ಅಚ್ಯುತ್ ಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನಿತ್ವ ನಟ. ತಮ್ಮ ಕಲಾತ್ಮಕ ನಟನೆಯಿಂದ ಹತ್ತು ಹಲವು ಪಾತ್ರಗಳಿಗೆ ಜೀವ ತುಂಬಿರುವ ಇವರು ಕನ್ನಡ ಬಹುಬೇಡಿಕೆಯ ಕಲಾವಿದ. ತಮ್ಮ ಅಭೂತಪೂರ್ವ ನಟನೆಗಾಗಿ ಎರಡು ಬಾರಿ ರಾಜ್ಯ ಪ್ರಶಸ್ತಿ ಮತ್ತು ಮೂರು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿ ಪಡೆದಿದ್ದಾರೆ. 1966ಲ್ಲಿ ತುಮುಕೂರು ಜಿಲ್ಲೆಯ ತಿಪಟೂರಿನಲ್ಲಿ ಜನಿಸಿದ ಇವರು, ಅಭಿನಯದ ಮೇಲಿನ ಆಸಕ್ತಿಯಿಂದಾಗಿ ಶಿವಮೊಗ್ಗದ ಸಾಗರ ತಾಲೂಕಿನಲ್ಲಿರುವ ನೀನಾಸಂ ಸೇರಿದರು.
ಅಚ್ಯುತ್ ಕುಮಾರ್‌ರವರಿಗೆ ಸಂದ ಪ್ರಶಸ್ತಿಗಳು
ಕಿರುತೆರೆ
ರಂಗಭೂಮಿಯಲ್ಲಿ ಸಕ್ರಿಯರಾಗಿದ್ದಾಗಲೇ ಗಿರೀಶ್ ಕಾಸರವಳ್ಳಿ ಅವರ ಎಸ್.ಎಲ್.ಬೈರಪ್ಪನವರ ಕಾದಂಬರಿ ಆಧಾರಿತ ಧಾರಾ 'ಗೃಹಭಂಗ' ಎಂಬ ಧಾರಾವಾಹಿಯಲ್ಲಿ ನಟಿಸಿದರು. ನಂತರ ಮೂಡಲ ಮನೆ, ಪ್ರೀತಿ ಇಲ್ಲದ ಮೇಲೆ' ಮುಂತಾದ ಸೀರಿಯಲ್‌ಗಳಲ್ಲಿ ನಟಸಿ ತಮ್ಮ ಅಭಿನಯ ಫ್ರೌಡಿಮೆ ಮೆರೆದರು.
ಸಿನಿಮಾರಂಗ
ಮೌನಿ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು, ನಂತರ ಹುಚ್ಚನ ಮದುವೇಲಿ ಉಂಡವನೆ ಜಾಣ, ಬಿಸಿಬಿಸಿ, ಬಿಂಬ ಮುಂತಾದ ಚಿತ್ರಗಳಲ್ಲಿ ನಟಿಸಿದರು. 2007ರಲ್ಲಿ ತೆರೆಕಂಡ 'ಆ ದಿನಗಳು' ಚಿತ್ರದ ಆಯಿಲ್ ಕುಮಾರ್ ಪಾತ್ರ ಇವರಿಗೆ ಸ್ವಲ್ಪಮಟ್ಟಿನ ಜನಪ್ರಿಯತೆ ತಂದುಕೊಟ್ಟಿತು. ಬಳಿಕ ಮೊಗ್ಗಿನ ಮನಸು, ಜೋಶ್, ನಾನು ನನ್ನ ಕನಸು, ಮನಸಾರೆ, ರಾಜಧಾನಿ, ಲೈಫು ಇಷ್ಟೇನೆ, ಸಿದ್ಲಿಂಗು, ಡ್ರಾಮಾ ಸೇರಿದಂತೆ ಮುಂತಾದ ವೈವಿಧ್ಯ ಚಿತ್ರಗಳಲ್ಲಿ ನಟಿಸಿದರು.
2013ರಲ್ಲಿ ತೆರೆಕಂಡ `ಲೂಸಿಯಾ' ಚಿತ್ರ ಇವರಿಗೆ ಸಾಕಷ್ಟು ಖ್ಯಾತಿ ತಂದು ಕೊಟ್ಟಿತು. ಈ ಚಿತ್ರದ ನಟನೆಗಾಗಿ ಫಿಲ್ಮಫೇರ್ ಪ್ರಶಸ್ತಿ ಕೂಡ ಪಡೆದಿದ್ದಾರೆ. 2011ರಿಂದ ತಮಿಳು ಚಿತ್ರಗಳಲ್ಲಿ ನಟಿಸಲು ಆರಂಭಿಸಿದ ಇವರು, ಕೆಲ ತೆಲುಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ.