twitter
    Celebs»Jayamala»Biography

    ಜಯಮಾಲಾ ಜೀವನಚರಿತ್ರೆ

    ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಮುಖ ಚಿತ್ರನಟಿ. ಗಿರಿಕನ್ಯೆ,ಶಂಕರಗುರು,ಪ್ರೇಮದ ಕಾಣಿಕೆ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ನಟಿಸದ್ದಾರೆ.

    ವೈಯಕ್ತಿಕ ಜೀವನ

    1959, ಫೆಬ್ರವರಿ 28 ರಂದು ಜಯಮಾಲಾ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು. ತಂದೆ ಓಮಯ್ಯ ,ತಾಯಿ ಕಮಲಮ್ಮ. ಇವರಿಗೆ ಒಬ್ಬ ಸಹೋದರ ಮತ್ತು ಆರು ಜನ ಸಹೋದರಿಯರಿದ್ದಾರೆ. 1963 ರಲ್ಲಿ ಇವರ ಕುಟುಂಬ ಪಣಂಬೂರು ತೊರೆದು ಚಿಕ್ಕಮಗಳೂರಿಗೆ ವರ್ಗವಾದರು. ಇವರು ಮೊದಲು ಕನ್ನಡ ನಟ ಟೈಗರ್ ಪ್ರಭಾಕರ್ ಅವರೊಂದಿಗೆ ಮದುವೆಯಾಗಿದ್ದರು.ಪ್ರಸ್ತುತ ಸಿನಿಮ್ಯಾಟೋಗ್ರಾಫರ್ `ಎಚ್.ಎಮ್.ರಾಮಚಂದ್ರ'ರವರೊಂದಿಗೆ ವಿವಾಹವಾಗಿದ್ದಾರೆ. ಇವರ ಪುತ್ರಿ ಸೌಂದರ್ಯ ಜಯಮಾಲ ಪ್ರಸ್ತುತ ಕನ್ನಡ ಚಿತ್ರರಂಗದ ಉದಯೋನ್ಮುಖ ಯುವನಟಿ.

    ಸಿನಿಜೀವನ

    ಜಯಮಾಲಾ 80ರ ದಶಕದಲ್ಲಿ ಪ್ರಮುಖ ನಾಯಕನಟಿಯಾಗಿ ಮಿಂಚಿದ್ದರು.ನಂತರ ನಿರ್ಮಾಪಕಿಯಾಗಿ ಹಲವು ಪ್ರಶಸ್ತಿ ವಿಜೇತ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡ ಮಾತ್ರವಲ್ಲದೇ,ತುಳು,ತಮಿಳು,ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಕೂಡ ನಟಿಸಿದ್ದಾರೆ.

    ಇವರು ನಿರ್ಮಿಸಿದ ಮೊದಲ ಚಿತ್ರ `ತಾಯಿ ಸಾಹೇಬ' ರಾಷ್ಟ್ರ ಪ್ರಶಸ್ತಿ ಪಡೆಯಿತು. ಈ ಚಿತ್ರದಲ್ಲಿನ ನಟನೆಗಾಗಿ ಜಯಮಾಲಾ ಸ್ಪೇಷಲ್ ಜ್ಯೂರಿ ಪ್ರಶಸ್ತಿ ಪಡೆದರು. ನಂತರ ಇವರು ನಿರ್ಮಿಸಿದ ಚಿಣ್ಣರ ಚಿತ್ರ `ತುತ್ತೂರಿ' ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆಯಿತು.

    ಇವರು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯ ಖಂಜಾಂಚಿಯಾಗಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.ಇವರು ಗ್ರಾಮೀಣ ಭಾಗದಲ್ಲಿನ ಮಹಿಳೆಯರ ಪುನರ್ವಸತಿ ಮೇಲೇ ಪ್ರಬಂಧ ಬರೆದು ಡಾಕ್ಟರೇಟ್ ಪಡೆದಿದ್ದಾರೆ. 2008 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಡಾ. ಅಬ್ಡುಲ್ ಕಲಾಂ ಇವರಿಗೆ ಡಾಕ್ಟರೇಟ್ ಪ್ರಧಾನ ಮಾಡಿದರು.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X