CelebsbredcrumbHarish RajbredcrumbBiography

  ಹರೀಶ್ ರಾಜ್ ಜೀವನಚರಿತ್ರೆ

  ಹರೀಶ್ ರಾಜ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ನಿರ್ದೇಶಕ. 26 ಜುಲೈ 1976 ಬೆಂಗಳೂರಿನಲ್ಲಿ ಜನಿಸಿದ ಇವರು ಬಾಲ್ಯ ವಿದ್ಯಬ್ಯಾಸವೆಲ್ಲ ಮುಗಿಸಿದ್ದೆಲ್ಲಾ ಬೆಂಗಳೂರಿನಲ್ಲಿ. ಮೂರು ಜನ ಅಕ್ಕಂದಿಯರು. ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಿಂದ ಇಂಗ್ಲೀಷ್ ನಲ್ಲಿ ಎಂಎ ಪದವಿ ಪಡೆದಿದ್ದಾರೆ.

  ಬಿಗ್ ಬಾಸ್ ಸೀಸನ್ 7 ನ ಎಲ್ಲಾ ಸ್ಪರ್ಧಿಗಳು : ಕ್ಲಿಕ್
  ಹರೀಶ್ ರಾಜ್ ಅಪರೂಪದ ಪೋಟೊಗಳು : ಕ್ಲಿಕ್

  ಹರೀಶ್ ರಾಜ್ ಧಾರಾವಾಹಿಗಳಲ್ಲಿ ಅಭಿನಯಿಸುವ ಮೂಲಕ ಸಿನಿಜೀವನ ಆರಂಭಿಸಿದರು. ಹೊಸ ಚಿಗುರು ಹಳೆ ಬೇರು (1996) ಇವರು ನಟಿಸಿದ ಮೊದಲ ಸೀರಿಯಲ್. 1998 ರಲ್ಲಿ ದೋಣಿ ಸಾಗಲಿ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗದಲ್ಲಿ ಜರ್ನಿ ಆರಂಭಿಸಿದರು. ಕನ್ನಡ ಮಾತ್ರವಲ್ಲದೇ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ದಾರಾವಾಹಿಗಳಲ್ಲಿ ಕೂಡ ಅಭಿನಯಿಸಿದ್ದಾರೆ.

  2009 ರಲ್ಲಿ ಬಿಡುಗಡೆಗೊಂಡ ಕಲಾಕಾರ್ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ ಕೂಡ ಕಾಣಿಸಿಕೊಂಡರು. ತಮ್ಮ 25 ವರ್ಷಗಳ ಸಿನಿಜೀವನದಲ್ಲಿ ಕನ್ನಡದ ಬಹುತೇಕ ನಟರೊಂದಿಗೆ ತೆರೆಹಂಚಿಕೊಂಡಿದ್ದಾರೆ. 2016 ರಲ್ಲಿ ತೆರೆಕಂಡ ಶ್ರೀ ಸತ್ಯನಾರಾಯಣ ಚಿತ್ರದಲ್ಲಿ 16 ಪಾತ್ರಗಳಲ್ಲಿ ನಟಿಸಿ ಒಂದೇ ಚಿತ್ರದಲ್ಲಿ ಅತಿ ಹೆಚ್ಚು ಪಾತ್ರಗಳಲ್ಲಿ ನಟಿಸಿದ ನಟ ಎಂದು ಲಿಮ್ಕಾ ದಾಖಲೆ ಬರೆದರು.

  2014 ರಲ್ಲಿ ಶ್ರುತಿಲೋಕೇಶ್ ಅವರ ಜೊತೆಯಲ್ಲಿ ವಿವಾಹವಾಗುತ್ತಾರೆ. ದಂಪತಿಗೆ ಸಾನು ಎಂಬ ಒಬ್ಬ ಪುತ್ರಿಯಿದ್ದಾಳೆ.

  ಬಿಗ್ ಬಾಸ್ ಕನ್ನಡ ಸೀಸನ್ 7
  ಬಿಗ್ ಬಾಸ್ ಮೊದಲಿನ ಅವತರಿಣಿಕೆಗಳಲ್ಲಿ ಆಫರ್ ಬಂದಾಗ ನಿರಾಕರಿಸಿದ್ದ ಹರೀಶ್ ರಾಜ್ ಬಿಗ್ ಬಾಸ್ ಏಳನೇ ಸೀಸನ್ ನಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು. ಬಿಗ್ ಬಾಸ್ ಮನೆಯಲ್ಲಿ 107 ದಿನಗಳ ಕಾಲ ಮನರಂಜಿಸಿದ್ದ ಹರೀಶ್ ರಾಜ್ ಫಿನಾಲೆಯ ಕೊನೆಯ ವಾರದಲ್ಲಿ ಮಿಡ್-ವೀಕ್ ಎಲಿಮಿನೇಶನ್ ಮೂಲಕ ಹೊರಬಂದರು.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X