For Quick Alerts
  ALLOW NOTIFICATIONS  
  For Daily Alerts

  ರಿಪಬ್ಲಿಕ್ ಡೇ...ಗೆ ಭಟ್ರ ಬಾಲಿವುಡ್ ಸಿನಿಮಾ ಯೋಗ

  By ಜೀವನರಸಿಕ
  |

  ಯೋಗರಾಜ್ ಭಟ್ ಈಗ ತಾವು ನಟಿಸಿರೋ ಸಿನಿಮಾ 'ದ್ಯಾವ್ರೇ' (ಡಿಸೆಂಬರ್ 6, 2013) ತೆರೆಗೆ ಬರೋ ಬಗ್ಗೆ ಕುತೂಹಲದಲ್ಲಿದ್ದಾರೆ. ಆದರೆ ಸ್ಯಾಂಡಲ್ವುಡ್ ಸಿನಿಮಾ ಮಂದಿ ಮಾತ್ರ ಭಟ್ರ ಬಾಲಿವುಡ್ ಸಿನಿಮಾ ಬಗ್ಗೆ ಯೋಚಿಸ್ತಿದ್ದಾರೆ.

  ಸದ್ಯಕ್ಕೆ ಭಟ್ರು ಬಾಂಬೆಯಲ್ಲಿ ಲೊಕೇಶನ್ ಹುಡುಕಿದ್ದಾಗಿದೆ. ಈಗ ಸ್ಕ್ರಿಪ್ಟನ್ನ ಫೈನಲ್ ಮಾಡ್ತಿದ್ದಾರೆ. ಇದಕ್ಕಾಗಿ ಯೋಗರಾಜರು ಒಂದು ಸಣ್ಣ ಟೀಂ ಕಟ್ಟಿಕೊಂಡು ಕೆಲಸ ಮಾಡ್ತಿದ್ದಾರೆ. ಸಿನಿಮಾದಲ್ಲಿ ಯಾರಿರ್ತಾರೆ, ಕಥೆ ಏನು. ಹೀರೋಯಿನ್ ಯಾರು ಅನ್ನೋದನ್ನ ಈಗಲೇ ಹೇಳೋಕೆ ಇಷ್ಟಪಡದ ಭಟ್ಟರು ಸಿನಿಮಾ ಮಾತ್ರ ಗಣರಾಜ್ಯೋತ್ಸವದ ದಿನದಿಂದ ಶುರುವಾಗಲಿದೆ ಅಂದಿದ್ದಾರೆ. [ಭಟ್ರು ಇನ್ಮುಂದೆ ಆಕ್ಟ್ ಮಾಡಲ್ಲ]

  ಕನ್ನಡದ ಸ್ಟಾರ್ ನಿರ್ದೇಶಕರೊಬ್ಬರು ಬಾಲಿವುಡ್ ನಲ್ಲಿ ಸಿನಿಮಾ ಮಾಡೋಕೆ ಹೊರಡ್ತಿರೋದಕ್ಕೆ ಗಾಂಧಿನಗರ ಶಹಬ್ಬಾಸ್ ಅಂದಿದೆ. ಏನನ್ನೂ ಹೇಳದೆ ಮೊದಲು ಪ್ರೀಪ್ರೊಡಕ್ಷನ್ ನ ಕೆಲಸವನ್ನ ಒಂದೊಂದಾಗಿ ಮುಗಿಸ್ತಿರೋ ಭಟ್ರು ಬಾಲಿವುಡ್ ಅನ್ನೋ ಬಾಂಬೆ ಮಹಾಸಾಗರದಲ್ಲಿ ಈಜೋಕೆ ಭರ್ಜರಿ ತಯಾರಿಯನ್ನೇ ನಡೆಸಿದ್ದಾರೆ.

  ಚಿತ್ರಕ್ಕೆ ಭಟ್ರು ಒಂದೆರಡು ಟೈಟಲ್ ಗಳನ್ನೂ ಸೆಲೆಕ್ಟ್ ಮಾಡಿದ್ದಾರೆ. ಒಂದು 'ಸೌಂಡ್ ಬಡಾ ದೇ' ಹಾಗೂ ಇನ್ನೊಂದು 'ಹೆಲ್ಮಟ್'. ಆದರೆ ಎರಡೂ ಟೈಟಲ್ ಗಳಲ್ಲಿ ಯಾವುದನ್ನೂ ಫೈನಲ್ ಮಾಡಿಲ್ಲ. ಪ್ರಕಾಶ್ ರೈ ಅವರಂತೂ ಚಿತ್ರದಲ್ಲಿರುತ್ತಾರೆ ಎಂಬುದನ್ನು ಭಟ್ಟರೇ ಈ ಹಿಂದೆ ಹೇಳಿದ್ದರು. ಭಟ್ರ ಸಿನಿಮಾದ ಮತ್ತಷ್ಟು ವಿಶೇಷ ಮಾಹಿತಿ ನಿಮ್ಮ ಒನ್ ಇಂಡಿಯಾದಲ್ಲಿ ಕೊಡ್ತಾನೇ ಇರ್ತೀವಿ.

  English summary
  Kannada films successful director Yograj Bhat's first Hindi film would start on Republic Day. The two working titles are not final and the film will have a completely different name.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X