X
ಡೇನಿಯಲ್ ಬಾಲಾಜಿ
Actor

ಡೇನಿಯಲ್ ಬಾಲಾಜಿ ಜೀವನ ಚರಿತ್ರೆ

ಡೇನಿಯಲ್ ಬಾಲಾಜಿ ಬಹುಭಾಷಾ ನಟ. ಇವರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದರಲ್ಲಿ ಯಶ್‌ಗೆ ಸೂಪರ್‌ ಸಕ್ಸಸ್ ಕೊಟ್ಟ 'ಕಿರಾತಕ' ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಮೂಲಕ ಕರ್ನಾಟಕದಲ್ಲೂ ವಿಲನ್‌ ಪಾತ್ರಗಳ ಮೂಲಕ ಚಿರಪರಿಚಿತರಾಗಿದ್ದರು. ಇದರೊಂದಿಗೆ ಶಿವಾಜಿನಗರ, ಡವ್, ಬೆಂಗಳೂರು ಅಂಡರ್‌ವರ್ಲ್ ' ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಕನ್ನಡ ಚಿತ್ರರಂಗದ ನಂಟು
ಡೇನಿಯಲ್ ಬಾಲಾಜಿಗೂ ಕನ್ನಡ ಚಿತ್ರರಂಗಕ್ಕೂ ಒಂದು ನಂಟಿದೆ. ಇವರು ಕನ್ನಡದ ಲೆಜೆಂಡರಿ ನಟ ಸಿದ್ಧಲಿಂಗಯ್ಯ ಅವರ ಸಂಬಂಧಿ. ಹೀಗಾಗಿ, ಕನ್ನಡ ಚಿತ್ರರಂಗಕ್ಕೆ ಸಿನಿಮಾಗಳನ್ನು ಹೊರತು ಪಡಿಸಿ ಬೇರೆಯದ್ದೇ ಸಂಬಂಧವಿದೆ. 

ತಮಿಳು ಸಿನಿಮಾರಂಗ
ಡೇನಿಯಲ್ ಬಾಲಾಜಿ ಮೊದಲು ರಿಲೀಸ್ ಆಗದ ಕಮಲ್ ಹಾಸನ್ ಸಿನಿಮಾ 'ಮರುದನಾಗನ್'ನಲ್ಲಿ ಯುನಿಟ್ ಪ್ರೊಡಕ್ಷನ್ ಮ್ಯಾನೆಜರ್ ಆಗಿ ಕೆಲಸ ಮಾಡಿದ್ದರು. ಬಳಿಕ ತಮಿಳು ಧಾರಾವಾಹಿ 'ಚಿಥಿ'ಯಲ್ಲಿ ಡೇನಿಯಲ್ ಅನ್ನುವ ಪಾತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದರು. ಅಲ್ಲಿಂದ ತಮ್ಮ ಹೆಸರಿನ ಜೊತೆಗೆ ಡೇನಿಯಲ್ ಎಂದು ಹೆಸರು ಸೇರಿಸಿಕೊಂಡಿದ್ದರು. ಅಲ್ಲಿಂದ ಸುಮಾರು 40ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮಿಳು ಸಿನಿಮಾಗಳಲ್ಲಿ ಹೆಚ್ಚಾಗಿ ವಿಲನ್ ಆಗಿ ಕಾಣಿಸಿಕೊಂಡು ಜನ ಮನ್ನಣೆ ಪಡೆದಿದ್ದರು. ತಮಿಳಿನ ಚಿಥಿ, ಕಾಕ ಕಾಕ, ಪೊಲ್ಲಾದವನ್, ವೆಟ್ಟೈಯಾಡು ವಿಲಯಾಡು, ವಡಾ ಚೆನ್ನೈ ಅಂತಹ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಡೇನಿಯಲ್ ನಟಿಸಿದ್ದರು. 

ನಿಧನ: ಚೆನ್ನೈನಲ್ಲಿ ವಾಸವಿದ್ದ ಡ್ಯಾನಿಯಲ್ ಬಾಲಾಜಿಗೆ 2024ರ ಮಾರ್ಚ್ 29ರ ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಚೆನ್ನೈನ ಕೊಟ್ಟಿವಾಖಂನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಕೊನೆಯುಸಿರೆಳೆದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+