿಯುತ್ತಿದ್ದವರು, ಅಲ್ಲೊಮ್ಮೆ, ಇಲ್ಲೊಮ್ಮೆ ಕ್ಯಾಮೆರಾ ಕಣ್ಣಿಗೆ ಬೀಳುತ್ತಿದ್ದವರು ಈಗ ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್ ಗಳು. ಯಾರದು.? ಮುಂದೆ ಓದಿ.....

  ಶಾಹೀದ್ ಕಪೂರ್

  ಶಾಹೀದ್ ಕಪೂರ್

  ಬಾಲಿವುಡ್ ಡ್ಯಾನ್ಸರ್ ಗಳಲ್ಲಿ ನಟ ಶಾಹೀದ್ ಕಪೂರ್ ಕೂಡ ಪ್ರಮುಖರು. ಶಾಹೀದ್ ಡ್ಯಾನ್ಸ್ ಅಂದ್ರೆ ಅವರ ಫ್ಯಾನ್ಸ್ ಫುಲ್ ಥ್ರಿಲ್ ಆಗ್ತಾರೆ. ಸತ್ಯ ಏನಪ್ಪಾ ಅಂದ್ರೆ, ಶಾಹೀದ್ ಕಪೂರ್ ತಮ್ಮ ವೃತ್ತಿ ಜೀವನ ಆರಂಭಿಸಿರುವುದೇ ಡ್ಯಾನ್ಸರ್ ಆಗಿ. ಹೌದು, ಕರೀಷ್ಮಾ ಕಪೂರ್, ಐಶ್ವರ್ಯ ರೈ ಬಚ್ಚನ್ ಅಂತವರ ಸಿನಿಮಾದಲ್ಲಿ ಶಾಹೀದ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದಾರೆ. ಇಂದು ಅವರ ಚಿತ್ರದಲ್ಲೇ ನೂರಾರು ಡ್ಯಾನ್ಸರ್ ಗಳು ಹೆಜ್ಜೆ ಹಾಕುತ್ತಾರೆ.

  ಸುಶಾಂತ್ ಸಿಂಗ್ ರಜಪೂತ್

  ಸುಶಾಂತ್ ಸಿಂಗ್ ರಜಪೂತ್

  ಮಹೇಂದ್ರ ಸಿಂಗ್ ಧೋನಿ ಅವರ ಬಯೋಪಿಕ್ ನಲ್ಲಿ ನಟಿಸುವ ಮೂಲಕ ರಾತ್ರೋರಾತ್ರಿ ಸೂಪರ್ ಸ್ಟಾರ್ ಆದ ಸುಶಾಂತ್ ಸಿಂಗ್ ರಜಪೂತ್, ಹೀರೋ ಆಗುವ ಮೊದಲು ಶೈಮಕ್ ದವರ್ ಅವರ ಡ್ಯಾನ್ಸ್ ಟ್ರೂಪ್ ನಲ್ಲಿ ಡ್ಯಾನ್ಸರ್ ಆಗಿದ್ದರು. ಧೂಮ್ 2 ಸಿನಿಮಾ ಸೇರಿದಂತೆ ಹಲವು ಚಿತ್ರಗಳಲ್ಲಿ ಹೆಜ್ಜೆ ಹಾಕಿದ್ದರು.

  ರೆಮೋ ಡಿಸೋಜಾ

  ರೆಮೋ ಡಿಸೋಜಾ

  ಬಾಲಿವುಡ್ ನ ಖ್ಯಾತ ನಿರ್ದೇಶಕ ರೆಮೋ ಡಿಸೋಜಾ ತಮ್ಮ ವೃತ್ತಿ ಆರಂಭಿಸಿದ್ದೇ ಜೂನಿಯರ್ ಡ್ಯಾನ್ಸರ್ ಮೂಲಕ. ಜೊತೆಗೆ ಹಿಂದಿಯ ಹಲವು ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳನ್ನ ನಿಭಾಯಿಸಿದ್ದಾರೆ. ಈಗ ಬಾಲಿವುಡ್ ನ ಸ್ಟಾರ್ ಡೈರೆಕ್ಟರ್ ಜೊತೆ ನೃತ್ಯ ಸಂಯೋಜಕ ಕೂಡ ಆಗಿ ಯಶಸ್ಸು ಕಂಡಿದ್ದಾರೆ.

  ಫರಾ ಖಾನ್

  ಫರಾ ಖಾನ್

  ಹಿಂದಿ ಚಿತ್ರರಂಗದಲ್ಲಿ ಫರಾ ಖಾನ್ ಅವರು ನಿರ್ದೇಶಕಿ ಮತ್ತು ನಿರ್ಮಾಪಕಿಯಾಗಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ವಿಶೇಷ ಅಂದ್ರೆ, ಫರಾ ಖಾನ್ ಕೂಡ ಡ್ಯಾನ್ಸರ್ ಆಗಿ ತಮ್ಮ ಕರಿಯರ್ ಆರಂಭಿಸಿದ್ದರು. ನಂತರ ನಟನೆ, ನಿರ್ದೇಶನ ಹೀಗೆ ಬಹುಮುಖ ಪ್ರತಿಭೆಯಾಗಿ ಕೆಲಸ ಮಾಡಿದ್ದರು.

  ದಿಯಾ ಮಿರ್ಜಾ

  ದಿಯಾ ಮಿರ್ಜಾ

  ನಟಿ, ಮಾಡೆಲ್, ನಿರ್ಮಾಪಕಿ ದಿಯಾ ಮಿರ್ಜಾ ಅವರು ಕೂಡ ಜೂನಿಯರ್ ಡ್ಯಾನ್ಸರ್ ಆಗಿ ಕಾಣಿಸಿಕೊಂಡಿದ್ದರು. ಒಟ್ನಲ್ಲಿ, ಈ ಐದು ಜನ ಪ್ರತಿಭೆಗಳು ತಮ್ಮ ಆರಂಭದ ದಿನಗಳಲ್ಲಿ ಡ್ಯಾನ್ಸ್ ಟ್ರೂಪ್ ಗಳಲ್ಲಿ ಕೆಲಸ ಮಾಡಿದ್ದರು ಎಂಬುದು ಇವರ ಶ್ರಮದ ಬಗ್ಗೆ ಹೇಳತ್ತಿದೆ.

  English summary
  5 Bollywood Celebrities Who Started Their Career As Background Dancers like Shahid kapoor, sushant singh rajput, farah khan, remo d'souza.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X