twitter
    Celebs»Abhijit»Biography

    ಅಭಿಜಿತ್ ಜೀವನಚರಿತ್ರೆ

    ಅಭಿಜಿತ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ, ಗಾಯಕ, ನಿರ್ಮಾಪಕ ಮತ್ತು ನಿರ್ದೇಶಕ. 80 ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿದ ಇವರು ನಾಯಕನಾಗಿ, ಖಳನಾಯಕನಾಗಿ ಮತ್ತು ಪೋಷಕ ನಟನಾಗಿ ನೂರೈವತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

    1963 ಜುಲೈ 30 ರಂದು ಚಿತ್ರದುರ್ಗದ ಚಳ್ಳಿಕೆರೆಯಲ್ಲಿ ಜನಿಸಿದರು. ತಂದೆ ಮಾಧವರಾವ್ ಮತ್ತು ತಾಯಿ ನಂಜಮ್ಮ. ಬಾಲ್ಯದ ಹೆಸರು ರಾಮಸ್ವಾಮಿ. ಶಾಲಾದಿನಗಳಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.ಬೆಳೆದ ಮೇಲೆ ಊರು ತೊರೆದು ಬೆಂಗಳೂರಿಗೆ ಉದ್ಯೋಗ ಅರಸಿ ಬಂದರು. ಹಲವು ನಿರ್ದೇಶಕರ ಬಳಿ ಅವಕಾಶಕ್ಕಾಗಿ ಸುತ್ತಾಡಿದ ಮೇಲೆ `ಸಂಸಾರದ ಗುಟ್ಟು',` ಶಾಂತಿ ನಿವಾಸ',` ಜನ ನಾಯಕ' ಮುಂತಾದ ಚಿತ್ರಗಳಲ್ಲಿ ಪೋಷಕ ನಟನಾಗಿ ನಟಿಸಿದರು.

    1990 ರಲ್ಲಿ ತೆರೆಕಂಡ ಕಾಲೇಜ್ ಹೀರೋ ಮತ್ತು ತದನಂತರ ತೆರೆಕಂಡ ಚೈತ್ರದ ಪ್ರೇಮಾಂಜಲಿ ಚಿತ್ರದಲ್ಲಿ ಖಳನಾಯಕನಾಗಿ ಮಿಂಚಿದರು. 1993 ರಲ್ಲಿ ತೆರೆಕಂಡ `ರಂಜಿತಾ' ಚಿತ್ರದಿಂದ ನಾಯಕನಾಗಿ ನಟಿಸಲಾರಂಭಿಸಿದರು. ನಾಯಕನಾಗಿ ಯಶಸ್ವಿ ಆದ ಮೇಲೆ ಹಲವು ಚಿತ್ರಗಳಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಯಜಮಾನ ಚಿತ್ರದಲ್ಲಿ ವಿಷ್ಣುವರ್ಧನ್ ರವರ ಸಹೋದರನಾಗಿ ನಟಿಸಿದ ಪಾತ್ರ ತುಂಬಾ ಮೆಚ್ಚುಗೆ ಪಡೆದರು.

    2005 ರಲ್ಲಿ ಸಮರ ಸಿಂಹ ನಾಯಕ ಎಂಬ ಚಿತ್ರವನ್ನು ನಿರ್ಮಾಣ ಮಾಡಿದರು. ಆದರೆ ಚಿತ್ರ ಯಶಸ್ವಿಯಾಗಲಿಲ್ಲ. ನಂತರ 2009 ರಲ್ಲಿ ರಾಮಕುಮಾರ್ ನಾಯಕನಾಗಿ ನಟಿಸಿದ `ಜೋಡಿ ನಂ 1' ಚಿತ್ರಕ್ಕೆ ಕಥೆ ಬರೆದು ನಿರ್ದೇಶಿಸಿ ನಿರ್ಮಾಣ ಮಾಡಿದರು.

    ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಪ್ರಸಿದ್ಧ ಅಕ್ಷರಮಾಲೆ ಎಂಬ ಗಾಯನ ಸ್ಫರ್ಧೆಯ ನಿರೂಪಕರಾಗಿ ಹನ್ನೆರೆಡು ವರ್ಷಗಳ ಕಾಲ ಕಾರ್ಯಕ್ರಮ ನೆಡೆಸಿ ಕೊಟ್ಟರು. ಇವರ ಸಹ ನಿರೂಪಕರಾಗಿ ಸಂಗೀತಾ ರವಿಶಂಕರ್ ನಿರೂಪಿಸುತ್ತಿದ್ದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X