ಅಶ್ವಿನ್ ಹಾಸನ್ ಕನ್ನಡ ಚಿತ್ರರಂಗ,ಕಿರುತೆರೆ ಮತ್ತು ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟ. ಐಟಿ ಉದ್ಯೋಗಿಯಾಗಿ ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿದ ಇವರು 2014 ರಲ್ಲಿ ಉದ್ಯೋಗ ತೊರೆದು ಪೂರ್ಣ ಪ್ರಮಾಣದ ನಟನೆಗೆ ಇಳಿದರು. 2005 ರಿಂದ ಡಾ. ಬಿ.ವಿ.ರಾಜಾರಾಮ್ ನೇತೃತ್ವದ `ಕಲಾಗಂಗೋತ್ರಿ' ತಂಡದಲ್ಲಿ ಸಕ್ರಿಯವಾಗಿರುವ ಇವರು ಹಲವಾರು ನಾಟಕ ಪ್ರದರ್ಶನ ನೀಡಿದ್ದಾರೆ.ನಂತರ ಕಿರುತೆರೆಗೆ ಬಂದ ಇವರು ಕೆಲವು ಸೀರಿಯಲ್‌ಗಳಲ್ಲಿ ಭಾಗವಹಿಸಿದ್ದಾರೆ. ಕಿರುತರೆಯಲ್ಲಿ ನಟನೆ ಮಾತ್ರವಲ್ಲದೇ ಧಾರಾವಹಿಗಳ ಸಂಭಾಷಣೆ ಬರೆಯುವಲ್ಲಿಯೂ ನಿರತರಾಗಿದ್ದಾರೆ.
`ಜಗ್ಗು ದಾದಾ',`ಹೆಬ್ಬುಲಿ,`ರಾಜಕುಮಾರ' ಮುಂತಾದ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.