ಬಿ.ಎಸ್.ಅವಿನಾಶ್ ಜೀವನಚರಿತ್ರೆ

    ಬಿ.ಎಸ್.ಅವಿನಾಶ್ ಕನ್ನಡ ಚಿತ್ರರಂಗದಲದಲ್ಲಿ ಸಕ್ರಿಯವಾಗಿರುವ ನಟ. ಮೂಲತಃ ಉದ್ಯಮಿಯಾಗಿರುವ ಇವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ `ಬಾರ್ ಆಂಡ್ ರೆಸ್ಟೊರೆಂಟ್' ಒಂದನ್ನು ನೆಡೆಸುತ್ತಿದ್ದಾರೆ. ತಮ್ಮ ಉದ್ಯಮದಲ್ಲಿ ಚೆನ್ನಾಗಿ ಮುನ್ನಡೆಯುತ್ತಿದ್ದರೂ ಸಿನಿಮಾಗಳಲ್ಲಿ ನಟಿಸಬೇಕು ಎಂದು ಬಲವಾದ ಆಸೆಯಿತ್ತು.
    ಒಂದು ಸಲ ಜಿಮ್‌ನಲ್ಲಿ ತಮ್ಮ ಸ್ನೇಹಿತನ ಮುಖಾಂತರ ಚಿರಂಜೀವಿ ಸರ್ಜಾರನ್ನು ಭೇಟಿ ಮಾಡುತ್ತಾರೆ.ಇವರ ಮೂಲಕ ಇಂಡಸ್ಟ್ರಿಯ ಕೆಲವು ವ್ಯಕ್ತಿಗಳ ಪರಿಚಯವಾಗುತ್ತದೆ. ಟಿ.ಎಸ್.ನಾಗಾಭರಣರವರ ಪುತ್ರ ಪನ್ನಾಗಭರಣರವರನ್ನು ಭೇಟಿ ಮಾಡಿದ ನಂತರ ಕೆಲವು ನಟನಾ ತರಬೇತಿಗಳಲ್ಲಿ ಭಾಗವಹಿಸುತ್ತಾರೆ. ಪನ್ನಾಗಭರಣರವರು ತಮ್ಮ ತಂದೆಯ ಚಿತ್ರ ಡಾಲಿ ಧನಂಜಯ ಅಭಿನಯದ `ಅಲ್ಲಮ'ದಲ್ಲಿ ಒಂದು ಪಾತ್ರಕ್ಕೆ ಇವರ ಹೆಸರನ್ನು ಸೂಚಿಸುತ್ತಾರೆ. ಅಲ್ಲಮ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದರೂ ಅವಕಾಶಗಳು ಅಷ್ಟಾಗಿ ಬರಲಿಲ್ಲ. ನಂತರ ಪನ್ನಾಗಭರಣರ ಮೂಲಕವೇ ಸಿನಿಮಾಟೋಗ್ರಾಫರ್ ಭುವನಗೌಡರ ಪರಿಚಯವಾಗುತ್ತದೆ. ತಮ್ಮ ಅಭಿನಯದ ಆಸಕ್ತಿಯನ್ನು ಭುವನ್‌ಗೆ ತಿಳಿಸಿ ಒಂದು ಪೋಟೋಶೂಟ್ ಮಾಡಿಕೊಡಲು ಕೇಳಿಕೊಳ್ಳುತ್ತಾರೆ. ಇವರ ಪೋಟೋಶೂಟ್ ಮಾಡಿದ ಭುವನ್ ಇವರ ಫೋಟೋಗಳನ್ನು  ಪ್ರಶಾಂತ್ ನೀಲ್‌ರಿಗೆ ತೋರಿಸಿದರು. ನಂತರ ಪ್ರಶಾಂತ್ ಒಂದು ಚಿಕ್ಕ ಅಡಿಷನ್ ಮೂಲಕ ಕೆ.ಜಿ.ಎಫ್ ಚಿತ್ರದಲ್ಲಿ ಅವಕಾಶ ಕೊಟ್ಟರು.ಕೆ.ಜೆ.ಎಫ್ ಚಿತ್ರಕ್ಕಾಗಿ ಸುಮಾರು ಎರಡು ವರ್ಷಗಳ ಕಾಲ ಗಡ್ಡವನ್ನು ಬಿಟ್ಟಿದ್ದರು.ಈ ಚಿತ್ರದ ಮೂಲಕ ಅವಿನಾಶ್ ಕನ್ನಡ ಸಿನಿರಂಗಕ್ಕೆ ಖಳನಾಗಿ ಪರಿಚಯರಾದರು.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X