»   » ಜೀ ಸಿನಿಮಾ ಅವಾರ್ಡ್ಸ್ 2014 ಪ್ರಶಸ್ತಿ ಪ್ರಕಟ

ಜೀ ಸಿನಿಮಾ ಅವಾರ್ಡ್ಸ್ 2014 ಪ್ರಶಸ್ತಿ ಪ್ರಕಟ

Posted By:
Subscribe to Filmibeat Kannada

ಬಾಲಿವುಡ್ ಚಿತ್ರತಳಿಗೆ ನೀಡುವ 2014ನೇ ಸಾಲಿನ ಜೀ ಸಿನಿಮಾ ಅವಾರ್ಡ್ಸ್ ಪ್ರಕಟವಾಗಿವೆ. ಈ ಬಾರಿಯ ಪ್ರಶಸ್ತಿಗಳನ್ನು ಬಾದ್ ಶಾ ಶಾರುಖ್ ಖಾನ್ ಅವರು ಪ್ರಕಟಿಸಿದರು. ಚೆನ್ನೈ ಎಕ್ಸ್ ಪ್ರೆಸ್ ಚಿತ್ರ 15 ವಿಭಾಗಗಳಲ್ಲಿ ನಾಮಿನೇಟ್ ಆಗಿದೆ.

ಅದೇ ರೀತಿ ಭಾಗ್ ಮಿಲ್ಕಾ ಭಾಗ್ ಚಿತ್ರ 11 ವಿಭಾಗಗಳಲ್ಲಿ ನಾಮಿನೇಟ್ ಆಗುವ ಮೂಲಕ ಈ ಎರಡೂ ಚಿತ್ರಗಳು ಅತ್ಯಧಿಕ ವಿಭಾಗಗಳಲ್ಲಿ ಆಯ್ಕೆಯಾದ ಚಿತ್ರಗಳಾಗಿವೆ. ನಿರೀಕ್ಷೆಯಂತೆ ಭಾಗ್ ಮಿಲ್ಕಾ ಭಾಗ್, ರಾಮ್ ಲೀಲಾ, ಚೆನ್ನೈ ಎಕ್ಸ್ ಪ್ರೆಸ್ ಹಾಗೂ ಆಷಿಕಿ 2 ಚಿತ್ರಗಳು ಅತ್ಯಧಿಕ ಪ್ರಶಸ್ತಿಗಳನ್ನು ಬಾಚಿಕೊಂಡಿವೆ.

Zee Cine Awards 2014

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ ಹಾಗೂ ಅತ್ಯುತ್ತಮ ನಟಿ ಪ್ರಶಸ್ತಿಗಳನ್ನು ಸದ್ಯಕ್ಕೆ ಗೋಪ್ಯವಾಗಿಡಲಾಗಿದೆ. ಜೀ ವಾಹಿನಿಯಲ್ಲಿ ಪ್ರಸಾರವಾಗುವ ದಿನ ಈ ಪ್ರಶಸ್ತಿಗಳ ವಿವರಗಳನ್ನು ಬಹಿರಂಗಪಡಿಸಲಾಗುತ್ತದೆ. ಈಗ ಪ್ರಕಟವಾಗಿರುವ ಚಲನಚಿತ್ರ ಪ್ರಶಸ್ತಿ ವಿವರಗಳು ಇಲ್ಲಿವೆ.

- ಅತ್ಯುತ್ತಮ ಕಥೆ - ಕೈ ಪೋ ಚೇ
- ಉಮೀದ್ ಕಾ ನಯಾ ಚಹರಾ ಪುರುಷ ಪ್ರಶಸ್ತಿ - ವಿದ್ಯುತ್ ಜಮ್ ಆಲ್
- ಅತ್ಯುತ್ತಮ ಹಿನ್ನೆಲೆ ಗಾಯಕ - ಅರ್ಜಿತ್ ಸಿಂಗ್ (ತುಮ್ ಹಿ ಹೋ)
- ಅತ್ಯುತ್ತಮ ಹಿನ್ನೆಲೆ ಗಾಯಕಿ - ಶ್ರೇಯಾ ಘೋಷಾಲ್ (ಆಷಿಕಿ)
- ಅತ್ಯುತ್ತಮ ಸಾಹಿತ್ಯ - ಮಿಥುನ್ (ಆಷಿಕಿ 2)
- ಅತ್ಯುತ್ತಮ ಹಿನ್ನೆಲೆ ಸಂಗೀತ - ಪ್ರೀತಂ (ಹೇಹ್ ಜವಾನಿ ಹೈ ದೀವಾನಿ)
- ವರ್ಷದ ಅತ್ಯುತ್ತಮ ಮಾರುಕಟ್ಟೆ ಚಿತ್ರ - ಚೆನ್ನೈ ಎಕ್ಸ್ ಪ್ರೆಸ್
- ವರ್ಷದ ಅತ್ಯುತ್ತಮ ಹಾಡು - ತುಮ್ ಹೊ (ಆಷಿಕಿ 2)
- ಅತ್ಯುತ್ತಮ ನೃತ್ಯ ಸಂಯೋಜನೆ - ರೆಮೋ ಡಿಸೋಜಾ (ಹೇಹ್ ಜವಾನಿ ಹೈ ದೀವಾನಿ)
- ಅತ್ಯುತ್ತಮ ಆಕ್ಷನ್ - ಧೂಮ್ 3
- ಅತ್ಯುತ್ತಮ ಚೊಚ್ಚಲ ನಿರ್ದೇಶನ - ರಿತೇಶ್ ಬಾತ್ರ (ದಿ ಲಂಚ್ ಬಾಕ್ಸ್)
- ಅತ್ಯುತ್ತಮ ಧ್ವನಿ ವಿನ್ಯಾಸ - ಮದ್ರಾಸ್ ಕೆಫೆ
- ಅತ್ಯುತ್ತಮ ವಿಶುಯಲ್ ಎಫೆಕ್ಟ್ - ರೆಡ್ ಚಿಲ್ಲೀಸ್ (ಕ್ರಿಷ್ 3)

English summary
The Zee Cine Awards 2014 took place in the evening of February 8, 2014. The who's who of the film industry turned up for the award hosted by baadshah Shahrukh Khan. It was a memorable evening with performances by stars like.
Please Wait while comments are loading...