X
ಹೋಮ್ » ಸೆಲಬ್ರಿಟಿಗಳು » ಅಂಬಿಕಾ » ಜೀವನ ಚರಿತ್ರೆ
ಅಂಬಿಕಾ
Actress/Actor

ಅಂಬಿಕಾ ಜೀವನ ಚರಿತ್ರೆ

ಕನ್ನಡ,ತೆಲಗು,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ನಟಿಸಿ ಚತುರ್ಭಾಷಾ ತಾರೆಯಾಗಿ ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಚಿತ್ರರಂಗವನ್ನು ಆಳಿದ ನಟಿ ಅಂಬಿಕಾ. 1969 ರಲ್ಲಿ ಕೇರಳದ ತಿರುವನಂತಪುರಂದಲ್ಲಿ ಕುಂಜನ್ ನಾಯರ್ ಮತ್ತು ಸರಸಮ್ಮ ದಂಪತಿಗಳಿಗೆ ಜನಿಸಿದರು. ಇವರ ಕಿರಿಯ ಸಹೋದರಿ ರಾಧಾ ಕೂಡ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹೆಚ್ಚು ಪರಿಚಿತರು.

ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದರೂ ಪೂರ್ಣಪ್ರಮಾಣದ ನಾಯಕಿಯಾಗಿದ್ದು 1980 ರಲ್ಲಿ ತೆರೆಕಂಡ ಮಲಯಾಳಂ ಚಿತ್ರ `ಸೀತಾ'ದಿಂದ. ನಂತರ ಕೆಲವೇ ವರ್ಷಗಳಲ್ಲಿ ಅಂಬಿಕಾ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಬಹುಬೇಡಿಕೆಯ ನಟಿಯಾಗಿಬಿಟ್ಟರು. ದಕ್ಷಿಣ ಚಿತ್ರರಂಗದ ದಿಗ್ಗಜರಾದ`ಡಾ.ರಾಜಕುಮಾರ್,ವಿಷ್ಣುವರ್ಧನ್,ಅಂಬರೀಶ್,ರಜನಿಕಾಂತ್,ಮೋಹನಲಾಲ್,ಮಮ್ಮೂಟಿ,ವಿಜಯಕಾಂತ್ ಮುಂತಾದವರ ಜೊತೆ ನಟಿಸಿ ಮೆಚ್ಚುಗೆ ಪಡೆದರು.

`ಚಕ್ರವ್ಯೂಹ' ಚಿತ್ರದಲ್ಲಿ ಅಂಬರೀಶ್ ಜೊತೆ ಹೆಜ್ಜೆ ಹಾಕಿದ `ಚಳಿ ಚಳಿ ತಾಳೆನು' ಹಾಡು ಇಂದಿಗೂ ರಸಿಕರಿಗೆ ಪ್ರಿಯವಾಗಿದೆ.

1988 ರಲ್ಲಿ ಅನಿವಾಸಿ ಭಾರತೀಯ ಶೀನು ಜಾನ್ ಎಂಬುವವರ ಜೊತೆ ಮದುವೆಯಾಗಿ ಅಮೇರಿಕಾಗೆ ಹೋದರು. ಓಂದು ದಶಕದ ದಾಂಪತ್ಯದ ನಂತರ 1998 ರಲ್ಲಿ ವಿಚ್ಚೇದನ ನೀಡಿ ಭಾರತಕ್ಕೆ ಬಂದ ಇವರು ಮತ್ತೆ ಚಿತ್ರಗಳಲ್ಲಿ ನಟಿಸತೊಡಗಿದರು. 2000 ರಲ್ಲಿ ನಟ ರವಿಕಾಂತ್ ಜೊತೆ ಮದೆವೆಯಾದರೂ ಮುಂದೆ ಎರಡು ವರ್ಷಗಳಲ್ಲಿ ವಿಚ್ಚೇದನ ಪಡೆದರು. ಪ್ರಸ್ತುತ ತಮ್ಮ ಪುತ್ರರೊಂದಿಗೆ ಚೈನ್ನೈನಲ್ಲಿ ವಾಸವಾಗಿದ್ದಾರೆ.

ಕಿರುತೆರೆಯಲ್ಲೂ ನಟಿಸಿರುವ ಅಂಬಿಕಾ ಕನ್ನಡದಲ್ಲಿ `ಪ್ರೀತಿಯಿಂದ' ಎಂಬ ಧಾರಾವಾಹಿಯಲ್ಲಿ `ಅಮ್ಮಾಜಿ' ಪಾತ್ರದಿಂದ ಮಿಂಚಿದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+