ಅಶೋಕ ಮಹಾರುದ್ರಪ್ಪ ಖೇಣಿ ಪ್ರಖ್ಯಾತ ಉದ್ಯಮಿ,ರಾಜಕಾರಣಿ,ಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ. ಇವರು ಕರ್ನಾಟಕ ಬುಲ್ಡೋಜರ್ ಕ್ರಿಕೆಟ್ ಟೀಮ್ ನ ಒಡೆತನ ಹೊಂದಿದ್ದಾರೆ. ನಂದಿ ಇನಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‍ಪ್ರೈಸಸ್ (NICE) ನ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
1950 ರಲ್ಲಿ ಬೀದರ್‌ನಲ್ಲಿ ಜನಸಿದರು. ಇವರು NIT ಸೂರತ್ಕಲ್‌ನಲ್ಲಿ ಎಲೆಕ್ಟ್ರಿಕಲ್ ಇಂಜಿನೀಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಇವರು ಬೀದರ್‌ನ ವಿಧಾನಸಭೆ ಶಾಸಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.