»   » ಶ್ರೀದೇವಿ ಹಠಾತ್ ನಿಧನದ ಬಗ್ಗೆ ಸಹೋದರಿ ಶ್ರೀಲತಾ ಮೌನವಾಗಿರೋದು ಯಾಕೆ.?

ಶ್ರೀದೇವಿ ಹಠಾತ್ ನಿಧನದ ಬಗ್ಗೆ ಸಹೋದರಿ ಶ್ರೀಲತಾ ಮೌನವಾಗಿರೋದು ಯಾಕೆ.?

Posted By:
Subscribe to Filmibeat Kannada
ಶ್ರೀದೇವಿಯ ಅಕಾಲ ಸಾವಿನ ಬಗ್ಗೆ ಸಹೋದರಿ ಶ್ರೀಲತಾ ಮೌನ ಯಾಕೆ? | Filmibeat Kannada

ಶ್ರೀದೇವಿ ಇಹಲೋಕ ತ್ಯಜಿಸಿ ಎರಡು ವಾರಗಳು ಕಳೆದಿವೆ. 'ಸುರಸುಂದರಿ' ಶ್ರೀದೇವಿ ನಿಧನದ ಸುದ್ದಿ ಕೇಳಿ ಬಾಲಿವುಡ್ ಮಾತ್ರ ಅಲ್ಲ, ಇಡೀ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿದಿತ್ತು.

ಬಾಲಿವುಡ್ ಖ್ಯಾತನಾಮರು ಶ್ರೀದೇವಿಗೆ ಅಂತಿಮ ನಮನ ಸಲ್ಲಿಸಿದ್ರು. ಶೋಕತಪ್ತ ಸಾವಿರಾರು ಜನರ ನಡುವೆ ಶ್ರೀದೇವಿ ಅಂತಿಮ ಯಾತ್ರೆ ಸಾಗಿತು. ಇಷ್ಟೆಲ್ಲ ಆದರೂ, ಶ್ರೀದೇವಿ ಸಹೋದರಿಯಾದ ಶ್ರೀಲತಾ ಮಾತ್ರ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಮೌನ ಕೂಡ ಮುರಿದಿಲ್ಲ.

ಸ್ವಂತ ಸಹೋದರಿಯನ್ನ ಕಳೆದುಕೊಂಡಿರುವ ಶ್ರೀಲತಾ ಯಾವುದೇ ಮಾಧ್ಯಮದ ಮುಂದೆ ಆಗಲಿ, ಪತ್ರಿಕೆಗೆ ಆಗಲಿ ಶ್ರೀದೇವಿ ಬಗ್ಗೆ ಒಂದೇ ಒಂದು ಮಾತು ಆಡಿಲ್ಲ. ಹಾಗ್ನೋಡಿದ್ರೆ, ಶ್ರೀದೇವಿ ಸಾಯುವ ಮುನ್ನ ದುಬೈನಲ್ಲಿ ಶ್ರೀಲತಾ ಕೂಡ ಇದ್ದರಂತೆ. ಹೀಗಿದ್ದರೂ, ಶ್ರೀಲತಾ ಮಾತ್ರ ಶ್ರೀದೇವಿ ಬಗ್ಗೆ ತುಟಿಕ್ ಪಿಟಿಕ್ ಎನ್ನುತ್ತಿಲ್ಲ. ಇದಕ್ಕೆ ಕಾರಣ ಏನು.? ಮುಂದೆ ಓದಿರಿ...

ಸಾಯುವ ಮುನ್ನ ಶ್ರೀದೇವಿ ಜೊತೆ ಇದ್ರಾ ಶ್ರೀಲತಾ.?

ಕೆಲ ವರದಿಗಳ ಪ್ರಕಾರ, ಶ್ರೀದೇವಿ ಜೊತೆ ದುಬೈನಲ್ಲಿ ಶ್ರೀಲತಾ ಕೂಡ ಇದ್ದರಂತೆ. ಮೋಹಿತ್ ಮಾರ್ವಾ ಮದುವೆ ಮುಗಿದ ಬಳಿಕ, ದುಬೈನ ಹೋಟೆಲ್ ನಲ್ಲಿ ಶ್ರೀದೇವಿ ಉಳಿದುಕೊಂಡಿದ್ದರು. ಆಗ ಶ್ರೀದೇವಿ ಜೊತೆ ಶ್ರೀಲತಾ ಕೂಡ ಇದ್ದರು. ಫೆಬ್ರವರಿ 24 ರಂದು ಶ್ರೀದೇವಿ ಕೊನೆಯುಸಿರೆಳೆಯುವ ಮುನ್ನ ಶ್ರೀದೇವಿ ಜೊತೆ ಶ್ರೀಲತಾ ಕೂಡ ಕೆಲ ಸಮಯ ಕಳೆದಿದ್ದರು ಎಂದು ಕೆಲ ಪತ್ರಿಕೆಗಳು ವರದಿ ಮಾಡಿವೆ.

ಶ್ರೀದೇವಿ ಮನೆಯಲ್ಲಾದ ಹೊಸ ಬೆಳವಣಿಗೆ ಇದು.!

ಮೌನವಾಗಿರುವುದು ಯಾಕೆ.?

ಖ್ಯಾತ ದಿನ ಪತ್ರಿಕೆ ಡೆಕ್ಕನ್ ಕ್ರಾನಿಕಲ್ ವರದಿ ಮಾಡಿರುವ ಪ್ರಕಾರ, ಶ್ರೀದೇವಿ ಸಾವಿನ ಬಗ್ಗೆ ಎಲ್ಲೂ ತುಟಿ ಎರಡು ಮಾಡದಂತೆ ಶ್ರೀಲತಾ ಅವರಿಗೆ ಸೂಚನೆ ನೀಡಲಾಗಿದ್ಯಂತೆ. ಹಾಗಂತ ಕಪೂರ್ ಕುಟುಂಬದ ಮೂಲಗಳು ಡೆಕ್ಕನ್ ಕ್ರಾನಿಕಲ್ ಪತ್ರಿಕೆಗೆ ತಿಳಿಸಿವೆ.

ಶ್ರೀದೇವಿ ಅಮ್ಮನಿಗೆ ಬೋನಿ ಕಪೂರ್ ಕಂಡ್ರೆ ಆಗ್ತಿರ್ಲಿಲ್ಲ!

ಚೆನ್ನೈ ಬಂಗಲೆ ಶ್ರೀಲತಾಗೆ.?

ಶ್ರೀಲತಾ ಹಾಗೂ ಆಕೆಯ ಪತಿ ಸತೀಶ್ ಗೆ ಚೆನ್ನೈನಲ್ಲಿ ಇರುವ ಶ್ರೀದೇವಿ ಬಂಗಲೆಯ ಒಡೆತನ ನೀಡುವ ಬಗ್ಗೆಯೂ ಮಾತುಕತೆ ನಡೆದಿದೆ ಎಂದು ಕಪೂರ್ ಕುಟುಂಬದ ಮೂಲಗಳು ಡೆಕ್ಕನ್ ಕ್ರಾನಿಕಲ್ ಪತ್ರಿಕೆಗೆ ತಿಳಿಸಿವೆ.

ಒಬ್ಬಂಟಿಯಾಗಿ 3 ದಿನ ಶ್ರೀದೇವಿ ದುಬೈ ಹೋಟೆಲ್ ನಲ್ಲಿದಿದ್ದೇಕೆ? ಸ್ಫೋಟಕ ರಹಸ್ಯ ಬಹಿರಂಗ!

ಆಸ್ತಿಗಾಗಿ ಸಹೋದರಿಯರ ನಡುವೆ ಕಿತ್ತಾಟ ನಡೆದಿತ್ತು

ಆಸ್ತಿ ವಿಚಾರಕ್ಕಾಗಿ ವರ್ಷಗಳ ಹಿಂದೆ ಶ್ರೀದೇವಿ ಹಾಗೂ ಶ್ರೀಲತಾ ನಡುವೆ ಕಿತ್ತಾಟ ನಡೆದಿತ್ತು. ಆಸ್ತಿಗಾಗಿ ಶ್ರೀದೇವಿ ವಿರುದ್ಧ ಶ್ರೀಲತಾ ಕೋರ್ಟ್ ಮೆಟ್ಟಿಲೇರಿದ್ದರು. ಬಳಿಕ ಇಬ್ಬರ ನಡುವೆ ಸಂಧಾನ ಆಗಿತ್ತು. ಇತ್ತೀಚಿನ ದಿನಗಳಲ್ಲಿ ಶ್ರೀಲತಾ ಹಾಗೂ ಶ್ರೀದೇವಿ ತುಂಬಾ ಆತ್ಮೀಯವಾಗಿದ್ದರಂತೆ.

English summary
Why Srilatha has been silent about Sridevi's death.? Read the article to know the details.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada