ಇಂದ್ರಜಿತ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ದೇಶಕ,ನಿರ್ಮಾಪಕ ಮತ್ತು ಪತ್ರಕರ್ತ. ಇವರು ಕನ್ನಡದ ಖ್ಯಾತ ಪತ್ರಕರ್ತ ಮತ್ತು ಸಾಹಿತಿ ಪಿ.ಲಂಕೇಶ್‌ರವರ ಪುತ್ರರು. ಇವರು ಸಹೋದರಿ ದಿ.ಗೌರಿ ಲಂಕೇಶ್ ಪತ್ರಿಕೋದ್ಯಮಿಯಾಗಿದ್ದರು.ಇನ್ನೊಬ್ಬ ಸಹೋದರಿ ಕವಿತಾ ಲಂಕೇಶ್ ಚಿತ್ರ ನಿರ್ದೇಶಕಿಯಾಗಿ ಪ್ರಸಿದ್ಧರು.
ಶಿವಮೊಗ್ಗದಲ್ಲಿ ಜನಿಸಿದ ಇಂದ್ರಜಿತ್ ಬೆಳೆದಿದ್ದೆಲ್ಲ ಬೆಂಗಳೂರಿನಲ್ಲಿ. ಲಂಕೇಶ್‌ರ ನಿಧನದ ನಂತರ `ಲಂಕೇಶ್ ಪತ್ರಿಕೆ'ಯನ್ನು ನೆಡೆಸಿಕೊಂಡು ಹೊರಟಿರುವ ಇವರು 2002 ರಲ್ಲಿ ತೆರೆಕಂಡ `ತುಂಟಾಟ' ಚಿತ್ರದ ಮೂಲಕ ಚಿತ್ರದ ನಿರ್ದೇಶನಕ್ಕೆ ಇಳಿದರು. ನಂತರ `ಲಂಕೇಶ್ ಪತ್ರಿಕೆ',`ಮೊನಾಲಿಸಾ',`ಐಶ್ವರ್ಯ',`ಲವ್ ಯು ಅಲಿಯಾ' ಚಿತ್ರಗಳನ್ನು ನಿರ್ದೇಶಿಸಿದರು.
ಸೃಜನ್ ಲೋಕೇಶ್ ನಿರೂಪಣೆಯ `ಮಜಾ ಟಾಕೀಸ್' ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸುತ್ತಾರೆ.