ಅನುರಾಧಾ ಶ್ರೀರಾಮ್ ಕರ್ನಾಟಕ ಸಂಗೀತಗಾರ್ತಿ ಮತ್ತು ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ಹಿನ್ನಲೆ ಗಾಯಕಿ. ತಮಿಳುನಾಡು ಮೂಲದ ಇವರು ಹೆಚ್ಚಾಗಿ ತಮಿಳು ಮತ್ತು ಹಿಂದಿ ಚಿತ್ರಗಳ ಗೀತೆಗಳನ್ನು ಹಾಡಿದ್ದಾರೆ.
ವೈಯಕ್ತಿಕ ಜೀವನ
ಅನುರಾಧಾ ಹಿನ್ನಲೆ ಗಾಯಕಿ ರೇಣುಕಾ ದೇವಿಯವರ ಪುತ್ರಿಯಾಗಿ 1970 ರಲ್ಲಿ ಚೈನ್ನೈನಲ್ಲಿ ಜನಿಸಿದರು. ಚೈನ್ನೈನ ಕ್ವೀನ್ ಮೇರಿ ಕಾಲೇಜಿನಿಂದ ಸಂಗೀತದಲ್ಲಿ ಪದವಿ ಪಡೆದರು. ಪಂಡಿತ ಕಲ್ಯಾಣರಾಮ್‌ರಿಂದ ಕರ್ನಾಟಕ ಸಂಗೀತ ಮತ್ತು ಮಾಣಿಕ್ ಬುವಾ ಠಾಕೂರ್ ದಾಸರಿಂದ ಹಿಂದೂಸ್ಥಾನಿ ಸಂಗೀತದಲ್ಲಿ ತರಬೇತಿ ಪಡೆದರು.
ಇವರು ಸಂಗೀತದಲ್ಲಿ ಹೆಚ್ಚಿನ ಅಧ್ಯಯನವನ್ನು ಅಮೇರಿಕಾದ ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿದರು. ಇವರು ಗಾಯಕ ಶ್ರೀರಾಮ್ ಪರುಶುರಾಮ್‌ರವರನ್ನು ಮದುವೆಯಾಗಿದ್ದಾರೆ.
ಸಂಗೀತ ಪಯಣ
ಅನುರಾಧಾ ಎ.ಆರ್.ರೆಹಮಾನ್ ರವರ ತಮಿಳು ಚಿತ್ರದಿಂದ ಹಿನ್ನಲೆಗಾಯಕಿಯಾಗಿ ಸಿನಿರಂಗ ಪ್ರವೇಶಿಸಿದರು. ಇವರು ಜಗತ್ತಿನಾದ್ಯಂತ ಸಾವಿರಕ್ಕೂ ಹೆಚ್ಚು ಕರ್ನಾಟಕ ಸಂಗೀತ ಸಭೆಗಳಲ್ಲಿ ಹಾಡಿದ್ದಾರೆ. ಜನಪದ ಸಂಗೀತದಲ್ಲಿ ಆಸಕ್ತಿಯಿರುವ ಇವರು ತಮ್ಮ ಪತಿ ಶ್ರೀರಾಮ್‌ರ ಜೊತೆ ಸೇರಿ ಹಲವು `ಜುಗಲ್-ಬುಂಧಿ' ಕಾರ್ಯಕ್ರಮಗಳನ್ನು ನೆಡೆಸಿಕೊಟ್ಟಿದ್ದಾರೆ.