ಅಶ್ವಿಥಿ ಶೆಟ್ಟಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ತಂದೆ ಯತಿರಾಜ್ ಶೆಟ್ಟಿ ಮತ್ತು ತಾಯಿ ನಂದಾ ಶೆಟ್ಟಿ. ಮೂಲತಃ ಮಂಗಳೂರಿನರಾದ ಇವರು 1990ರ ಸೆಪ್ಟಂಬರ್ 01ರಂದು ಜನಿಸಿದರು. ಇವರ ಸಹೋದರಿ ಅದ್ವಿತಿ ಶೆಟ್ಟಿ.
ಮಣಿಪಾಲ್ ಇನ್‌ಸ್ಟಿಟ್ಯೂಟ್ನಲ್ಲಿ ಎಂಬಿಎ ಓದಿರುವ ಇವರು, ಸಿನಿಮಾರಂಗಕ್ಕೂ ಬರುವ ಮುನ್ನ ಕಂಪನಿಯೊಂದರಲ್ಲಿ ಹೆಚ್‌ಆರ್ ಆಗಿ ಕೆಲಸ ಮಾಡುತ್ತಿದ್ದರು. ಜೊತೆಗೆ ಡ್ಯಾನ್ಸರ್ ಆಗಿರುವ ಇವರು, ಹಲವಾರು ಡ್ಯಾನ್ಸ್ ಶೋಗಳನ್ನು ನೀಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲೂ ಕೂಡ ಸಕ್ರಿಯವಾಗಿದ್ದು, ಮಿಸ್ ಬಂಟ್ ಬೆಂಗಳೂರು, ಮಿಸ್ ಮಂಗಳೂರು ಬ್ಯೂಟಿ ಹೇರ್ ಮುಂತಾದ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದಾರೆ.
ವೃತ್ತಿಜೀವನ
ಅಶ್ವಿಥಿ 2014ರಲ್ಲಿ ತೆರೆಕಂಡ ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಚಿತ್ರದಲ್ಲಿ ರಾಧಿಕಾ ಗೆಳೆತಿಯಾಗಿ ನಟಿಸುವ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು. ಆನಂತರ ಸುಳಿ ಎಂಬ ಚಿತ್ರದಲ್ಲಿ ಕೂಡ ಇಬ್ಬರು ಅಭಿನಯಿಸಿದರು.